‘ಗ್ರಾಮಾಯಣ’ದಿಂದ ವಿಶೇಷ ವಿಡಿಯೋ ರಿಲೀಸ್​ : ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ದೀಪಾವಳಿ ಸಂಭ್ರಮ

‘ಗ್ರಾಮಾಯಣ’ ಚಿತ್ರವನ್ನು ದೇವನೂರು ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಅಪ್ಪಟ ಹಳ್ಳಿ ಸೊಗಡಿನ ಚಿತ್ರವಿದು. ಚಿಕ್ಕಮಗಳೂರು, ದೇವರಾಯಸಮುದ್ರ, ಅರಸಿಕೆರೆ, ಕಡೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಯಶಸ್ವಿನಿ ಅಂಚಲ್​ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಸ್ಟಾರ್‌ಡಮ್​ ಗಿಟ್ಟಿಸಿಕೊಂಡಿರುವ ನಟ ವಿನಯ್ ರಾಜ್​ಕುಮಾರ್. ಸದ್ಯ ‘ಪೆಪೆ’ ಹಾಗೂ ‘ಗ್ರಾಮಾಯಣ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿನಯ್​ ರಾಜ್​ಕುಮಾರ್ ಅವರ​ ತಾತ ಹುಟ್ಟಿದ ಮನೆ ಅಂದ್ರೆ ಡಾ.ರಾಜ್​ಕುಮಾರ್​ ಅವರ ಮನೆ ಗಾಜನೂರಿನಲ್ಲಿ ಬಹಳ ವಿಶೇಷವಾಗಿ ಈ ವರ್ಷ ದೀಪಾವಳಿ ಹಬ್ಬವನ್ನು ಆಚರಿಸಲಾಗಿದೆ. ಈ ಸಂಭ್ರಮದ ವಿಡಿಯೋವನ್ನು ‘ಗ್ರಾಮಾಯಣ’ ಚಿತ್ರತಂಡ ಹಂಚಿಕೊಂಡಿದೆ.ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ದೀಪಾವಳಿ ಸಂಭ್ರಮ: ‘ಗ್ರಾಮಾಯಣ’ದಿಂದ ವಿಶೇಷ ವಿಡಿಯೋ ರಿಲೀಸ್​. ವಿನಯ್​ ರಾಜ್​ಕುಮಾರ್​ ನಟನೆಯ ‘ಗ್ರಾಮಾಯಣ’ ಚಿತ್ರತಂಡ ದೀಪಾವಳಿ ಹಬ್ಬಕ್ಕೆ ವಿಶೇಷ ವಿಡಿಯೋವೊಂದನ್ನು ರಿಲೀಸ್​ ಮಾಡಿದೆ.

ಬಳಿಕ ನಟ ವಿನಯ್ ರಾಜ್​ಕುಮಾರ್ ಮಾತನಾಡಿ, “ಈಗಿನ ಯುವಕರ ದೃಷ್ಟಿಕೋನದಲ್ಲಿ ಹಳ್ಳಿ ಹೇಗೆ ಕಾಣಿಸುತ್ತದೆ ಎನ್ನುವುದೇ ‘ಗ್ರಾಮಾಯಣ’. ನಾನು ಈವರೆಗೂ ಮಾಡಿರದ ಪಾತ್ರವಿದು. ಚಂದ್ರು ಅವರು ಕಥೆ ಚೆನ್ನಾಗಿ ಮಾಡಿಕೊಟ್ಟಿದ್ದಾರೆ. ನಿರ್ಮಾಪಕರಿಗೆ ನನ್ನ ಧನ್ಯವಾದಗಳು” ಎಂದು ತಿಳಿಸಿದ್ದರು. ಸಿನಿಮಾದಲ್ಲಿ ವಿನಯ್​ ರಾಜ್​ಕುಮಾರ್​ ಅಲ್ಲದೇ, ಅಚ್ಯುತ ಕುಮಾರ್​, ಗೋಪಾಲಕೃಷ್ಣ ದೇಶಪಾಂಡೆ, ಅರುಣ್​ ಸಾಗರ್​, ಅಪರ್ಣ (ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್​ ಹೆಗಡೆ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಲಹರಿ ಫಿಲಂಸ್​ ಮನೋಹರನ್​ ಜೊತೆ ಕೆ.ಪಿ ಶ್ರೀಕಾಂತ್​ ನಿರ್ಮಾಣ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಗ್ರಾಮಾಯಣ ಟ್ರೇಲರ್​ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದು, ಸದ್ಯದಲ್ಲೇ ಸಿನಿಮಾವನ್ನು ತೆರೆಗೆ ತರುವ ಪ್ಲಾನ್​ ಚಿತ್ರತಂಡಕ್ಕಿದೆ.’ಗ್ರಾಮಾಯಣ’ ಮುಹೂರ್ತ ಸಮಾರಂಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ್ದ ನಿರ್ದೇಶಕ ದೇವನೂರು ಚಂದ್ರು, “ಗ್ರಾಮಾಯಣ, ಇದು ಗ್ರಾಮದಲ್ಲೇ ನಡೆಯುವ ಕಥೆ. ಸಿಂಪಲ್ ಸುನಿ ಅವರ ಮದುವೆ ಸಂದರ್ಭದಲ್ಲಿ ವಿನಯ್ ರಾಜ್​ಕುಮಾರ್ ಅವರನ್ನು ನಾನು ಭೇಟಿ ಮಾಡಿದ್ದೆ. ಅವರನ್ನು ನೋಡಿದ ಕೂಡಲೇ ಈ ಕಥೆಗೆ ಇವರೇ ಸೂಕ್ತ ನಾಯಕ ಅಂದುಕೊಂಡೆ. ಅವರಿಗೆ ಕಥೆ ವಿವರಿಸಿದಾಗ ಒಪ್ಪಿದರು. ನೀವು ಈವರೆಗೂ ನೋಡಿರದ ವಿನಯ್ ರಾಜ್​ಕುಮಾರ್ ಅವರನ್ನು ಈ ಚಿತ್ರದಲ್ಲಿ ನೋಡುತ್ತೀರಾ” ಎಂದು ಹೇಳಿದ್ದರು.