ವಿದೇಶಗಳಲ್ಲಿ ಉದ್ಯೋಗಾವಕಾಶ : ವಾರಣಾಸಿಯಲ್ಲಿ ದೇಶದ ಮೊದಲ ಎಡಗೈ ಚಾಲನಾ ತರಬೇತಿ ಟ್ರ್ಯಾಕ್

ವಾರಣಾಸಿ (ಉತ್ತರಪ್ರದೇಶ) : ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಡ್ರೈವಿಂಗ್ ಕುರಿತ ಆಸಕ್ತಿ ಹೆಚ್ಚಾಗಿದೆ. ಜೊತೆಗೆ ಡ್ರೈವಿಂಗ್​ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ವಿದೇಶದಲ್ಲಿ ಡ್ರೈವಿಂಗ್​ ಉದ್ಯೋಗವನ್ನು ಹೊಂದಲು ಉತ್ತರಪ್ರದೇಶದ ವಾರಣಾಸಿಯಲ್ಲಿ ದೇಶದ ಮೊದಲ ಎಡಗೈ ಚಾಲನಾ ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ.ಇಂದು ಡ್ರೈವಿಂಗ್​ ವೃತ್ತಿಯನ್ನು ಮಾಡಿಕೊಂಡು ಲಕ್ಷಾಂತರ ಯುವಕರು ಜೀವನ ಕಟ್ಟಿಕೊಂಡಿದ್ದಾರೆ.ಯುವಕರಿಗೆ ಎಡಗೈ ಚಾಲನೆ ತರಬೇತಿ ನೀಡಲು ಐಟಿಐ ಕರೌಂಡಿ ಕ್ಯಾಂಪಸ್​ನಲ್ಲಿ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತಿದೆ. ತರಬೇತಿ ಬಳಿಕ ಗಲ್ಫ್​ ದೇಶಗಳಲ್ಲಿ ಉದ್ಯೋಗ : ವಿದೇಶಗಳಲ್ಲಿ ಸಾಮಾನ್ಯವಾಗಿ ಎಡಗಡೆ […]

ಮಡಿಕೇರಿಯ ಕಾಫಿತೋಟದಲ್ಲಿ ಪುರಾತನ ಕಾಲದ ಚಿನ್ನಾಭರಣ ಪತ್ತೆ, ವಶಕ್ಕೆ ಪಡೆದ ಸರ್ಕಾರ

ಮಡಿಕೇರಿ (ಕೊಡಗು) : ಕಾಫಿ ತೋಟದ ನಡುವೆ ಇರುವ ದೇವಾಲಯದ ಆವರಣದಲ್ಲಿ ಕಾರ್ಮಿಕರು ಕೆಲಸ ಮಾಡುವ ವೇಳೆ ಪುರಾತನ ಚಿನ್ನಾಭರಣ ಮತ್ತು ನಿಧಿ ದೊರೆತಿದ್ದು, ನಿಯಮಾನುಸಾರ ಸರ್ಕಾರಕ್ಕೆ ಒಪ್ಪಿಸಲಾಗಿದೆ.ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಪುರಾತನ ಚಿನ್ನಾಭರಣ ಮತ್ತು ನಿಧಿ ಸಿಕ್ಕಿರುವ ಘಟನೆ ಕೊಡಗು ಜಿಲ್ಲೆ ಸಿದ್ದಾಪುರದ ಅಮ್ಮತಿ ಸಮೀಪದ ಮುಖ್ಯ ರಸ್ತೆಯಲ್ಲಿರುವ ಆನಂದಪುರ ಗ್ರಾಮದ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ನಡೆದಿದೆ.ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ಪುರಾತನ ಕಾಲದ ಚಿನ್ನಭರಣ ಮತ್ತು ನಿಧಿ ಪತ್ತೆಯಾಗಿದೆ. […]

ಕರ್ನಾಟಕ ಹೈಕೋರ್ಟ್‌ಗೆ ತೆಲಂಗಾಣ ನ್ಯಾಯಮೂರ್ತಿ ಸುಮಲತಾ ವರ್ಗಾವಣೆ

ಬೆಂಗಳೂರು : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ವರ್ಗಾವಣೆ ಮಾಡಿರುವುದಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಂದ್ರ ಕಶ್ಯಪ್ ಅವರು ತಿಳಿಸಿದ್ದಾರೆ. ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿ ಸಿ ಸುಮಲತಾ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಆದೇಶಿಸಿದೆ.ತೆಲಂಗಾಣ ಹೈಕೋರ್ಟ್​ ನ್ಯಾಯಮೂರ್ತಿ ಸಿ. ಸುಮಲತಾ ಅವರನ್ನು ಕರ್ನಾಟಕ ಹೈಕೋರ್ಟ್​ಗೆ ವರ್ಗಾವಣೆ ಮಾಡಲಾಗಿದೆ. ಸುಮಲತಾ ಅವರು ಸ್ನಾತಕೋತ್ತರ ಪದವಿಯಲ್ಲಿ ಸಂವಿಧಾನಾತ್ಮಕ ಕಾನೂನು ವಿಚಾರದಲ್ಲಿ ಚಿನ್ನದ […]

ನಿಗಮ ಮಂಡಳಿ ಹುದ್ದೆಗಳ ಪರೀಕ್ಷೆಗೆ ಕೆಇಎಯಿಂದ ವಸ್ತ್ರಸಂಹಿತೆ ಬಿಡುಗಡೆ

ಬೆಂಗಳೂರು: ಇತ್ತೀಚೆಗೆ ನಡೆದ ಕೆಪಿಎಸ್​ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಾಗಿದ್ದ ಗೃಹಿಣಿಯರ ಮಂಗಳಸೂತ್ರ ಹಾಗೂ ಕಾಲುಂಗುರ ತೆಗೆಸಿದ ಘಟನೆ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನವೆಂಬರ್ 18 ಮತ್ತು 19 ರಂದು ನಡೆಯಲಿರುವ ಪರೀಕ್ಷೆಗಳಿಗೆ ವಸ್ತ್ರ ಸಂಹಿತೆ ರೂಪಿಸಿದೆ. ಅದರಂತೆ ವಿವಾಹಿತ ಮಹಿಳೆಯರು ಮಾಂಗಲ್ಯ ಹಾಗೂ ಕಾಲುಂಗುರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯುವವರಿಗೆ ಈಗಾಗಲೇ ಮಾರ್ಗಸೂಚಿ ರೂಪಿಸಿದ್ದ ಹಿನ್ನೆಲೆಯಲ್ಲಿ ಈಗ ಮಂಗಳಸೂತ್ರ ಮತ್ತು ಕಾಲುಂಗುರ ಕುರಿತ ಸ್ಪಷ್ಟೀಕರಣದೊಂದಿಗೆ ಪರೀಕ್ಷಾ ವಿದ್ಯಾರ್ಥಿಗಳು […]

ಫೆ. 17ರ ವರೆಗೆ ಅವಕಾಶಕ್ಕೆ ಸಾರಿಗೆ ಇಲಾಖೆ ನಿರ್ಧಾರ: ಹೆಚ್​ಎಸ್​ಆರ್​ಪಿ ಅಳವಡಿಕೆ ಸಮಯ ವಿಸ್ತರಣೆ

ಬೆಂಗಳೂರು: 2019ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾಗಿರುವ ವಾಹನಗಳ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅತಿ ಸುರಕ್ಷಿತ ನೋಂದಣಿ ಫಲಕ (ಹೆಚ್.ಎಸ್.ಆರ್.ಪಿ) ಅಳವಡಿಕೆಗೆ ನೀಡಲಾಗಿದ್ದ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಿದ್ದು, ವಾಹನ ಸವಾರರು ತರಾತುರಿಯಿಲ್ಲದೆ ಹೆಚ್.ಎಸ್.ಆರ್.ಪಿ ಅಳವಡಿಸಿಕೊಳ್ಳಬಹುದಾಗಿದೆ.ಹೆಚ್​ಎಸ್​ಆರ್​ಪಿ ನಂಬರ್ ಪ್ಲೇಟ್​ ಅಳವಡಿಸುವಂತೆ ಆದೇಶ ಹೊರಡಿಸಿದ್ದ ರಾಜ್ಯ ಸಾರಿಗೆ ಇಲಾಖೆ ನವೆಂಬರ್​ 17ಕ್ಕೆ ಅಂತಿಮ ಗಡುವು ನೀಡಿತ್ತು. ಈ ಕುರಿತು ಮಾಹಿತಿ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿ ಹೆಚ್​ಎಸ್​ಆರ್​ಪಿ […]