ಉಡುಪಿ: ಕ್ರಿಸ್ಮಸ್‌ ಹಾಗೂ ಹೊಸ ವರ್ಷಕ್ಕೆ ವಿಶೇಷ ರೈಲು.!

ಉಡುಪಿ: ಕ್ರಿಸ್ಮಸ್‌ ಹಾಗೂ ಹೊಸ ವರ್ಷ ನಿಮಿತ್ತ ರೈಲು ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವುದರಿಂದ ಇದರ ನಿರ್ವಹಣೆಗೆ ಪಶ್ಚಿಮ ರೈಲ್ವೇ ವಿಭಾಗದ ಸಹಯೋಗದೊಂದಿಗೆ ವಡೋದರಾ ಜಂಕ್ಷನ್‌ -ಕೋಟ್ಟಾಯಂ ವಿಶೇಷ ರೈಲು ಸೇವೆಯನ್ನು ಕೊಂಕಣ ರೈಲ್ವೇ ಆರಂಭಿಸಲಿದೆ.

09124 ಸಂಖ್ಯೆಯ ವಡೋದರಾ ಜಂ. – ಕೋಟ್ಟಾಯಂ ವಿಶೇಷ ರೈಲು ಡಿ. 20, 27, ಜ.3 ಮತ್ತು ಜ.10ರಂದು ವಡೋದರಾ ಜಂಕ್ಷನ್‌ನಿಂದ ಬೆಳಗ್ಗೆ 6.05ಕ್ಕೆ ಹೊರಡಲಿದೆ. 09123 ಸಂಖ್ಯೆಯ ಕೋಟ್ಟಾಯಂ – ವಡೋದರಾ ಜಂಕ್ಷನ್‌ ವಿಶೇಷ ರೈಲು ಡಿ. 21, 28 ಮತ್ತು ಜ.4 ಮತ್ತು 11ರಂದು ರಾತ್ರಿ 11 ಗಂಟೆಗೆ ಕೋಟ್ಟಾಯಂನಿಂದ ಹೊರಡಲಿದೆ. ಕರ್ನಾಟಕದ ಕರಾವಳಿಯ ಕಾರವಾರ, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್‌ (ಬೈಂದೂರು), ಕುಂದಾಪುರ, ಉಡುಪಿ, ಸುರತ್ಕಲ್‌, ಮಂಗಳೂರು ಜಂಕ್ಷನ್‌, ಕಾಸರಗೋಡು ನಿಲ್ದಾಣದಲ್ಲಿ ಈ ರೈಲು ನಿಲುಗಡೆಯಿದೆ. ರೈಲಿನಲ್ಲಿ 21 ಬೋಗಿ ಇರಲಿದೆ ಎಂದು ಪ್ರಕಟನೆ ತಿಳಿಸಿದೆ.