ನಭದಲ್ಲೂ ಹಾರಾಡಿತು ತ್ರಿವರ್ಣಧ್ವಜ: ಭೂಮಿಯಿಂದ 30 ಕಿಲೋಮೀಟರ್ ಎತ್ತರದಲ್ಲಿ ರಾರಾಜಿಸಿತು ತಿರಂಗಾ; ಸ್ಪೇಸ್ ಕಿಡ್ಜ್ ಇಂಡಿಯಾ ಸಾಧನೆ

ನವದೆಹಲಿ: ಸ್ಪೇಸ್ ಕಿಡ್ಜ್ ಇಂಡಿಯಾವು ಸೋಮವಾರ ಸ್ವಾತಂತ್ರ್ಯ ದಿನದಂದು ಭೂಗ್ರಹದಿಂದ ಸುಮಾರು 30 ಕಿಲೋಮೀಟರ್ ಎತ್ತರದಲ್ಲಿ ಭಾರತದ ಧ್ವಜವನ್ನು ಹಾರಿಸಿತು. ಧ್ವಜವನ್ನು ಭೂಗ್ರಹದಿಂದ 1 ಲಕ್ಷದ 6 ಸಾವಿರ ಅಡಿ ಎತ್ತರಕ್ಕೆ ಬಲೂನ್‌ ಮೂಲಕ ನಭಕ್ಕೆ ಕಳುಹಿಸಲಾಯಿತು.

ಈ ಕಾರ್ಯಕ್ರಮವು ಆಜಾದಿ ಕಾ ಅಮೃತ್ ಮಹೋತ್ಸವ ಘೋಷಣೆಯ ಭಾಗವಾಗಿತ್ತು ಮತ್ತು ಐತಿಹಾಸಿಕ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಹರ್ ಘರ್ ತಿರಂಗ ಅಭಿಯಾನದಡಿಯಲ್ಲಿ ನಡೆಯಿತು. ಸ್ಪೇಸ್ ಕಿಡ್ಜ್ ಇಂಡಿಯಾ ಸಂಸ್ಥೆಯು ‘ದೇಶಕ್ಕಾಗಿ ಯುವ ವಿಜ್ಞಾನಿಗಳನ್ನು ಸೃಷ್ಟಿಸುತ್ತಿದೆ ಮತ್ತು ಗಡಿ ರಹಿತ ಪ್ರಪಂಚಕ್ಕಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದೆ.’

ಸಂಸ್ಥೆಯು ಇತ್ತೀಚೆಗೆ ಲೋ ಅರ್ಥ್ ಆರ್ಬಿಟ್‌ ನಲ್ಲಿ ಕಾರ್ಯನಿರ್ವಹಿಸುವ ಎಸ್.ಎಸ್.ಎಲ್.ವಿ ಉಪಗ್ರಹವನ್ನು ಉಡಾಯಿಸಿದೆ ಸಾಧನೆ ಮೆರೆದಿದೆ. ಸ್ವಾತಂತ್ರ್ಯದ 75 ವರ್ಷಗಳ ಕುರುಹಿಗಾಗಿ ಭಾರತದಾದ್ಯಂತ 750 ವಿದ್ಯಾರ್ಥಿನಿಯರು ಆಜಾದಿ ಸ್ಯಾಟ್ (AzadiSAT) ಅನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಎಸ್.ಎಸ್.ಎಲ್.ವಿ ಮೂಲಕ ನಿಮ್ನ ಭೂ ಕಕ್ಷೆಗೆ ಕಳುಹಿಸಿಕೊಡಲಾಗಿತ್ತು.