ಬಿಗ್ ಬುಲ್ ರಾಕೇಶ್ ಜುಂಜುನ್ವಾಲಾ ಅವರ 5 ಹೂಡಿಕೆ ತಂತ್ರಗಳು ನಿಮ್ಮನ್ನೂ ಶ್ರೀಮಂತರನ್ನಾಗಿಸಬಹುದು!!

ಷೇರು ಮಾರುಕಟ್ಟೆಯ ಅನಭಿಷಕ್ತ ದೊರೆ, ಬಿಗ್ ಬುಲ್, ಭಾರತದ ವಾರನ್ ಬಫೆಟ್ ಎಂದು ಖ್ಯಾತಿವೆತ್ತ ರಾಕೇಶ್ ಜುಂಜುನ್ವಾಲಾ ಭಾನುವಾರದಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕೆಂದು ಬಯಸುವವರಿಗೆ ರಾಕೇಶ್ ಜುಂಜುನ್ವಾಲಾ ಬಹುದೊಡ್ಡ ಪಾಠಗಳನ್ನು ಬಿಟ್ಟು ಹೋಗಿದ್ದಾರೆ. ಎಂಬತ್ತರ ದಶಕದಲ್ಲಿ ಸಣ್ಣ ಬಂಡವಾಳದಿಂದ ಪ್ರಾರಂಭಿಸಿ, ಭಾರತದ ಬೆಳವಣಿಗೆಯ ನಿರೀಕ್ಷೆಗಳ ಮೇಲೆ ಸಕಾರಾತ್ಮಕವಾಗಿ ಉಳಿಯುತ್ತಾ ತಾಳ್ಮೆ ಮತ್ತು ದೃಢತೆಯಿಂದ ಎದೆಬಿಡದ ಪರಿಶ್ರಮದಿಂದ ತನ್ನದೆನ್ನುವ ದೊಡ್ಡ ಸಾಮ್ರಾಜ್ಯವನ್ನೇ ನಿರ್ಮಿಸಿದರು. ರಾಕೇಶ್ ಜುಂಜುನ್ವಾಲಾ ಅವರಿಗೆ ಭಾರತೀಯ ಷೇರುಮಾರುಕಟ್ಟೆಯ ಮೇಲೆ ಅಗಾಧವಾದ […]

ಭಾರತವನ್ನು ವಿಶ್ವಗುರುವಾಗಿಸಲು ಎಲ್ಲರ ಶ್ರಮವೂ ಅಗತ್ಯ: ಎ.ಯೋಗೀಶ್ ಹೆಗ್ಡೆ

ನಿಟ್ಟೆ: ಇಂದಿನ ನಮ್ಮ ಉತ್ತಮ ಬದುಕಿಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವೇ ಕಾರಣವೆಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇ ರೀತಿ ಪ್ರಸ್ತುತ ದಿನಗಳಲ್ಲಿ ಪ್ರತಿನಿತ್ಯದ ನೆಮ್ಮದಿಯ ಬದುಕಿಗೆ ಕಾರಣವಾಗಿರುವ ದೇಶದ ಗಡಿ ಕಾಯುವ ಯೋಧರ ತ್ಯಾಗಬಲಿದಾನವೂ ಸ್ಮರಣೀಯವಾದುದು. ಜಾಗತಿಕ ಮಟ್ಟದಲ್ಲಿ ಭಾರತವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ನಿಟ್ಟೆ ಕ್ಯಾಂಪಸ್‌ನ ಮೈಂಟೆನೆನ್ಸ್ ಎಂಡ್ ಡೆವಲೆಪ್ಮೆಂಟ್ ನ ನಿರ್ದೇಶಕ ಎ.ಯೋಗೀಶ್ ಹೆಗ್ಡೆ ಅಭಿಪ್ರಾಯಪಟ್ಟರು. ಅವರು ಆಗಸ್ಟ್15 ರಂದು ನಿಟ್ಟೆ ಕ್ಯಾಂಪಸ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ […]

ತ್ರಿವರ್ಣದ ಬೆಳಕಿನಲ್ಲಿ ಮಿನುಗಿದ ಸ್ವಾಮಿ ವಿವೇಕಾನಂದರ ಪ್ರತಿಮೆ

ಕೋಟ: 75ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ್ ಪಾರ್ಕ್ ಟ್ರಸ್ಟ್ ನ ಅಂಗಸಂಸ್ಥೆಯಾದ ಕೋಟ, ಮೂಡುಗಿಳಿಯಾರು ಯೋಗಬನದ ಸರ್ವ ಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದಲ್ಲಿರುವ ಜಗತ್ತಿನ ಅತಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ತ್ರಿವರ್ಣ ಸೊಬಗಿನಿಂದ ಅಲಂಕರಿಸಲಾಯಿತು.

ಸುನಾಗ್ ಆರ್ಥೋ ಕೇರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಸುನಾಗ್ ಆರ್ಥೋ ಕೇರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತೆಯಲ್ಲಿ 75 ನೇ ಸ್ವಾತಂತ್ಯದ ಅಮೃತ ಮಹೋತ್ಸವವನ್ನು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ನರೇಂದ್ರ ಕುಮಾರ್ ಹೆಚ್. ಎಸ್ ಮತ್ತು ಡಾ. ವೀಣಾ ನರೇಂದ್ರ ಹೆಚ್ ಇವರ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶೃಂಗೇರಿ ಜೆ.ಸಿ.ಬಿ.ಎಮ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ, ಪ್ರೊಫೆಸರ್ ರಾಧಾಕೃಷ್ಣ ರಾವ್ ಧ್ವಜಾರೋಹಣ ನೆರವೇರಿಸಿ ರಾಷ್ಟಧ್ವಜದ ಮಹತ್ವವನ್ನು ತಿಳಿಸಿದರು. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ನರೇಂದ್ರ ಕುಮಾರ್ ಎಚ್.ಎಸ್ ಸ್ವಾವಲಂಬನೆ […]

ಭಾರತ್ ಬಯೋಟೆಕ್ ಮೂಗಿನ ಮೂಲಕ ನೀಡಲಾಗುವ ಕೋವಿಡ್ ಲಸಿಕೆಯ 3ನೇ ಹಂತದ ಪ್ರಯೋಗ ಪೂರ್ಣ

ನವದೆಹಲಿ: ಇಂಟ್ರಾನಾಸಲ್ (ಮೂಗಿನ) ಕೋವಿಡ್-19 ಲಸಿಕೆಗಾಗಿ ಭಾರತ್ ಬಯೋಟೆಕ್ ಹಂತ III ಪ್ರಯೋಗಗಳು ಮತ್ತು ಬೂಸ್ಟರ್ ಡೋಸ್‌ ನ ಕ್ಲಿನಿಕಲ್ ಅಭಿವೃದ್ಧಿಯನ್ನು ಪೂರ್ಣಗೊಳಿಸಿದೆ. ಕೋವಿಡ್ -19 ಲಸಿಕೆ ಕೋವಾಕ್ಸಿನ್ ತಯಾರಕರಾದ ಭಾರತ್ ಬಯೋಟೆಕ್ ಮೂಗಿನ ಮೂಲಕ ನೀಡಲಾಗುವ BBV154 ಲಸಿಕೆಯ ಮೂರನೇ ಹಂತದ ಪ್ರಯೋಗಗಳಿಗಾಗಿ ಕ್ಲಿನಿಕಲ್ ಅಭಿವೃದ್ಧಿಯನ್ನು ಪೂರ್ಣಗೊಳಿಸಿದೆ. ಚುಚ್ಚುಮದ್ದಿಗೆ ಹೆದರುವವರಿಗೆ ಮೂಗಿನ ಮೂಲಕ ಔಷಧಿಯನ್ನು ನೀಡಬಹುದಾಗಿದ್ದು, ಪ್ರಪಂಚದ ಇತರ ದೇಶಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಚಾಲ್ತಿಯಲ್ಲಿದೆ. ಬೂಸ್ಟರ್ ಡೋಸ್‌ಗಳನ್ನು ಮೂಗಿನ ಮೂಲಕ ನೀಡಲು ಬೇಕಾದ ಪ್ರಯೋಗಗಳು […]