ಕುತ್ತಿಗೆ ಸುತ್ತಲು ಕಪ್ಪಾಗಿದ್ದರೆ ಅಂಗೈಯಲ್ಲೇ ಇದೆ ಪರಿಹಾರ!

ನಿಮ್ಮ ಮುಖ ಮುದ್ದು ಮುದ್ದಾಗಿ, ಯಾವುದೆ ಕಲೆಗಳಿಲ್ಲದೇ ಚೆನ್ನಾಗಿಯೇ ಇರಬಹುದು. ಆದರೆ ನೀವು ಕಪ್ಪು ಕುತ್ತಿಗೆ ಹೊಂದಿದ್ದರೆ, ನಿಮ್ಮ ಮುಖದ ಆಕರ್ಷಣೆ ಕಡಿಮೆಯಾಗೋದು ಖಂಡಿತಾ. ಕಪ್ಪು ಕುತ್ತಿಗೆಗೆ ಕಾರಣವೇನು ಯೋಚಿಸಿದ್ದೀರಾ? ಕಪ್ಪಾದ ಕುತ್ತಿಗೆಗೆ ಪ್ರಾಥಮಿಕ ಕಾರಣವೆಂದರೆ ನೈರ್ಮಲ್ಯ ಕಳಪೆಯಾಗಿರಬಹುದು. ಸೌಂದರ್ಯವರ್ಧಕಗಳಲ್ಲಿನ ರಾಸಾಯನಿಕಗಳು, ಮಾಲಿನ್ಯಕಾರಕ ಮತ್ತು ಇತರ ಕೆಲವು ಕಾರಣಗಳು.  ಈ ಸಮಸ್ಯೆಗೆ ನಮ್ಮ ಅಂಗೈಯಲ್ಲೇ ಪರಿಹಾರವಿದೆ ಎನ್ನುತ್ತಾರೆ ರಮಿತಾ ಶೈಲೇಂದ್ರ ರಾವ್

ಕಿತ್ತಳೆ ಸಿಪ್ಪೆ ಹುಡಿ

ವಿಟಮಿನ್ ಸಿ ಕಿತ್ತಳೆಯಲ್ಲಿದ್ದು ಇದನ್ನು ಒಣಗಿಸಿ ಮಾಡಿದ ಹುಡಿಯನ್ನು ಅರ್ಧಭಾಗ ರೋಸ್ ವಾಟರ್‌ನೊಂದಿಗೆ ಮಿಶ್ರ ಮಾಡಿಕೊಂಡು ಈ ಭಾಗಕ್ಕೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷ ಹಾಗೆಯೇ ಬಿಡಿ ಮತ್ತು ತಣ್ಣೀರಿನಿಂದ ತೊಳೆದುಕೊಳ್ಳಿ.

ಅಲೋವೆರಾ ಜೆಲ್

ನಮ್ಮಲ್ಲಿ ಹೆಚ್ಚಿನವರಿಗೆ ಅಲೋವೆರಾ ಸಸ್ಯ ಸುಲಭವಾಗಿ ದೊರೆಯುತ್ತದೆ ಮತ್ತು ಅದು ನಿಮ್ಮ ಕುತ್ತಿಗೆಯಿಂದ ಆ ಕತ್ತಲೆಯನ್ನು ತೆಗೆಯಲು ಹೆಚ್ಚು ಪರಿಣಾಮಕಾರಿ.

ಕುತ್ತಿಗೆ ಬಣ್ಣ ತಿಳಿ ಮಾಡಲು ನೀವು ಮಾಡಬೇಕಾಗಿರುವುದು ಅಲೋವೆರಾ ಎಲೆಯನ್ನು ತೆರೆದು ಜೆಲ್ ಅನ್ನು ಹೊರತೆಗೆಯಿರಿ. ಈಗ, ನಿಮ್ಮ ಕುತ್ತಿಗೆಗೆ ಜೆಲ್ ಅನ್ನು ಹಚ್ಚಿ ಮತ್ತು ಕೆಲವು ನಿಮಿಷಗಳ ಕಾಲ ಕುತ್ತಿಗೆಯನ್ನು ಸ್ಕ್ರಬ್ ಮಾಡಿ. ಜೆಲ್ ಅನ್ನು ಅರ್ಧ ಘಂಟೆಯವರೆಗೆ ಬಿಟ್ಟು ನೀರಿನಿಂದ ತೊಳೆಯಿರಿ.

ಶ್ರೀಗಂಧದ ಹುಡಿ


ಇದು ವಿಟಮಿನ್ ಮತ್ತು ನ್ಯೂಟ್ರಿಶಿಯನ್ ಅಂಶಗಳನ್ನು ತನ್ನಲ್ಲಿ ಒಳಗೊಂಡಿದ್ದು ನಿಮ್ಮ ಕುತ್ತಿಗೆ ಕಪ್ಪಗಿನ ಭಾಗಕ್ಕೆ ಅದ್ಭುತವಾಗಿ ಕಾರ್ಯ ನಿರ್ವಹಿಸಲಿದೆ. 1ಚಮಚದಷ್ಟು ಶ್ರೀಗಂಧದ ಹುಡಿಯನ್ನು 2 ಚಮಚ ರೋಸ್ ವಾಟರ್‌ನೊಂದಿಗೆ ಮಿಶ್ರ ಮಾಡಿ ಮತ್ತು ನಿಮ್ಮ ಕುತ್ತಿಗೆ ಎಲ್ಲಾ ಭಾಗಕ್ಕೂ ಹಚ್ಚಿ. 15 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಈ ಭಾಗವನ್ನು ಸ್ವಚ್ಛಗೊಳಿಸಿ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಬ್ಲೀಚಿಂಗ್ ಏಜೆಂಟ್ ಇದೆ, ಎರಡೂ ಅಂಶಗಳು ಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೆಲವು ಹನಿ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಕುತ್ತಿಗೆಗೆ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ದೇಹವು ತೈಲವನ್ನು ಹೀರಿಕೊಳ್ಳಲಿ. ನಂತರ ಸ್ನಾನ ಮಾಡಿ . ಇದನ್ನು ವಾರದಲ್ಲಿ ಎರಡು ಮೂರು ಬಾರಿ ಮಾಡುತ್ತಿದ್ದಾರೆ ಬಣ್ಣ ತಿಳಿಯಾಗುತ್ತದೆ.

ಆಲೂಗಡ್ಡೆ


ಆಲೂಗಡ್ಡೆ ಚರ್ಮವನ್ನು ಬ್ಲೀಚಿಂಗ್ ಗುಣಗಳನ್ನು ಹೊಂದಿದೆ. ಕೇವಲ ಒಂದು ಆಲೂಗಡ್ಡೆಯನ್ನು ತುರಿ ಮಾಡಿ ಮತ್ತು ಅದರ ರಸವನ್ನು ಹಿಂಡಿ, ರಸವನ್ನು ಕುತ್ತಿಗೆಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.

ರಮಿತಾ ಶೈಲೇಂದ್ರ ರಾವ್ ಕಾರ್ಕಳ