ಉಡುಪಿ:ಜಿಲ್ಲಾಧಿಕಾರಿ ಉಡುಪಿಯ ಸಂತೆಕಟ್ಟೆಯಲ್ಲಿ ಬಸ್ ನಲ್ಲಿದ್ದ ವಿದ್ಯಾರ್ಥಿಗಳು,ಹಿರಿಯ ನಾಗರಿಕರನ್ನು ಅರ್ಧದಲ್ಲೇ ಇಳಿಸಿದ್ದಕ್ಕೆ ಮಂಗಳವಾರ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಜಿಲ್ಲಾಧಿಕಾರಿ ನಡೆಗೆ ಕಾಲೇಜು ವಿದ್ಯಾರ್ಥಿನಿಯರು ಗರಂ ಆಗಿ ಮಾತಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.ಇದೀಗ ಬುಧವಾರವೂ ಜಿಲ್ಲಾಧಿಕಾರಿ ವಿರುದ್ದ ಆಕ್ರೋಶದ ಸುರಿಮಳೆ ಮುಂದುವರಿದಿದೆ. ಬಸ್ ಚಾಲಕರನ್ನು ಏಕವಚನದಲ್ಲಿ ಅವರ ವೃತ್ತಿ ಗೌರವವಕ್ಕೆ ಮರ್ಯಾದೆ ಕೊಡದೇ ಮಾತಾಡಿಸಿದ್ದಾರೆ.ಜಿಲ್ಲಾಧಿಕಾರಿಯಾ ಗಿ ಜನಸಾಮಾನ್ಯರನ್ನು ಪ್ರೀತಿಯಿಂದ ನಡೆಸಿಕೊಳ್ಳದೇ ನಡುರಸ್ತೆಯಲ್ಲೇ ಬಸ್ ನಿಂದ ಇಳಿಸಿದ್ದಾರೆ.ಮಾಧ್ಯಮದವರನ್ನು ಕರೆದುಕೊಂಡು ಹೋಗಿ ಪ್ರಚಾರಕ್ಕೋಸ್ಕರ ವಿಡಿಯೋ ಮಾಡಿಸಿದ್ದಾರೆ.ಜನಸಮಾನ್ಯರ ವಿರುದ್ದ ಮುಗಿಬೀಳುವ ಜಿಲ್ಲಾಧಿಕಾರಿ.ಜಿಲ್ಲೆಯಲ್ಲಿ ಶ್ರೀಮಂತರು,ಪ್ರಭಾವಿ ವ್ಯಕ್ತಿಗಳು ಅಕ್ರಮಗಳಲ್ಲಿ ತೊಡಗಿದ್ದರೂ ಅವನ್ನೆಲ್ಲಾ ಗಮನಿಸುತ್ತಿಲ್ಲ ಎನ್ನುವ ಟೀಕೆಗಳು ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಡಾ.ರವಿ ಶೆಟ್ಟಿ ಬೈಂದೂರು ಅವರ ವಿಡಿಯೋ ಕೂಡ ವೈರಲ್ ಆಗಿದ್ದು ಅವರು ಜಿಲ್ಲಾಧಿಕಾರಿಗೆ ಅಕ್ರಮ ಗಣಿಗಾರಿಕೆ ವಿರುದ್ದವೂ ಕ್ರಮ ತೆಗೆದುಕೊಳ್ಳಿ ನೋಡೋಣ. ಬಡಪಾಯಿ ಜನಸಾಮಾನ್ಯರ ಮೇಲೆ ಮುಗಿಬೀಳೋದಲ್ಲಾ ಪ್ರಭಾವಿ ವ್ಯಕ್ತಿಗಳು ಉಡುಪಿ ಜಿಲ್ಲೆಯಲ್ಲಿ ಮಾಡುವ ಅಕ್ರಮದ ಕುರಿತು ಧ್ವನಿಎತ್ತಿ ಜಿಲ್ಲಾಧಿಕಾರಿಗಳೇ ಎಂದು ವಿಡಿಯೋದಲ್ಲಿ ಸವಾಲು ಹಾಕಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ಡಾ.ರವಿ ಶೆಟ್ಟಿ ಬೈಂದೂರು ಅವರ ವಿಡಿಯೋ ನೋಡಿ