ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ: ಒಂದೇ ದಿನ 471 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹರಡುವಿಕೆ ತೀವ್ರಗತಿ ಪಡೆದುಕೊಂಡಿದ್ದು, ಇಂದು (ಏ.21) ರಂದು ಜಿಲ್ಲೆಯಲ್ಲಿ 471 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈವರೆಗೆ ಜಿಲ್ಲೆಯಲ್ಲಿ 1085 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, 194 ಮಂದಿ ಕೊರೊನಾ ಸೋಂಕಿನಿಂದ ಅಸುನೀಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದ ಆಕ್ರೋಶದ ಸುರಿಮಳೆ: ನೆಟ್ಟಿಗರು ಫುಲ್ ಗರಂ

ಉಡುಪಿ:ಜಿಲ್ಲಾಧಿಕಾರಿ ಉಡುಪಿಯ ಸಂತೆಕಟ್ಟೆಯಲ್ಲಿ ಬಸ್ ನಲ್ಲಿದ್ದ ವಿದ್ಯಾರ್ಥಿಗಳು,ಹಿರಿಯ ನಾಗರಿಕರನ್ನು ಅರ್ಧದಲ್ಲೇ ಇಳಿಸಿದ್ದಕ್ಕೆ ಮಂಗಳವಾರ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಜಿಲ್ಲಾಧಿಕಾರಿ ನಡೆಗೆ ಕಾಲೇಜು ವಿದ್ಯಾರ್ಥಿನಿಯರು ಗರಂ ಆಗಿ ಮಾತಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.ಇದೀಗ ಬುಧವಾರವೂ ಜಿಲ್ಲಾಧಿಕಾರಿ ವಿರುದ್ದ ಆಕ್ರೋಶದ ಸುರಿಮಳೆ ಮುಂದುವರಿದಿದೆ. ಬಸ್ ಚಾಲಕರನ್ನು ಏಕವಚನದಲ್ಲಿ ಅವರ ವೃತ್ತಿ ಗೌರವವಕ್ಕೆ ಮರ್ಯಾದೆ ಕೊಡದೇ ಮಾತಾಡಿಸಿದ್ದಾರೆ.ಜಿಲ್ಲಾಧಿಕಾರಿಯಾಗಿ ಜನಸಾಮಾನ್ಯರನ್ನು ಪ್ರೀತಿಯಿಂದ ನಡೆಸಿಕೊಳ್ಳದೇ ನಡುರಸ್ತೆಯಲ್ಲೇ ಬಸ್ ನಿಂದ ಇಳಿಸಿದ್ದಾರೆ.ಮಾಧ್ಯಮದವರನ್ನು ಕರೆದುಕೊಂಡು ಹೋಗಿ ಪ್ರಚಾರಕ್ಕೋಸ್ಕರ ವಿಡಿಯೋ ಮಾಡಿಸಿದ್ದಾರೆ.ಜನಸಮಾನ್ಯರ ವಿರುದ್ದ ಮುಗಿಬೀಳುವ ಜಿಲ್ಲಾಧಿಕಾರಿ.ಜಿಲ್ಲೆಯಲ್ಲಿ ಶ್ರೀಮಂತರು,ಪ್ರಭಾವಿ […]

ಕಾರ್ಕಳ ತಾಲೂಕು ಭೂಮಿ ಸುಪೋಷಣ ಕಾರ್ಯಕ್ರಮದ ಚಾಲನೆ

ಕಾರ್ಕಳ: ಭಾರತೀಯ ಕಿಸಾನ್ ಸಂಘ ಕಾರ್ಕಳ, ಸಹಕಾರ ಭಾರತಿ ಕಾರ್ಕಳ ಹಾಗೂ ಗ್ರಾಮ ವಿಕಾಸ ಸಮಿತಿ ಕಾರ್ಕಳ ಇವರ ಜಂಟಿ ಸಹಯೋಗದಲ್ಲಿ ಆಯೋಜಿಸಿದ ಕಾರ್ಕಳ ತಾಲೂಕು ಭೂಮಿ ಸುಪೋಷಣ ಕಾರ್ಯಕ್ರಮಕ್ಕೆ ಇರ್ವತ್ತೂರು ಸಾಧನಾ ನರ್ಸರಿ ಶ್ರೀನಿವಾಸ್ ಭಟ್ ಸಭಾಭವನದಲ್ಲಿ ಚಾಲನೆ ನೀಡಲಾಯಿತು. ರಾಷ್ಟೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗ ಕಾರ್ಯವಾಹ ಡಾ. ವಾದಿರಾಜ ಗೋಪಾಡಿ ಮಾತನಾಡಿ, ಭೂಮಿ ಸುಪೋಷಣ ಕಾರ್ಯಕ್ರಮವು ಪ್ರತಿ ಗ್ರಾಮ ಗ್ರಾಮಗಳಲ್ಲೂ ನಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ […]

ಕೆಮ್ಮು-ಕಫ, ಜೀರ್ಣಶಕ್ತಿ ಸಮಸ್ಯೆ ಇದ್ಯಾ? ಹಾಗಿದ್ರೆ ಈ ಕಷಾಯ ಕುಡೀರಿ ಎಲ್ಲಾ ಓಡೋಗುತ್ತೆ!

«ಸಿಂಥಿಯಾ ಮೆಲ್ವಿನ್  ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವಿದೆ. ವೀಳ್ಯದೆಲೆ ಭಾರತೀಯ, ಅದರಲ್ಲೂ ಕರಾವಳಿ ಕರ್ನಾಟಕದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಎಲ್ಲಾ ಶುಭಕಾರ್ಯಗಳಿಗೂ ವೀಳ್ಯದೆಲೆ ಬೇಕೇ ಬೇಕು. ವೀಳ್ಯದ ಜೊತೆ ಅಡಿಕೆ ಮತ್ತು ಸುಣ್ಣವನ್ನು ಸೇರಿಸಿ ತಿನ್ನುವುದನ್ನು ನೋಡಿದ್ದೇನೆ. ಆದರೆ ವೀಳ್ಯದೆಲೆಯ ಕಷಾಯವನ್ನು ಮಾಡಬಹುದು ಎನ್ನುವುದು ಕೇಳಿದ್ದೀರಾ? ಹೌದು. ವೀಳ್ಯದೆಲೆಯ ಕಷಾಯವನ್ನು ಮಾಡಿ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಲಾಭಗಳಿದೆ. ಕಷಾಯ ಮಾಡುವ ರೀತಿ: ಒಂದು ಲೋಟ ಕುದಿಯುತ್ತಿರುವ ನೀರಿಗೆ ಒಂದು ವೀಳ್ಯದೆಲೆಯನ್ನು ಚೂರು-ಚೂರು ಮಾಡಿ ಹಾಕಿ […]

ಉಡುಪಿ ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ; ಮೇ 14ಕ್ಕೆ ಪಟ್ಟಾಭಿಷೇಕ

ಉಡುಪಿ: ಉಡುಪಿ ಅಷ್ಟ ಮಠಗಳಲ್ಲೊಂದಾದ ಶಿರೂರು ಮಠದ 31ನೇ ಉತ್ತರಾಧಿಕಾರಿಯಾಗಿ ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮದ ಡಾ. ಎಂ.ಉದಯ್ ಕುಮಾರ್ ಸರಳತ್ತಾಯ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರ ಅನಿರುದ್ಧ ಎಂಬ ವಟುವನ್ನು ಆಯ್ಕೆ ಮಾಡಲಾಗಿದೆ. ಮೇ 14ರಂದು ಶಿರೂರು ಮಠಾಧೀಶರಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಉತ್ತರಾಧಿಕಾರಿಯಾಗಿ ಅನಿರುದ್ಧ ಅವರ ಪಟ್ಟಾಭಿಷೇಕ ನಡೆಯಲಿದೆ. ಶಿರಸಿ ಬಳಿಯಿರುವ ಸೋಂದೆ ಮೂಲ ಮಠದಲ್ಲಿ ಮೇ11ರಿಂದ 14ರವರೆಗೆ ಸನ್ಯಾಸ ಸ್ವೀಕಾರ, ಪಟ್ಟಾಭಿಷೇಕ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ ಎಂದು ಶಿರೂರು ಮಠದ ದ್ವಂದ್ವ […]