ಉಳಿದ ಅನ್ನದಿಂದ ಹೀಗೆ ಮಾಡಿದ್ರೆ ಬೊಂಬಾಟ್ ತಿಂಡಿ ಸಿದ್ದ

ರಾತ್ರಿ ಉಳಿದ ಅನ್ನವನ್ನು ಬಹುತೇಕ ಮಂದಿ ವೇಸ್ಟ್ ಮಾಡ್ತಾರೆ. ಆದ್ರೆ ಮರುದಿನ ಅದೇ ಅನ್ನದಿಂದಲೇ ಬೊಂಬಾಟ್ ಖಾಧ್ಯಗಳನ್ನು ಮಾಡಿ ತಿನ್ನಬಹುದು. ಬ್ಯಾಚುಲರ್ಸ್ ಗಳಿಗೂ ಇದೊಂದು ಬೆಸ್ಟ್ ದಾರಿ. ಉಳಿದ ಅನ್ನದಿಂದ ಏನೇನೆಲ್ಲಾ ಮಾಡಬಹುದು ಎನ್ನುವುದನ್ನು ಆಶಾ ನೂಜಿ ಹೇಳ್ತಾರೆ ಹೇಳ್ತಾರೆ ಕೇಳಿ

ರುಚಿ ರುಚಿ ಕೇಸರಿಭಾತ್
ಬೇಕಾದ ಸಾಮಾಗ‍್ರಿ :
ಉಳಿದ ಅನ್ನ
ಸಕ್ಕರೆ: 4 ಕಪ್
ಕೇಸರಿ ಸ್ವಲ್ಪ, ಏಲಕ್ಕಿ, ಗೊಡಂಬಿ, ದ್ರಾಕ್ಷಿ ಒಂದಷ್ಟು
ತುಪ್ಪ:ಒಂದುವರೆ ಗ್ಲಾಸ್, ಹಾಲು:ಒಂದು ಕಪ್
ಹೀಗೆ ಮಾಡಿ:
ಅನ್ನವನ್ನು ಹಾಲಿನಲ್ಲಿ ಸ್ವಲ್ಪ ಬೇಯಿಸಿ, ನಂತರ ಸಕ್ಕರೆ ಹಾಕಿ ಕದಡುತ್ತಾ ಇರಿ, ಅದು ದಪ್ಪ ಆಗುತ್ತಾ ಬರುವಾಗ, ಸಕ್ಕರೆ ಹಾಕಿ. ಸಕ್ಕರೆ ಅನ್ನದೊಂದಿಗೆ ಬರೆತು ಸರಿಯಗಿ ಕುದಿ ಬಂದಾಗ ಪಾಕ ನೀರಾಗುತ್ತದೆ. ನಂತರ ಇನ್ನೂ ಚೂರು ಕುದಿಸಿ, ಬಳಿಕ ಪಾಕ  ಗಟ್ಟಿ ಆಗುತ್ತಾ ಬಂದಾಗ ಕೇಸರಿ, ತುಪ್ಪ, ಸ್ವಲ್ಪ ಸ್ವಲ್ಪವೇ ಹಾಕಿ ಕದಡಿಸಿ. ಏಲಕ್ಕಿ,ಗೊಡಂಬಿ ಹುಡಿ ಉದುರಿಸಿ. ತುಪ್ಪ ಬಿಡುತ್ತಾ ಬರುವಾಗ, ತಳ ಬಿಟ್ಟಾಗ ಇಳಿಸಿ ಒಂದು ಸಣ್ಣ ಬೌಲ್ ಗೆ ಹಾಕಿದರೆ ಬಿಸಿ ಬಿಸಿ ಕೇಸರಿಬಾತ್ ರೆಡಿ. ಬಿಸಿ ಬಿಸಿ ತಿನ್ನುದಕ್ಕಿಂತ ಒಂದೈದು ನಿಮಿಷ ಆರಿಸಿ ತಿಂದರೆ ಇನ್ನೂ ಟೇಸ್ಟ್.
ಸಂಡಿಗೆ ಮಾಡಿ ತಿನ್ನಿ
ಉಳಿದ ಅನ್ನಕ್ಕೆ ಉಪ್ಪು,ಎಳ್ಳು ಹಾಕಿ ಮಿಕ್ಸಿಯಲ್ಲಿ ರುಬ್ಬಿ.ತಯಾರಾದ ಹಿಟ್ಟನ್ನು ಬಾಳೆ ಎಲೆಗೋ ಪ್ಲಾಸ್ಟಿಕ್ ಹಾಳೆಗೋ ಒಂದೊಂದು ಮುಷ್ಟಿ ಬಿಟ್ಟು ಬಿಸಿಲಿಗೆ ಒಣಗಿಸಲು ಹಾಕಿ ಮೂರು ದಿನ ಸರಿಯಾಗಿ ಒಣಗಿಸಿ ಬಳಿಕ ಎಣ್ಣೆಯಲ್ಲಿ ಕರಿದರೆ  ಮಕ್ಕಳಿಗೆ ಸಂಜೆಯ ಕಾಫಿಗೆ ಕುರುಕುರು ತಿಂಡಿ ರೆಡಿ.
ರೊಟ್ಟಿ ತಿಂದರೆ ಗಟ್ಟಿಯಾಗ್ತೀರಿ:
 ಅನ್ನಕ್ಕೆ ಉಪ್ಪು, ಹಸಿಮೆಣಸು, ಕಾಯಿ ತುರಿ, ಕರಿಬೇವು, ಶುಂಠಿ, ಈರುಳ್ಳಿ ಎಲ್ಲವನ್ನೂ ಹಾಕಿ ಮಿಕ್ಸಿಯಲ್ಲಿ ರುಬ್ಬಿ.ಬಳಿಕ ಅದಕ್ಕೆ ಸ್ವಲ್ಪ ಅಕ್ಕಿ ಹುಡಿ ಹಾಕಿ ಚಪಾತಿ ಹಿಟ್ಟು ತರ ಮಾಡಿ, ಬಳಿಕ ತಟ್ಟಿ ತವಾದಲ್ಲಿ ಬೇಯಿಸಿದರೆ ಸಿಂಪಲ್  ರೊಟ್ಟಿ ರೆಡಿ .ತುಪ್ಪ ಅಥವಾ ಬೆಣ್ಣೆಯೊಂದಿಗೆ ತಿಂದರೆ ಮಸ್ತ್.
«ಆಶಾನೂಜಿ