ಉಡುಪಿ: ಇಂದ್ರಾಳಿಯಲ್ಲಿ ಕಟ್ಟಡಕ್ಕೆ ಆಕಸ್ಮಿಕ‌ ಬೆಂಕಿ

ಉಡುಪಿ: ನಗರದ ಇಂದ್ರಾಳಿ ರೈಲ್ಪೆ ನಿಲ್ದಾಣ ಸಮೀಪದ ಪೆಟ್ರೋಲ್ ಬಂಕ್ ಪಕ್ಕದ ಕಟ್ಟಡಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ‌ ಘಟನೆ ಭಾನುವಾರ ರಾತ್ರಿ ಸಂಭವಿಸಿದ್ದು, ಅವಘಡದಿಂದ ಕಟ್ಟಡದ ಕೆಳ ಮಹಡಿಯಲ್ಲಿದ್ದ ಬೈಕ್ ಶೋರೂಂ ಸುಟ್ಟು ಹೋಗಿದೆ. ಕಟ್ಟಡದಲ್ಲಿ ದಂತ ಚಿಕಿತ್ಸಾ ಆಸ್ಪತ್ರೆ, ವಾಣಿಜ್ಯ ಮಳಿಗೆಗಳಿವೆ. ಘಟನೆಯಿಂದ ಅಪಾರ ಹಾನಿ ಸಂಭವಿಸಿದೆ. ಸ್ಥಳಕ್ಕೆ ಉಡುಪಿಯಿಂದ ಎರಡು‌ ಅಗ್ನಿಶಾಮಕ ದಳ ವಾಹನ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ತಿಳಿದು ಬಂದಿದೆ.

ಮೂಡಬಿದ್ರೆ: ಆಳ್ವಾಸ್‌ ಪ್ರಗತಿ -2019 ಕ್ಕೆ ಚಾಲನೆ

ಮೂಡಬಿದ್ರೆ: ಪ್ರತಿಯೊಬ್ಬರೂ ತಮ್ಮೊಳಗಿನ ಪ್ರತಿಭೆ ಏನೆಂಬುದನ್ನು ತಾವು ಮೊದಲು ತಿಳಿದುಕೊಂಡು ಅದಕ್ಕೆ ತಕ್ಕ ಉದ್ಯೋಗ ರಂಗವನ್ನು ಪ್ರವೇಶಿಸಿ ಮುಂದುವರಿದಾಗ ಪ್ರಗತಿ ಹೊಂದಲು ಸಾಧ್ಯ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ| ಸಚ್ಚಿದಾನಂದ ಹೇಳಿದರು. ಅವರು ಆಳ್ವಾಸ್‌ ಎಜುಕೇಶನ್‌ ಫೌಂಡೇ ಶನ್‌ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಆಯೋಜಿಸಲಾದ 11ನೇ ವರ್ಷದ ಆಳ್ವಾಸ್‌ ಪ್ರಗತಿ-2019 ಉದ್ಯೋಗ ಮೇಳವನ್ನು ಡಾ| ವಿ.ಎಸ್‌. ಆಚಾರ್ಯಸಭಾಂಗಣದಲ್ಲಿ ನಡೆದ ಸಮಾರಂಭ ದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಅಭ್ಯರ್ಥಿಗಳಿಗೆ ಚೀನ, ಅಮೆರಿಕ, ಮಧ್ಯಪ್ರಾಚ್ಯ […]

ಸಗ್ರಿ ಫ್ರೆಂಡ್ಸ್ – ಮಳೆನೀರು ಕೊಯ್ಲು ಕಾರ್ಯಾಗಾರ

 ಉಡುಪಿ: ಸಗ್ರಿ ಫ್ರೆಂಡ್ಸ್ ಸಗ್ರಿಯ ವತಿಯಿಂದ ಜೂನ್ ೨೩ ರಂದು ಮಳೆ ನೀರು ಕೊಯ್ಲು ಮೂಲಕ ಅಂತರ್ಜಲ ಹೆಚ್ಚಿಸುವ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು. ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಲತಜ್ಞರಾದ ಜೋಸೆಫ್ ಜಿ.ಎಂ ರೆಬೆಲ್ಲೋ ಅವರು ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಸಗ್ರಿ ಫ್ರೆಂಡ್ಸ್ ಸಗ್ರಿಯ ಅಧ್ಯಕ್ಷರಾದ ಅಮ್ಮುಂಜೆ ವೀರೇಂದ್ರ ನಾಯಕ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ ಗುರುರಾಜ್ ಭಟ್ ಸಗ್ರಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಗರ ಸಭಾ ಸದಸ್ಯೆ ಶ್ರೀಮತಿ ಭಾರತಿ […]

ಉಡುಪಿ: ಶ್ಯಾಮ್‌ಪ್ರಸಾದ್ ಮುಖರ್ಜಿ ಸಂಸ್ಮರಣೆ: ರಾಷ್ಟ್ರದ ಅಖಂಡತೆಗಾಗಿ‌ ಜನಸಂಘ ಸ್ಥಾಪನೆ: ಕೆ.‌ ರಘುಪತಿ ಭಟ್ 

ಉಡುಪಿ: ದೇಶದ ಸ್ವಾತಂತ್ರ್ಯ ಸಂದರ್ಭದಲ್ಲಿ ಅಂದಿನ ಪ್ರಧಾನಿ ಜವಹರ್‌ ಲಾಲ್‌ ನೆಹರೂ ಅವರ ಕೆಲವು‌ ತಪ್ಪು ನೀತಿಗಳಿಂದಾಗಿ  ಡಾ. ಶ್ಯಾಮಪ್ರಸಾದ್‌ ಅವರು ಬೇಸತ್ತಿದ್ದರು. ಹೀಗಾಗಿ ಅಧಿಕಾರದಿಂದ ಹೊರಬಂದ ಅವರು, ದೂರದೃಷ್ಟಿಯಿಂದ ರಾಷ್ಟ್ರದ ಅಖಂಡತೆಗಾಗಿ ಜನಸಂಘವನ್ನು ಸ್ಥಾಪಿಸಿದ್ದಾರೆ. ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಅವರು ಹಾಗೂ ಪಂ. ದೀನದಯಾಳ್‌ ಉಪಾಧ್ಯಾಯ ಅವರು ದೇಶದ ಅಖಂಡತೆಗಾಗಿ ಬಲಿದಾನ ಮಾಡಿದ್ದಾರೆ ಎನ್ನುವುದನ್ನು ನಾವೆಲ್ಲರು ತಿಳಿದುಕೊಳ್ಳಬೇಕು ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು. ಜನಸಂಘದ ಸ್ಥಾಪಕ ಅಧ್ಯಕ್ಷ ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಬಲಿದಾನ […]

ಬಜಗೋಳಿ: ಪೊರ್ತು ಚಾರಿಟೇಬಲ್ ಟ್ರಸ್ಟ್ ವಾರ್ಷಿಕೋತ್ಸವ

ಕಾರ್ಕಳ: ಪೊರ್ತು ಚಾರಿಟೇಬಲ್ ಟ್ರಸ್ಟ್ ಇದರ 1ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಸ.ಹಿ.ಪ್ರಾ. ಶಾಲೆ ಬಜಗೊಳಿಯಲ್ಲಿ ನಡೆಯಿತು. ಕಾರ್ಯಕ್ರ‌ಮದ ಅಂಗವಾಗಿ‌ ವಿಜೇತ ವಿಶೇಷ ಶಾಲಾ ಮಕ್ಕಳು ಹಾಗೂ ಇತರ ವಿವಿಧ  ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 5 ಸರಕಾರಿ ಶಾಲೆಗೆ ಅವಶ್ಯಕ ನೆರವನ್ನು ವಾರ್ಷಿಕೋತ್ಸವದ ಸಂದರ್ಭದಲ್ಲಿ ಪೊರ್ತು ಟ್ರಸ್ಟ್ ವತಿಯಿಂದ ನೀಡಲಾಯಿತು. ಕಾರ್ಯಕ್ರಮದಲ್ಲಿ‌ ಮುಖ್ಯ ಅತಿಥಿಗಳಾಗಿ ಪತ್ರಕರ್ತ ವಸಂತ್ ಗಿಳಿಯಾರ್, ಸಮಾಜ ಸೇವಕರಾದ ಶ್ರೀ ವಿಶು ಶೆಟ್ಟಿ ಅಂಬಲ್ಪಾಡಿ, ಹ್ಯುಮ್ಯಾನಿಟಿ ಟ್ರಸ್ಟ್ ನ ರೋಷನ್ […]