ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೂರು ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಶುಭಮನ್ ಗಿಲ್ ಶತಕ ಸಿಡಿಸಿದ್ದಾರೆ. ಇತ್ತೀಚೆಗಷ್ಟೇ ದ್ವಿಶತಕ ಬಾರಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದ ಗಿಲ್ ಮತ್ತೊಂದು ಶತಕ ಬಾರಿಸುವ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
ಶುಭಮನ್ ಗಿಲ್ 72 ಎಸೆತಗಳಲ್ಲಿ 100 ರನ್ ಪೂರೈಸಿದರು. ಮೂರನೇ ಏಕದಿನ ಪಂದ್ಯದಲ್ಲಿ ಅವರ ಒಟ್ಟು ಸ್ಕೋರ್ 78 ಎಸೆತಗಳಲ್ಲಿ 112 ರನ್ ಆಗಿತ್ತು. ಈ ವೇಳೆ ಅವರು 5 ಸಿಕ್ಸರ್ ಮತ್ತು 13 ಬೌಂಡರಿಗಳನ್ನು ಬಾರಿಸಿದರು.
ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯವನ್ನು ಆಡಿದ್ದ ಶುಭಮನ್ ಗಿಲ್ ತಮ್ಮ ವೃತ್ತಿಜೀವನದ ಮೊದಲ ದ್ವಿಶತಕ( 208 ರನ್) ಗಳಿಸಿದ್ದರು. ಇದಲ್ಲದೇ ಮೂರನೇ ಪಂದ್ಯದಲ್ಲಿ ಮತ್ತೊಂದು ಶತಕ ಬಾರಿಸಿದ್ದಾರೆ.
2022 ರಿಂದ ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಶುಭಮನ್ ಗಿಲ್ ಸ್ಕೋರುಗಳು:
64(53), 43(49), 98*(98), 82*(72), 33(34), 130(97), 3(7), 28(26), 49(57), 50(65), 45*(42), 13(22), 70(60), 21(12), 116(97), 208(149), 40*(53) ಮತ್ತು 112(78)
ದ್ವಿಪಕ್ಷೀಯ 3 ಪಂದ್ಯಗಳ ಅಂತರಾಷ್ಟ್ರೀಯ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು:
360 ರನ್- ಬಾಬರ್ ಆಜಮ್-ವೆಸ್ಟ್ ಇಂಡೀಸ್ ವಿರುದ್ದ
360 ರನ್- ಶುಭಮನ್ ಗಿಲ್-ನ್ಯೂಜಿಲ್ಯಾಂಡ್ ವಿರುದ್ದ
349 ರನ್- ಇಮರುಲ್ ಕೈಸ್ -ಜಿಂಬಾಬ್ವೆ ವಿರುದ್ದ
342 ರನ್- ಕ್ವಿಂಟನ್ ಡಿಕಾಕ್ -ಭಾರತ ವಿರುದ್ದ
330 ರನ್- ಮಾರ್ಟಿನ್ ಗುಪ್ಟಿಲ್-ಇಂಗ್ಲೆಂಡ್ ವಿರುದ್ದ