ಬೆಂಗಳೂರಿನ 8 ರ ಪೋರನಿಗೆ ನಾವೀನ್ಯತೆ ಕ್ಷೇತ್ರಕ್ಕಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ

ನವದೆಹಲಿ: ಅತ್ಯಂತ ಕಿರಿಯ ವಯಸ್ಸಿನ 180 ರ ಅಸಾಧಾರಣ ಐಕ್ಯೂ ಹೊಂದಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಡೆವಲಪರ್ ಹಾಗೂ “ಎಲಿಮೆಂಟ್ ಆಫ್ ಅರ್ಥ್” ಪುಸ್ತಕದ ಲೇಖಕ, ಕರ್ನಾಟಕದ ಬೆಂಗಳೂರಿನ ಬಾಲ ಪ್ರತಿಭೆ ರಿಷಿ ಶಿವ ಪ್ರಸನ್ನ, ಭಾರತದ 40 ಯುವ ಐಕಾನ್ ಗಳಲ್ಲಿ ಒಬ್ಬರಾಗಿ ಭಾರತದ ಸಂಸ್ಕೃತಿ ಸಚಿವಾಲಯದಿಂದ ಆಯ್ಕೆಯಾಗಿದ್ದಾರೆ. ನಾವೀನ್ಯತೆ ಕ್ಷೇತ್ರಕ್ಕಾಗಿ ರಿಷಿ ಶಿವ ಪ್ರಸನ್ನ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ -2023 ಅನ್ನು ಪಡೆದುಕೊಂಡಿದ್ದಾರೆ. ರಿಷಿ ಅತ್ಯಂತ ಕಿರಿಯ ಯೂಟ್ಯೂಬರ್ ಆಗಿದ್ದಾರೆ ಮತ್ತು ಪ್ರತಿ ಸಂಚಿಕೆಯಲ್ಲಿ […]

ಮತ್ತೊಮ್ಮೆ ಶತಕ ಪೇರಿಸಿದ ಶುಭಮನ್ ಗಿಲ್: ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದಲ್ಲಿ ಗಿಲ್ ಕಮಾಲ್

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೂರು ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಶುಭಮನ್ ಗಿಲ್ ಶತಕ ಸಿಡಿಸಿದ್ದಾರೆ. ಇತ್ತೀಚೆಗಷ್ಟೇ ದ್ವಿಶತಕ ಬಾರಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದ ಗಿಲ್ ಮತ್ತೊಂದು ಶತಕ ಬಾರಿಸುವ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಶುಭಮನ್ ಗಿಲ್ 72 ಎಸೆತಗಳಲ್ಲಿ 100 ರನ್ ಪೂರೈಸಿದರು. ಮೂರನೇ ಏಕದಿನ ಪಂದ್ಯದಲ್ಲಿ ಅವರ ಒಟ್ಟು ಸ್ಕೋರ್ 78 ಎಸೆತಗಳಲ್ಲಿ 112 ರನ್ ಆಗಿತ್ತು. ಈ ವೇಳೆ ಅವರು 5 ಸಿಕ್ಸರ್ ಮತ್ತು 13 ಬೌಂಡರಿಗಳನ್ನು […]

ಬೆಂಗಳೂರು: ಕೆಆರ್ ಮಾರುಕಟ್ಟೆ ಫ್ಲೈಓವರ್ ಮೇಲಿಂದ 10 ರೂ ಮುಖಬೆಲೆ ನೋಟು ಎಸೆದ ವ್ಯಕ್ತಿ; ಸಂಚಾರ ಅಸ್ತವ್ಯಸ್ತ

ಬೆಂಗಳೂರು: ಇಲ್ಲಿನ ಕೆಆರ್ ಮಾರುಕಟ್ಟೆಯ ಫ್ಲೈಓವರ್ ಮೇಲಿನಿಂದ ವ್ಯಕ್ತಿಯೊಬ್ಬ ಹಣ ಎಸೆದಿರುವ ಘಟನೆ ಮಂಗಳವಾರದಂದು ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ಕಪ್ಪು ಶರ್ಟ್ ಧರಿಸಿರುವ ಫ್ಲೈಓವರ್‌ನಲ್ಲಿದ್ದ ಅರುಣ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಹಣವನ್ನು ಎಸೆಯುತ್ತಿರುವುದು ಕಂಡುಬಂದಿದೆ. ಆತ ಎಸೆದ ಹಣದಲ್ಲಿ 10 ರೂಪಾಯಿ ಮುಖಬೆಲೆಯ ನೋಟುಗಳಿದ್ದವು. ಕೂಡಲೇ ಫ್ಲೈಓವರ್‌ ಕೆಳಗೆ ಜಮಾಯಿಸಿದ ಜನರು ನೋಟುಗಳನ್ನು ಹೆಕ್ಕಲು ಆರಂಭಿಸಿದರು. ಹಣ ಹೆಕ್ಕುತ್ತಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಇದರಿಂದಾಗಿ ಕೆಲ ನಿಮಿಷಗಳ ಕಾಲ ವಾಹನ […]

ಸುಪ್ರಸಿದ್ಧ ಗಾಯಕ ಹಾರಾಡಿ ಚಂದ್ರಶೇಖರ ಕೆದ್ಲಾಯ ವಿಧಿವಶ

ಹಾರಾಡಿ: ಸುಪ್ರಸಿದ್ಧ ಗಾಯಕ ಹಾರಾಡಿ ಚಂದ್ರಶೇಖರ ಕೆದ್ಲಾಯ ಇಂದು ಬೆಳಿಗ್ಗೆ10 ಗಂಟೆಯ ವೇಳೆಗೆ ತಮ್ಮ 73 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಳೆ (ಜ.25) ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿ ಹಾಗೂ ಅಪಾರ ಅಭಿಮಾನಿ ವರ್ಗ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.  

ಬಂಗ್ರಕೂಳೂರು: ಮಂಗಳೂರು “ರಾಮ – ಲಕ್ಷ್ಮಣ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಮಂಗಳೂರು: ಜ.22 ರಂದು ನಡೆದ ಮಂಗಳೂರು “ರಾಮ – ಲಕ್ಷ್ಮಣ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಇಂತಿದೆ ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 05 ಜೊತೆ ಅಡ್ಡಹಲಗೆ: 09 ಜೊತೆ ಹಗ್ಗ ಹಿರಿಯ: 19 ಜೊತೆ ನೇಗಿಲು ಹಿರಿಯ: 29 ಜೊತೆ ಹಗ್ಗ ಕಿರಿಯ: 19 ಜೊತೆ ನೇಗಿಲು ಕಿರಿಯ: 78 ಜೊತೆ ಒಟ್ಟು ಕೋಣಗಳ ಸಂಖ್ಯೆ: 159 ಜೊತೆ ಕನೆಹಲಗೆ: ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ […]