ಮಂದಾರ್ತಿ: ಶ್ರೀಕ್ಷೇತ್ರ ಮಂದಾರ್ತಿ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಎರಡು ಯಕ್ಷಗಾನ ಮೇಳಗಳ ಮಳೆಗಾಲದ ಪ್ರಥಮಸೇವೆ ಆಟ ಇಂದು ಶ್ರೀಕ್ಷೇತ್ರದಲ್ಲಿ ನೆರವೇರಿತು.
ಬೆಳಿಗ್ಗೆ ಬಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣಹೋಮ ನಡೆಯಿತು. ಬಳಿಕ ಮಧ್ಯಾಹ್ನ ಶ್ರೀಕ್ಷೇತ್ರದಲ್ಲಿ ಎರಡು ಮೇಳಗಳ ಮಹಾಗಣಪತಿ ಪೂಜೆ ಜರುಗಿತು. ಇಂದು ರಾತ್ರಿ ಎರಡು ಮೇಳಗಳ ಪ್ರಥಮಸೇವೆಯ ಆಟ ನಡೆಯಲಿದೆ.
ದೇವಳದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಎಸ್.ಪಿ.ಬಿ., ಅನುವಂಶಿಕ ಮೊಕ್ತೇಸರರಾದ ಎಚ್. ಧನಂಜಯ ಶೆಟ್ಟಿ, ಎಚ್. ಸುರೇಂದ್ರ ಶೆಟ್ಟಿ, ಎಚ್. ಪ್ರಭಾಕರ ಶೆಟ್ಟಿ, ಎಚ್. ಶಂಭು ಶೆಟ್ಟಿ, ಆರ್. ಶ್ರೀನಿವಾಸ ಶೆಟ್ಟಿ ಹಾಗೂ ದೇವಳದ ಅರ್ಚಕ ವೃಂದ, ಸಿಬ್ಬಂದಿ, ಮೇಳದ ಕಲಾವಿದರು ಉಪಸ್ಥಿತರಿದ್ದರು.
ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಲಾಯಿತು.