ಪೇಜಾವರ ಶ್ರೀಗಳು ಬಯಸಿದ್ದ ಗಾನ ಗಾರುಡಿಗನ ಕಾರ್ಯಕ್ರಮ ಕೊನೆಗೂ ಈಡೇರಲಿಲ್ಲ!

ಉಡುಪಿ: ಖ್ಯಾತ ಗಾಯಕ ಎಸ್.ಬಿ. ಬಾಲಸುಬ್ರಹ್ಮಣ್ಯ ಅವರಿಗೂ ಉಡುಪಿ ಶ್ರೀಕೃಷ್ಣಮಠಕ್ಕೂ ಅವಿನಾಭಾವ ಸಂಬಂಧವಿದೆ. ಅವರು 1972ರಿಂದ 2016ರ ವರೆಗೆ ಕೃಷ್ಣಮಠಕ್ಕೆ ಆಗಾಗ ಭೇಟಿ ನೀಡಿರುವುದೇ ಇದಕ್ಕೆ ಸಾಕ್ಷಿ. 1972 ಹಾಗೂ 1996 ರಲ್ಲಿ ಬೋರ್ಡ್ ಹೈಸ್ಕೂಲ್ ನಲ್ಲಿ ಎಸ್ ಪಿಬಿ ಅವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಅಲ್ಲದೆ, 2004-06ರಲ್ಲಿ ಶ್ರೀ ಅದಮಾರು ವಿಶ್ವಪ್ರಿಯತೀರ್ಥರ ದ್ವಿತೀಯ ಪರ್ಯಾಯದ ಅವಧಿಯಲ್ಲಿ ಹಂಸಲೇಖ ನೇತೃತ್ವದಲ್ಲಿ ರಾಜಾಂಗಣದಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಪೇಜಾವರ ಶ್ರೀಗಳ ಆಶೀರ್ವಾದ ಪಡೆದಿದ್ದ ಎಸ್ ಪಿಬಿ: 2016ರ […]

ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ವಂಚನೆ: ಚೇಯರ್‌ಮೆನ್ ವಿರುದ್ಧ ಕೇಸ್ ದಾಖಲು

ಉಡುಪಿ: ಭಾರತೀಯ ರೆಡ್‌ಕ್ರಾಸ್ ಸೊಸೈಟಿಗೆ ವಂಚನೆ ಮಾಡಿರುವ ಆರೋಪದಡಿ ರೆಡ್‌ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆಯ ಚೇಯರ್‌ಮೆನ್ ಬಸ್ರೂರು ರಾಜೀವ ಶೆಟ್ಟಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಜೀವ ಶೆಟ್ಟಿ 2020ರ ಜ.6ರಂದು ಕಾನೂನು ಬಾಹಿರವಾಗಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಚಾರಿಟೇಬಲ್ ಟ್ರಸ್ಟ್  ಸ್ಥಾಪಿಸಿದ್ದು, ಅದಕ್ಕೆ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಚಿಹ್ನೆ ಮತ್ತು ಟ್ರೇಡ್ ಮಾರ್ಕ್ ಉಪಯೋಗಿಸಿಕೊಂಡು ಸಾರ್ವಜನಿಕರಿಂದ ಕಾನೂನು ಬಾಹಿರವಾಗಿ ದೇಣಿಗೆ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಟ್ರಸ್ಟನ್ನು ಉಡುಪಿಯ ಉಪನೋಂದಣಾಧಿಕಾರಿಯವರ […]

ಭೂಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಮೃತ್ಯು, ಐವರು ಕಣ್ಮರೆ

ಮೇಘಾಲಯ: ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಭಾರೀ ಮಳೆಗೆ ಭೂಕುಸಿತ ಉಂಟಾಗಿದ್ದು, ಇದರಿಂದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಜಿಯಾ ಅಹ್ಮದ್ ಮೃತಪಟ್ಟಿದ್ದಾರೆ. ಇತರ ಐವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲೆಯ ಮಾವ್ನಿ ಪ್ರದೇಶದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ. ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿಗಳಲ್ಲಿ ಮೇಘಾಲಯ ಪರ ಆಡಿದ್ದ ರಜಿಯಾ ಅವರ ಮೃತದೇಹವನ್ನು ಅವಶೇಷಗಳಡಿಯಿಂದ ಪತ್ತೆ ಹಚ್ಚಲಾಗಿದೆ. ಇನ್ನೂ ಐವರು ನಾಪತ್ತೆಯಾಗಿದ್ದಾರೆ ಎಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಲ್ವೆಸ್ಟರ್ […]

ಶ್ರೀಕ್ಷೇತ್ರ ಮಂದಾರ್ತಿ: ಇಂದು ರಾತ್ರಿ ಎರಡು ಮೇಳಗಳ ಪ್ರಥಮಸೇವೆಯ ಆಟ

ಮಂದಾರ್ತಿ: ಶ್ರೀಕ್ಷೇತ್ರ ಮಂದಾರ್ತಿ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಎರಡು ಯಕ್ಷಗಾನ ಮೇಳಗಳ ಮಳೆಗಾಲದ ಪ್ರಥಮಸೇವೆ ಆಟ ಇಂದು ಶ್ರೀಕ್ಷೇತ್ರದಲ್ಲಿ ನೆರವೇರಿತು. ಬೆಳಿಗ್ಗೆ ಬಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣಹೋಮ ನಡೆಯಿತು. ಬಳಿಕ ಮಧ್ಯಾಹ್ನ ಶ್ರೀಕ್ಷೇತ್ರದಲ್ಲಿ ಎರಡು ಮೇಳಗಳ ಮಹಾಗಣಪತಿ ಪೂಜೆ ಜರುಗಿತು. ಇಂದು ರಾತ್ರಿ ಎರಡು ಮೇಳಗಳ ಪ್ರಥಮಸೇವೆಯ ಆಟ ನಡೆಯಲಿದೆ. ದೇವಳದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಎಸ್.ಪಿ.ಬಿ., ಅನುವಂಶಿಕ ಮೊಕ್ತೇಸರರಾದ ಎಚ್. ಧನಂಜಯ ಶೆಟ್ಟಿ, ಎಚ್. ಸುರೇಂದ್ರ ಶೆಟ್ಟಿ, ಎಚ್. ಪ್ರಭಾಕರ ಶೆಟ್ಟಿ, ಎಚ್. ಶಂಭು ಶೆಟ್ಟಿ, ಆರ್. […]

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು: ಡಾ. ವಿದ್ಯಾಭೂಷಣರಿಂದ ಸಂಗೋಷ್ಠಿ

ಮಂಗಳೂರು: ಭಕ್ತಿಯ ಮೂಲಕ ಭಗವಂತನ ಆರಾಧನೆಯೇ ನಮ್ಮ ಜೀವನದ ಪರಮಮೌಲ್ಯ. ಅದಕ್ಕೆ ಪೋಷಕವಾಗಿ ಸದ್ಗುಣಗಳಿಂದ ದೇಹವನ್ನು ಮನವನ್ನು ಶೋಧಿಸಿ ಶುಚಿಯಾಗಿಟ್ಟುಕೊಳ್ಳುವುದೇ ಜೀವನಮೌಲ್ಯ ಎಂದು ಹರಿದಾಸರು ತಮ್ಮ ಕೀರ್ತನೆಗಳ ಮೂಲಕ ಹಾಡಿದ್ದಾರೆ. ಮಾತ್ರವಲ್ಲ ಅಂತೆಯೇ ಬಾಳಿ ಬದುಕಿ ತೋರಿಸಿಕೊಟ್ಟಿದ್ದಾರೆ ಎಂದು ಸಂಗೀತವಿದ್ಯಾನಿಧಿ ಡಾ. ವಿದ್ಯಾಭೂಷಣರು ಹೇಳಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮಂಗಳೂರು ವಿಭಾಗ ಏರ್ಪಡಿಸಿದ ‘ದಾಸಸಾಹಿತ್ಯದಲ್ಲಿ ಜೀವನಮೌಲ್ಯಗಳು’ ಎಂಬ ಸಂಗೋಷ್ಠಿಯಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡುತ್ತಿದ್ದರು. ‘ನಮ್ಮ ಜೀವನ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರಬೇಕು. ಎಲ್ಲ ಅಹಂಕಾರ ಮಮಕಾರಗಳನ್ನು […]