ಆ. 23: ಹುಲಿವೇಷದಾರಿ ಅಶೋಕ್ ರಾಜ್ ಬಳಗದಿಂದ ಹುಲಿವೇಷ ಸ್ಪರ್ಧೆ

ಉಡುಪಿ: ಉಡುಪಿಯ ಪ್ರಸಿದ್ದ ಜಾನಪದ ಹುಲಿವೇಷದಾರಿ ತಂಡ ಅಶೋಕ್‌ರಾಜ್‌ ಮತ್ತು ಬಳಗ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ. 23ರಂದು ಹುಲಿವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಶನಿವಾರ ಬಳಗದ ಅಧ್ಯಕ್ಷ ಅಶೋಕ್‌ರಾಜ್‌ ಕಾಡಬೆಟ್ಟು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬ್ರಹ್ಮಗಿರಿ ಜಂಕ್ಷನ್‌ನಲ್ಲಿ ಹುಲಿವೇಷ ಸ್ಪರ್ಧೆ ನಡೆಯಲಿದೆ. ಒಟ್ಟು 15 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಸಾವಿರಾರು ಮಂದಿಗೆ ಸ್ಪರ್ಧೆ ವೀಕ್ಷಣೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ
ಬೃಹತ್‌ ಎಲ್‌ಇಡಿ ಸ್ಕ್ರೀನ್‌ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಕ್ರಮವಾಗಿ 30,333, 20,222 ಮತ್ತು 10111 ನಗದು ಪುರಸ್ಕಾರ ನೀಡಲಾಗುವುದು. ಒಳ್ಳೆಯ ಕುಣಿತಗಾರರಿಗೆ ವೈಯಕ್ತಿಕ ಬಹುಮಾನ ಹಾಗೂ ಇತರ ತಂಡಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. 1995ರಲ್ಲಿ ಸ್ಥಾಪನೆಗೊಂಡ ಈ ಬಳಗವು ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ನಿರಂತರವಾಗಿ ಹುಲಿವೇಷ ಹಾಕುತ್ತಿದ್ದು, ಈವರೆಗೆ ಉಡುಪಿ ಸೇರಿದಂತೆ ಹೊರ ರಾಜ್ಯ, ಜಿಲ್ಲೆಗಳಲ್ಲಿ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದರು.
ಗೋಷ್ಠಿಯಲ್ಲಿ ಬಳಗದ ಪ್ರಮುಖರಾದ ಕಿಶೋರ್‌ರಾಜ್‌, ವಿನೋದ್‌ ಶೇರಿಗಾರ್‌, ಭಗವಾನ್‌ದಾಸ್‌, ಗಣೇಶ್‌ರಾಜ್‌ ಸರಳೇಬೆಟ್ಟು ಇದ್ದರು.