ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪರ್ಕಳ ವಿಂಶತಿ ವರ್ಷ ಹೊಸ್ತಿಲಲ್ಲಿದ್ದು, ಸಂಘವು 2020-21ನೇ ಸಾಲಿನಲ್ಲಿ ವರ್ಷಾಂತ್ಯಕ್ಕೆ ₹1.55 ಕೋಟಿ ಪಾಲು ಬಂಡವಾಳ, ₹ 6.99 ಕೋಟಿ ಸ್ವಂತ ನಿಧಿಗಳು, ₹73.29 ಕೋಟಿ ಠೇವಣಾತಿ, ₹52.53 ಕೋಟಿ ಸಾಲಗಳು ಹಾಗೂ ₹83.28 ಕೋಟಿ ದುಡಿಯುವ ಬಂಡವಾಳದೊಂದಿಗೆ ದೇಶಕ್ಕೆ ತಗುಲಿದ ಸಾಂಕ್ರಾಮಿಕ ಪಿಡುಗಿನ ಸಂದಿಗ್ಧ ಸ್ಥಿತಿಯಲ್ಲಿಯೂ ಸಂಸ್ಥೆಯು ₹1.45 ಕೋಟಿ ನಿವ್ವಳ ಲಾಭಗಳಿಸಿ ಸಹಕಾರಿ ರಂಗದಲ್ಲಿ ಮುನ್ನುಗ್ಗುತ್ತಿದೆ.
ಪರ್ಕಳ ಪ್ರಧಾನ ಕಚೇರಿ, ಬಂಟಕಲ್ಲು ಶಾಖೆ, ಮಣಿಪಾಲ ಶಾಖೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಿರಿಯಡಕ, ಕುಕ್ಕೆಹಳ್ಳಿ ಮತ್ತು ಉಡುಪಿ ಒಟ್ಟು 6 ಶಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಎಲ್ಲಾ ಶಾಖೆಗಳು ಅತ್ಯುತ್ತಮ ಸಾಧನೆ ಮಾಡಿದೆ. ಸಂಘದ ಆಡಳಿತ ಮಂಡಳಿಯ ಕಾರ್ಯವೈಖರಿ, ಉತ್ತಮ ನಿರ್ಣಯಗಳು ಸಂಸ್ಥೆಯ ಸದಸ್ಯರ ತುಂಬು ಹೃದಯದ ಸಹಕಾರ ಸಂಘದ ಅಭಿವೃದ್ಧಿಗೆ ಕಾರಣವಾಗಿದೆ.
ಪರ್ಕಳದಲ್ಲಿ 20 ಸೆಂಟ್ಸ್ ಜಾಗವನ್ನು ಖರೀದಿಸಿ ಸುಸಜ್ಜಿತವಾದ ಪ್ರಧಾನ ಕಚೇರಿಗೆ ಸುಂದರ ಕಟ್ಟಡ ನಿರ್ಮಿಸಲು ಆಡಳಿತ ಮಂಡಳಿ ರೂಪುರೇಷೆಗಳನ್ನು ನಿರ್ಮಿಸಿದ್ದು ಸದಸ್ಯರಿಗೆ ಅತ್ಯುತ್ತಮ ಸೇವೆ ನೀಡಲು ಸಂಸ್ಥೆಯು ಉತ್ತಮ ಕಾರ್ಯಯೋಜನೆಗಳನ್ನು ರೂಪಿಸಿದೆ. ಸಾಲಗಳಿಗೆ ಕಡಿಮೆ ಬಡ್ಡಿದರ, ಸೇವಾ ಶುಲ್ಕವಿಲ್ಲದ ಸಾಲ ಸೌಲಭ್ಯ, ಸೇಫ್ ಲಾಕರ್ ವ್ಯವಸ್ಥೆ, ಠೇವಣಿಗೆ ಅತ್ಯಾಕರ್ಷಕ ಬಡ್ಡಿದರ ಹೊಂದಿದೆ. ಇದಲ್ಲದೆ ಪರ್ಕಳ ಶಾಖೆಯಲ್ಲಿ ಇ-ಸ್ಟಾಂಪಿಂಗ್ ಸೇವೆಯನ್ನು ಪ್ರಪ್ರಥಮವಾಗಿ ಪ್ರಾರಂಭಿಸಿ ಉತ್ತಮ ದೃಢ ಸಹಕಾರಿ ಸಂಘವಾಗಿ ಪರ್ಕಳದಂತಹ ಸಣ್ಣ ಪ್ರದೇಶದಲ್ಲಿ ಬೆಳೆಯುತ್ತಿದೆ.