ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪರ್ಕಳ ಇದರ ವತಿಯಿಂದ ಹೆರ್ಗ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಧನಸಹಾಯ ನೀಡಿ ಗೌರವಾರ್ಪಣೆ ಸಲ್ಲಿಸುವ ಸಮಾರಂಭ ಪರ್ಕಳ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಕೋವಿಡ್ 19 ವಾರಿಯರ್ಸ್ ಗಳಾಗಿ ಜೀವದ ಹಂಗು ತೊರೆದು ಜನ ಸೇವೆ ಮಾಡಿದ 11 ಮಂದಿ ಆಶಾಕಾರ್ಯಕರ್ತೆಯರನ್ನು ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿಯ ಅಧ್ಯಕ್ಷ ಅಶೋಕ ಕಾಮತ್ ಕೆ. ಅವರು, ಆಶಾ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರ ಆರ್. ನಾಯಕ್ ಆಶಾ ಕಾರ್ಯಕರ್ತೆಯರಿಗೆ ಶುಭಹಾರೈಸಿದರು. ಸೊಸೈಟಿಯ ಉಪಾಧ್ಯಕ್ಷ ಪಾಂಡುರಂಗ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸೊಸೈಟಿಯ ನಿರ್ದೇಶಕರುಗಳಾದ ಬಿ. ರಾಮಕೃಷ್ಣ ನಾಯಕ್ ಪರ್ಕಳ, ನರಸಿಂಹ ನಾಯಕ್ ಮಣಿಪಾಲ, ಎನ್. ಸದಾನಂದ ನಾಯಕ್ ಹೆರ್ಗ, ಮಹೇಶ್ ನಾಯಕ್ ಹಿರಿಯಡ್ಕ, ರವೀಂದ್ರ ಪಾಟ್ಕರ್ ಬಂಟಕಲ್, ವಿಜೇತ್ ಕುಮಾರ್ ಬೆಳ್ಳರ್ಪಾಡಿ, ಗಣಪತಿ ನಾಯಕ್ ಕೆ. ಪರ್ಕಳ, ಗಣಪತಿ ಪ್ರಭು ಕುಕ್ಕೆಹಳ್ಳಿ, ಜಯಂತಿ ಪರ್ಕಳ, ರೂಪ ದೇವಿನಗರ, ಶ್ರೀ ನರಸಿಂಹ ದೇವಸ್ಥಾನ ನರಸಿಂಗೆ ಆಡಳಿತ ಮುಕ್ತೇಸರ ಮತ್ತು ಅಧ್ಯಕ್ಷರುಗಳಾದ ರಮೇಶ್ ಸಾಲ್ವನ್ಕಾರ್ ಅಲೆವೂರು, ಆನಂದ ನಾಯಕ್ ಅರ್ಬಿ ಉಪಸ್ಥಿತರಿದ್ದರು.
ಸೊಸೈಟಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ನಿತ್ಯಾನಂದ ನರಸಿಂಗೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.