ಉಡುಪಿ: ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಮೈಸೂರಿನ ನಾದಬ್ರಹ್ಮ ಆಡಿಟೋರಿಯಂನಲ್ಲಿ ಸೆಪ್ಟೆಂಬರ್ 14 ಶನಿವಾರದಂದು ಏರ್ಪಡಿಸಿದ್ದ “ಶ್ರೀ ದುರ್ಗಾ ನೃತ್ಯೋತ್ಸವ-2019”
ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಕೋಟೇಶ್ವರ ಹೊದ್ರೋಳಿಯ ಕುಮಾರಿ ಶ್ರೇಯಾ ಆಚಾರ್ಯ ಸಬ್ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದು “ಶ್ರೀ ದುರ್ಗಾ ನಾಟ್ಯ ಮಯೂರಿ-2019” ಎಂಬ ಬಿರುದಿಗೆ ಪಾತ್ರಳಾಗಿದ್ದಾರೆ.
ತಮ್ಮ ಚೊಚ್ಚಲ ಪ್ರದರ್ಶನದಲ್ಲಿಯೇ ಪ್ರಥಮ ಬಹುಮಾನ ಪಡೆದ ಕುಮಾರಿ ಶ್ರೇಯಾ, ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ಗುರು ವಿದುಷಿ ಪ್ರವಿತಾ ಅಶೋಕ್ ಇವರಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.
ಇವರು ಹೊದ್ರೋಳಿಯ ಸಂಧ್ಯಾ ಹಾಗೂ ಶ್ರೀಪತಿ ಆಚಾರ್ಯರ ಸುಪುತ್ರಿ, ಪ್ರಸ್ತುತ ಕುಂದಾಪುರದ H.M.M ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ.