ಉಡುಪಿ: ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಉಂಟಾದ ಅತಿವೃಷ್ಠಿಯಿಂದಾಗಿ ಭತ್ತದ ಬೆಳೆ ಹಾನಿಯಾಗಿದ್ದು,
ಭತ್ತದ ಬೆಳೆ ಹಾನಿಯಾದ ತಾಕುಗಳಲ್ಲಿ ರೈತರು ಅಲ್ಪಾವಧಿ ತಳಿಗಳಾದ ಜ್ಯೋತಿ ಹಾಗೂ ಮಧ್ಯಮಾವಧಿ ತಳಿಯಾದ ಉಮಾ ಬಿತ್ತನೆ ಬೀಜಗಳನ್ನು ಮರುಬಿತ್ತನೆಗೆ ಬಳಸಬಹುದಾಗಿದ್ದು, ಈ ತಳಿಗಳ ಬಳಕೆಯಿಂದ ನಿಗದಿತ ಅವಧಿಯಲ್ಲಿ ಬೆಳೆ ಪಡೆದು ಕಟಾವು ಕಾರ್ಯ ಕೈಗೊಳ್ಳಬಹುದಾಗಿದೆ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜವನ್ನು ಪಡೆಯದ ರೈತರು ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ, ಅಲ್ಪಾವಧಿ ತಳಿಗಳನ್ನು ಪಡೆದು ಮರು ಬಿತ್ತನೆ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.