ಸೂಕ್ತ ಕಾರಣವಿಲ್ಲದೆ ವಾಹನ ತಪಾಸಣೆ ನಡೆಸುವಂತಿಲ್ಲ: ಆದೇಶ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವೆಂದ ಡಿಜಿಪಿ ಪ್ರವೀಣ್ ಸೂದ್

ಬೆಂಗಳೂರು: ದಾಖಲೆಗಳ ಪರಿಶೀಲನೆಗಾಗಿ ವಾಹನಗಳನ್ನು ಸುಖಾಸುಮ್ಮನೆ ತಡೆದು ನಿಲ್ಲಿಸದಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತೊಮ್ಮೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಆದೇಶ ಅನ್ವಯ. ಡ್ರಿಂಕ್ ಆ್ಯಂಡ್ ಡ್ರೈವ್ ಮತ್ತು ಕಣ್ಣಿಗೆ ಕಾಣುವಂತಹ ಸಂಚಾರ ನಿಯಮ ಉಲ್ಲಂಘನೆ, ಅಪರಾಧ ಕಂಡುಬಂದ ಹೊರತಾಗಿ ಕೇವಲ ದಾಖಲೆಗಳ ಪರಿಶೀಲನೆಗಾಗಿ ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುವಂತಿಲ್ಲ. ಈ ಸೂಚನೆಗಳನ್ನು ಕೆಳ ಹಂತಕ್ಕೆ ತಲುಪಿಸಿ ಮತ್ತು ಅದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಿ  ಎಂದು ಸೂದ್ ಎಚ್ಚರಿಸಿದ್ದಾರೆ. […]

ಬೂದು ನೀರು ನಿರ್ವಹಣೆ ಕುರಿತ ಕಿರು ಚಿತ್ರ ನಿರ್ಮಾಣ ಸ್ಪರ್ಧೆ

ಉಡುಪಿ: ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮೀಣ ಭಾಗದ ಜನವಸತಿ ಪ್ರದೇಶಗಳಲ್ಲಿ ಬೂದು ನೀರು ನಿರ್ವಹಣೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಜೀವ ಜಲ-ಜಲ ನಿಧಿ ವಿಷಯದ ಬಗ್ಗೆ ಕಿರುಚಿತ್ರ ನಿರ್ಮಾಣ ಸ್ಪರ್ಧೆಯನ್ನು ಕನ್ನಡ, ತುಳು ಹಾಗೂ ಆಂಗ್ಲ ಭಾಷೆಯಲ್ಲಿ ಆಯೋಜಿಸಲಾಗಿದೆ. ಸಿದ್ಧಪಡಿಸಿದ ವೀಡಿಯೋಗಳನ್ನು ಸ್ವಚ್ಛ ಭಾರತ್ ಮಿಷನ್ (ಗ್ರಾ) ಇ-ಮೇಲ್ nbaudp@gmail.com ಗೆ ಸಲ್ಲಿಸಲು ಆಗಸ್ಟ್ 18 ಕೊನೆಯ ದಿನ. ಪ್ರಶಸ್ತಿಯು ನಗದು ಬಹುಮಾನ ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ: […]

ಅತಿವೃಷ್ಟಿಯಿಂದ ಬೆಳೆ ಹಾನಿ: ಮರುಬಿತ್ತನೆಗೆ ಅಲ್ಪಾವಧಿ ತಳಿಗಳ ಬೀಜ ಲಭ್ಯ

ಉಡುಪಿ: ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಉಂಟಾದ ಅತಿವೃಷ್ಠಿಯಿಂದಾಗಿ ಭತ್ತದ ಬೆಳೆ ಹಾನಿಯಾಗಿದ್ದು, ಭತ್ತದ ಬೆಳೆ ಹಾನಿಯಾದ ತಾಕುಗಳಲ್ಲಿ ರೈತರು ಅಲ್ಪಾವಧಿ ತಳಿಗಳಾದ ಜ್ಯೋತಿ ಹಾಗೂ ಮಧ್ಯಮಾವಧಿ ತಳಿಯಾದ ಉಮಾ ಬಿತ್ತನೆ ಬೀಜಗಳನ್ನು ಮರುಬಿತ್ತನೆಗೆ ಬಳಸಬಹುದಾಗಿದ್ದು, ಈ ತಳಿಗಳ ಬಳಕೆಯಿಂದ ನಿಗದಿತ ಅವಧಿಯಲ್ಲಿ ಬೆಳೆ ಪಡೆದು ಕಟಾವು ಕಾರ್ಯ ಕೈಗೊಳ್ಳಬಹುದಾಗಿದೆ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜವನ್ನು ಪಡೆಯದ ರೈತರು ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ, ಅಲ್ಪಾವಧಿ ತಳಿಗಳನ್ನು ಪಡೆದು ಮರು ಬಿತ್ತನೆ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ […]

ವಿಶ್ವ ಯುವ ಕೌಶಲ್ಯ ದಿನದ ಪ್ರಯುಕ್ತ ಜಿಲ್ಲೆಯ ಯುವಕ-ಯುವತಿಯರಿಗೆ ಉಚಿತ ತರಬೇತಿ,ಉದ್ಯೋಗಾವಕಾಶ: ಪ್ರೇಮ್ ಪ್ರಸಾದ್ ಶೆಟ್ಟಿ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯಲ್ಲಿ ಇಂದು “ವಿಶ್ವ ಯುವ ಕೌಶಲ್ಯ ದಿನ”ವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ, “ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮುತ್ತಿರುವ ಈ ಕಾಲಘಟ್ಟದಲ್ಲಿ ದೇಶದ ಯುವ ಶಕ್ತಿಯನ್ನು ಕೌಶಲ್ಯ ಭರಿತರನ್ನಾಗಿಸುವ ಸವಾಲು ನಮ್ಮೆಲ್ಲರ ಮೇಲಿದೆ. ಇಲ್ಲದೇ ಹೋದಲ್ಲಿ ಈ ಯುವ ಶಕ್ತಿಯು ನಿರುದ್ಯೋಗ, ಅಸಾಮಾಜಿಕ ಕೃತ್ಯಗಳಿಗೆ ಬಲಿಯಾಗುವ […]

ಕಂಬದಕೋಣೆ ಬಳಿ ಬೈಕ್ ಅಪಘಾತ: ಆಂಧ್ರ ಮೂಲದ ಇಬ್ಬರು ವಿದ್ಯಾರ್ಥಿಗಳು ಮೃತ್ಯುವಶ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಂಬದಕೋಣೆ ಬಳಿಯ ಸೇತುವೆ ಸಮೀಪ ಬೈಕ್ ಸ್ಕಿಡ್ ಆಗಿದ್ದು, ಸವಾರರಿಬ್ಬರು ಸಾವನ್ನಪ್ಪಿದ ದುರ್ಘಟನೆ ಭಾನುವಾರ ಸಂಭವಿಸಿದೆ. ಆಂಧ್ರಪ್ರದೇಶದ ಆದಿತ್ಯ ರೆಡ್ಡಿ(18) ಮತ್ತು ತರುಣ್ ಕುಮಾರ್ ರೆಡ್ಡಿ( 19) ಸಾವನಪ್ಪಿದವರು. ಇವರಿಬ್ಬರೂ ಉಡುಪಿಯ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಾಗಿದ್ದಾರೆ. ಸವಾರರು ಕುಂದಾಪುರ ಕಡೆಯಿಂದ ಬೈಂದೂರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸುದ್ದಿ ತಿಳಿದ ತಕ್ಷಣ ಗಂಗೊಳ್ಳಿಯ 24*7 ಆಪತ್ಭಾಂಧವ ಆಂಬ್ಯುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. […]