ಉಡುಪಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೆಲವು ಜನರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ. ಸಂಸದರು ಕ್ಷೇತ್ರದ ಕಾರ್ಯ ಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ #ShobhaGoBack ಎಂಬ ಅಭಿಯಾನವನ್ನು ಟ್ವಿಟರ್ನಲ್ಲಿ ಆರಂಭಿಸಲಾಗಿದೆ. ಕರ್ನಾಟಕದ ಬಿಜೆಪಿ ನಾಯಕರು ಇದಕ್ಕೆ ಯಾವ ಉತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. ಜೆಡಿಎಸ್ ಸೇರುವ ಕುರಿತು ಸ್ಪಷ್ಟನೆ ಕೊಟ್ಟ ಜಯಪ್ರಕಾಶ ಹೆಗ್ಡೆ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಈ ಬಾರಿಯೂ ಶೋಭಾ ಕರಂದ್ಲಾಜೆ ಅವರು ಅಭ್ಯರ್ಥಿಯಾಗುವ ಸಂಭವವಿದೆ ಎಂಬ ಸುದ್ದಿ ಬುಧವಾರ ಹಬ್ಬಿತ್ತು. ಗುರುವಾರ ಶೋಭಾ ಗೋ ಬ್ಯಾಕ್ ಎಂಬ ಟ್ವಿಟರ್ ಅಭಿಯಾನ ಸದ್ದು ಮಾಡುತ್ತಿದೆ.
ಜೆಡಿಎಸ್ ಸೇರುವ ಕುರಿತು ಸ್ಪಷ್ಟನೆ ಕೊಟ್ಟ ಜಯಪ್ರಕಾಶ ಹೆಗ್ಡೆ
ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಈ ಬಾರಿಯೂ ಶೋಭಾ ಕರಂದ್ಲಾಜೆ ಅವರು ಅಭ್ಯರ್ಥಿಯಾಗುವ ಸಂಭವವಿದೆ ಎಂಬ ಸುದ್ದಿ ಬುಧವಾರ ಹಬ್ಬಿತ್ತು. ಗುರುವಾರ ಶೋಭಾ ಗೋ ಬ್ಯಾಕ್ ಎಂಬ ಟ್ವಿಟರ್ ಅಭಿಯಾನ ಸದ್ದು ಮಾಡುತ್ತಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು? ಈ ಬಾರಿ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು. ಸ್ಥಳೀಯ ಅಭ್ಯರ್ಥಿ ಯಾರೇ ಆದರೂ ತೊಂದರೆಯಿಲ್ಲ ಅವರಿಗೆ ಬೆಂಬಲವಿದೆ, ಶೋಭಾ ಕರಂದ್ಲಾಜೆ ಅವರು ಅಭ್ಯರ್ಥಿಯಾದರೆ ಖಂಡಿತ ಬೆಂಬಲ ನೀಡುವುದಿಲ್ಲ ಎಂದು ಅಭಿಯಾನದ ಮೂಲಕ ಸಂದೇಶ ರವಾನಿಸಲಾಗುತ್ತಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆಗೆ ಟಿಕೆಟ್ ಇಲ್ಲ!
ಸಂಸದರ ವಿರುದ್ಧ ಆಕ್ರೋಶ ಸ್ಥಳೀಯರು ಸಂಸದರು ಆದರೆ ಮಾತ್ರ ನಮ್ಮ ಸಮಸ್ಯೆಗಳಿಗೆ ಧ್ವನಿಯಾಗುತ್ತಾರೆ. ಕಳೆದ 5 ವರ್ಷ ನಾವು ಸಂಸದರು ಇದ್ದು ಇಲ್ಲದಂತೆ ನಿರ್ಜೀವವಾಗಿ ಇರುವುದು ಕಂಡಿದ್ದೇವೆ ಎಂದು ಆರೋಪಿಸಲಾಗುತ್ತಿದೆ. ಬಿಜೆಪಿ ಈ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಲಿದೆಯೇ? ಎಂದು ಕಾದು ನೋಡಬೇಕು.
ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಸ್ಥಳೀಯ ಹೊಸ ಮುಖ ಅಗತ್ಯ. ಕಾರ್ಯಕರ್ತರನ್ನು ಕಡೆಗಣಿಸುವ ಸಂಸದರು ಬೇಡ ಎಂಬ ಕೂಗು ಎದ್ದಿದೆ.