ದೃಢ ಸಂಕಲ್ಪದಿಂದ ಮುನ್ನಡೆದರೆ ಭಗವಂತನ ಸಿದ್ಧಿ: ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ

ಕಾರ್ಕಳ: ಒಳ್ಳೆಯ ವಿಚಾರ ಶುಧ್ಧ ಅಂತಃಕರಣ ಮನಸ್ಸು ದೃಢ ಸಂಕಲ್ಪದಿಂದ ಮುನ್ನಡೆದರೆ ಭಗವಂತನ ಸಿಧ್ಧಿ ಎಂದು ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದ್ದಾರೆ.

ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀಪುರ ಹಿರ್ಗಾನ ದ ಸ್ವಾಮೀಜಿ ಅವರ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು ಮನಸ್ಸು ವಿಚಲಿತವಾಗದೆ ಏಕಾಗ್ರತೆಯನ್ನು ಸ್ಥಾಪಿಸಿದಾಗ ಭಕ್ತಿಯಲ್ಲಿ ಶ್ರೇಷ್ಠ ಶ್ರೀಮಂತಿಕೆ ಹೊಂದಲು ಸಾಧ್ಯ, ದೇವರ ಮೇಲಿನ ಭಾವನೆಯೆ ಭಕ್ತಿ ಯ ಮೂಲವಾಗಿದ್ದು , ತಂದೆತಾಯಿ ಗುರುಗಳು ದೇವ ಸ್ವರೂಪಿಗಳಿದ್ದಂತೆ ಎಂದರು.

ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಭಕ್ತಿಯ ಹಾದಿ ಯಶಸ್ಸು ಪ್ರಾಪ್ತಿ ಯಾಗುತ್ತದೆ ಎಂದರು.

ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ನಾಯಕ್ ಮಾತನಾಡಿ, ಸಮಾಜದ ಪುಣ್ಯ ಕಾರ್ಯದ ಫಲವಾಗಿ ಬೆಳ್ಳಿಹಬ್ಬದ ಸಂಭ್ರಮವು ಆಚರಿಸಲು ಖುಷಿಯಾಗುತ್ತಿದ್ದು ಇಪ್ಪತೈದು ವರ್ಷಗಳ ಸುಧೀರ್ಘವಾದ ಹಾದಿಯಿಂದ ಅನೇಕ ಶಾಖಾ ಮಠಗಳು ಜೀರ್ಣೋಧ್ಧಾರವಾಗಿವೆ ಎಂದರು.

ಮುಖ್ಯ ಅತಿಥಿ ಯಾಗಿದ್ದ ಕುಂಡೆರಿ ಜಯಂತ ನಾಯಕ್ ಮಾತನಾಡಿ, ಸಾತ್ವಿಕ ಜೀವನ , ಸನ್ನಡತೆಯ ಬದುಕು, ಗುರುಭಕ್ತಿ , ಸಹಿಷ್ಣುತೆ ಯು ಉತ್ತಮ ಜೀವನ ಕ್ಕೆ ಶ್ರೀರಕ್ಷೆ ಎಂದರು.

ಸನ್ಮಾನ : ರಾಜಪುರ ಸಾರಸ್ವತ ಸಂಘದ ಅಧ್ಯಕ್ಷ ಅಶೋಕ್ ನಾಯಕ್,, ದೇವಸ್ಥಾನ ಆಡಳಿತ ಮೊಕ್ತೆಸರ ರಘುರಾಮ ಪ್ರಭು, ಕರ್ನಾಟಕ ಬ್ಯಾಂಕ್ ಉಪೇಂದ್ರ ಪ್ರಭು ದಂಪತಿಗಳು, ಸಮಿತಿ ಯ ಕಾರ್ಯಾಧ್ಯಕ್ಷ ಸಂತೋಷ್ ವಾಗ್ಳೆ, ಪ್ರಸಿದ್ಧ ಚೆಂಡೆವಾದಕ ಭಾನು ಪ್ರಕಾಶ್ ನಾಯಕ್,ದೇವಸ್ಥಾನ ಅರ್ಚಕರಾದ ಕಮಲಾಕ್ಷ ಭಟ್ ,ಶ್ರೀಕಾಂತ್ ಭಟ್, ವ್ಯಾಸರಾಯ ಭಟ್ ,ಸದಾಶಿವ ಪ್ರಭು ಎಳ್ಳಾರೆ, ಮಂಜುನಾಥ್ ನಾಯಕ್ ಜೋಡುರಸ್ತೆ ,ರಾಮಚಂದ್ರ ಭಟ್ ಇತರರಿಗೆ ಸನ್ಮಾನಿಸಲಾಯಿತು.

ಸಭೆಯಲ್ಲಿ ಬಂಟಕಲ್ಲು ದೇವಸ್ಥಾನ ದ ಮೊಕ್ತೆಸರ ಶಶಿಧರ್ ವಾಗ್ಳೆ, ನರಸಿಂಗೆ ದೇವಸ್ಥಾನದ ಮೊಕ್ತೆಸರ ರಮೇಶ್‌ ಸಾಳ್ವಂಕರ್, ಅಲ್ಚಾರು ರಾಮಚಂದ್ರ ನಾಯಕ್, ಪುತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನ ದ ವಿಕಾಸ್ ಪುತ್ತೂರು, ಮಹಾಲಕ್ಷ್ಮಿ ದೇವಸ್ಥಾನ ದ ಮೊಕ್ತೆಸರ ರಘುರಾಮ ಪ್ರಭು, ಮಹಿಳಾಮಂಡಳಿಯ ಅಧ್ಯಕ್ಷೆ ಉಷಾ ನಾಯಕ್, ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ನಾಯಕ್, ಸಂತೋಷ್ ವಾಗ್ಳೆ, ಅಶೋಕ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು ನಿತ್ಯಾನಂದ ನಾಯಕ್  ಪ್ರಾಸ್ತಾವಿಕ ಮಾತನಾಡಿದರು.
ಬಾಲಕೃಷ್ಣ ನಾಯಕ್ ಕಾರ್ಯಕ್ರಮ ನಿರೂಪಿಸಿದರು