ಉಡುಪಿ: ಶಿರಿಯಾರ-ಕಲ್ಮರ್ಗಿ ಶ್ರೀರಾಮ ಮಂದಿರದ ಬಳಿಯಲ್ಲಿ ಪ್ರೀತಿ ನಾಯಕ್ ಅವರ ಮಾಲಕತ್ವದಲ್ಲಿ ಸೇವಾ ಕೇಂದ್ರದ ಉದ್ಘಾಟನೆ ನಡೆಯಿತು.
ಇಲ್ಲಿ ಕರೆಂಟ್ ಬಿಲ್, ಆರ್ಟಿಸಿ ಜೆರಾಕ್ಸ್, ಟಿವಿ, ಮೊಬೈಲ್ ರೀಚಾರ್ಜ್, ಎಲ್ಐಸಿ ಪ್ರೀಮಿಯಂ ಇತ್ಯಾದಿ ಸೇವೆಗಳು ಲಭ್ಯವಿದೆ ಎಂದು ಮಾಲಕಿ ಪ್ರೀತಿ ನಾಯಕ್ ತಿಳಿಸಿದರು.
ಬ್ರಹ್ಮಾವರ, ಕುಂದಾಪುರ ತಾಲೂಕು ಕಚೇರಿ, ಕೋಟ ನಾಡಕಚೇರಿಗೆ ರೈತರ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ಈ ಕೇಂದ್ರ ತೆರೆಯಲಾಗಿದೆ ಎಂದು ಉಡುಪಿಯ ನೋಟರಿ ಕಲ್ಮರ್ಗಿ ಶಿರಿಯಾರ ಪ್ರಭಾಕರ್ ನಾಯಕ್ ತಿಳಿಸಿದ್ದಾರೆ.
ಉದ್ಯಮಿ ಕಲ್ಮರ್ಗಿ ಎಸ್. ಉಮೇಶ ನಾಯಕ್, ಎತ್ತಿನಟ್ಟಿ ಸದಾನಂದ ನಾಯಕ, ರಾಮಾಂಜನೇಯ ಸೇವಾ ಟ್ರಸ್ಟಿನ ಅಧ್ಯಕ್ಷ ಕಲ್ಮರ್ಗಿ ನಾಗೇಶ್ ನಾಯಕ್, ವೆಂಕಟೇಶ್ ಶೆಣೈ, ಭೋಜರಾಜ ಕುಲಾಲ್, ರಾಘವೇಂದ್ರ, ಕೃಷ್ಣ, ಸದಾನಂದ ಪೈ, ರತ್ನಾಕರ ಶೆಣೈ, ಗಿರಿಧರ, ಶಿವಾನಂದ ಶ್ಯಾನುಭೊಗ್, ಉಪಸ್ಥಿತರಿದ್ದರು.