ಲಸಿಕೆ ಕೊಡಿಸುವುದಾಗಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ; ಪ್ರಕರಣ ದಾಖಲು

ಮಂಗಳೂರು: ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ರಾತ್ರೋರಾತ್ರಿ 85 ಮಹಿಳೆಯರನ್ನು ಸಾಗಾಟ ಮಾಡಿರುವ ಘಟನೆ ಮೂಡಬಿದಿರೆ ತಾಲೂಕಿನ ಕಾರ್ನಾಡು ಗ್ರಾಮದಲ್ಲಿ ನಡೆದಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯ ಮ್ಯಾನೇಜರ್​ ಒಬ್ಬರು ಮಂಗಳವಾರ ರಾತ್ರಿ ಕೊರೊನಾ ಲಸಿಕೆ ನೀಡುವುದಾಗಿ 85 ಮಹಿಳೆಯರನ್ನು, ತಮ್ಮ ಸಂಸ್ಥೆಯ ಬಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಗ್ರಾಮಸ್ಥರು ತಡರಾತ್ರಿ ಯಾವ ಲಸಿಕೆ ಕೊಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಘಟನೆ ಸಂಬಂಧ ಬಸ್​ ಚಾಲಕ ಪ್ರವೀಣ್, ಆಸ್ಪತ್ರೆ ಮ್ಯಾನೇಜರ್ ನವಾಜ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.