ಆಗಸ್ಟ್ 31 ರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾರಂಭ

ಶಿವಮೊಗ್ಗ: ಆಗಸ್ಟ್ 31 ರಿಂದ ಶಿವಮೊಗ್ಗ ಜಿಲ್ಲೆಯ ನೂತನ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.

ಅವರು ಶುಕ್ರವಾರ ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಜೊತೆ ಮಾಹಿತಿ ಹಂಚಿಕೊಂಡು, ಬಾಂಬ್ ಥ್ರೆಟ್ ಕಂಟಿನಿಟಿ ಪ್ಲಾನ್ ತಮ್ಮ ಅನುಮತಿಯನ್ನು ಹಿಂಪಡೆದಿದ್ದರಿಂದ ಸೇವೆ ಮುಂದೂಡಲಾಗಿದ್ದು ಇದೀಗ ಆಗಸ್ಟ್ 31 ರಿಂದ ವಿಮಾನ ಸಂಚಾರ ಆರಂಭ ವಾಗಲಿದೆ. ಉಡಾನ್ ಯೋಜನೆಯಡಿ ಮೂರು ವಿಮಾನ ಮಾರ್ಗಗಳಿಗೆ ಟೆಂಡರ್ ಕರೆಯಲಾಗಿದೆ. ಸ್ಪೈಸ್ ಜೆಟ್, ಸ್ಟಾರ್ ಏರ್ ಲೈನ್ಸ್ ಮತ್ತು ರಿಲಯನ್ಸ್ ಏರ್ ಎಂಬ ಮೂರು ವಿಮಾನಯಾನ ಸಂಸ್ಥೆಗಳು ಈ ಟೆಂಡರ್ ನಲ್ಲಿ ಪಾಲ್ಗೊಂಡಿವೆ ಎಂದರು.

ಶಿವಮೊಗ್ಗ-ಗೋವಾ, ಶಿವಮೊಗ್ಗ- ಹೈದರಾಬಾದ್, ಶಿವಮೊಗ್ಗ- ತಿರುಪತಿ ಮತ್ತು ಶಿವಮೊಗ್ಗ- ಬೆಂಗಳೂರು ವಿಮಾನಯಾನ ಮಾರ್ಗಗಳಿಗೆ ಅನುಮತಿ ಸಿಕ್ಕಿದೆ. ಮೊದಲ ಮೂರು ತಿಂಗಳ ಕಾಲ ಹಗಲು ಮಾತ್ರ ಕಾರ್ಯಚರಣೆ ನಡೆಸಲಿವೆ. ಬಳಿಕ ರಾತ್ರಿ ವೇಳೆ ಕಾರ್ಯಚರಣೆ ನಡೆಯಲಿದೆ. ಶಿವಮೊಗ್ಗದಿಂದ ಮುಂಬೈ ಮಹಾನಗರಿಗೂ ಸಂಪರ್ಕ ಕಲ್ಪಿಸಲು ಕೋರಿಕೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.