“ಶ್ರೀ ವೈ ಎಲ್ ಎನ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನಿಂದ ಶಂಕರ ಜಯಂತಿ ಹಾಗೂ ಲೋಕಶಂಕರ ನಾಟಕ ರೂಪಕ ಪ್ರದರ್ಶನ”

ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಹವಾನಿಯಂತ್ರಿತ ಸಭಾಭವನದಲ್ಲಿ 21-4- 2026 ರ ಮಂಗಳವಾರ ಸಂಜೆ 5:00 ಗಂಟೆಗೆ ಶ್ರೀ ವೈ ಎಲ್ ಎನ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ಶಂಕರ ಜಯಂತಿ ಆಚರಣೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಡಾ. ವಿದ್ಯಾ ಎಸ್ ರಾವ್ ಇವರ ಪ್ರಾರ್ಥನೆಯ ನಂತರ ಡಾ. ವೈ ಸುದರ್ಶನ್ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಶಾರದಾ ಭಜನಾ ಮಂಡಳಿಯ ಸದಸ್ಯರ ಶ್ರೀ ಆದಿ ಶಂಕರಾಚಾರ್ಯ ವಿರಚಿತ ಭವಾನಿ ಅಷ್ಟಕ ಗಾಯನದ ಹಿನ್ನೆಲೆ ಯೊಂದಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಲಾ ರಂಗದ ಕಾರ್ಯದರ್ಶಿಗಳಾದ ಶ್ರೀ ಮುರಳಿ ಕಡೆಕಾರ್ ಅತಿಥಿಗಳಾಗಿ ಆಗಮಿಸಿ ಕಲಾರಂಗದ ಈ ಸಭಾಭವನದ ಉದ್ಘಾಟನೆಯ ದಿನದಂದೆ ಇಲ್ಲಿ ಶ್ರೀ ಶಂಕರರ ಜಯಂತಿಯ ಆಚರಣೆಯು ನಡೆಯುತ್ತಿರುವುದು ಸಂಸ್ಥೆಗೆ ದೊರಕಿದ ಆಶೀರ್ವಾದ ಎಂದು ಹೇಳಿದರು. ಶಂಕರ ಜಯಂತಿ ಪ್ರಯುಕ್ತ ಎಂಟನೇ ತರಗತಿಯಿಂದ ಡಿಗ್ರಿವರೆಗೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು ಒಟ್ಟು 95 ವಿದ್ಯಾರ್ಥಿಗಳು ಪ್ರಬಂಧವನ್ನು ಸ್ವ ಹಸ್ತಾಕ್ಷರದಲ್ಲಿ ಬರೆದು ಭಾಗವಹಿಸಿದ್ದರು. ಈ ಸ್ಪರ್ಧೆಯ ವಿಜೇತರುಗಳಿಗೆ ದಿ.ಎಂ ಕೃಷ್ಣಮೂರ್ತಿ ರಾವ್ ಇಂದ್ರಾಳಿ ಸ್ಮಾರಕ ಬಹುಮಾನವನ್ನು ಹಾಗೂ ಭಾಗವಹಿಸಿದ ಎಲ್ಲಾ 95 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ಸಂಸ್ಥೆಯ ಪರವಾಗಿ ನೀಡಲಾಯಿತು. ಬಹುಮಾನದ ಪ್ರಾಯೋಜಕರಾದ ಶ್ರೀ ಸುಹಾಸ್ ರಾವ್ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಕೋರಿದರು. ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ರವಿರಾಜ್ ಹೆಚ್ ಪಿ, ಟ್ರಸ್ಟಿಗಳಾದ ಶ್ರೀ ವೈ ಭುವನೇಂದ್ರ ರಾವ್ , ಸ್ಥಾನಿಕ ಬ್ರಾಹ್ಮಣ ಸಂಘ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಗಣೇಶ ಹೆಬ್ಬಾರ್, ಇವರು ಅತಿಥಿಗಳಾಗಿ ಭಾಗವಹಿಸಿದ್ದರು. . ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಶ್ರೀ ಶೃಂಗೇರಿ ಮಠದಿಂದ ಮುತ್ತಿನ ಹಾರ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಆಶೀರ್ವಾದ ಪೂರ್ವಕವಾಗಿ ಕಳಿಸಿಕೊಡಲಾಗಿತ್ತು. . ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ ಉಡುಪಿ , ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಾಂಕರ ತತ್ವ ಪ್ರಸಾರ ಸಮಿತಿ ಗಳು ಕಾರ್ಯಕ್ರಮವನ್ನು ಆಯೋಜಿಸಲು ಸಹಕಾರ ನೀಡಿದ್ದರು. ಶ್ರೀ ರಾಘವೇಂದ್ರ ರಾವ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶಂಕರ ತತ್ವ ಪ್ರಸಾರ ಸಮಿತಿಯ ವಿಶ್ವನಾಥ್ ಶಾನುಭಾಗ್ ಧನ್ಯವಾದ ಸಮರ್ಪಿಸಿದರು. ಅತಿಥಿಗಳಿಗೆ ,ಕಲಾವಿದರಿಗೆ, ರಚನಕಾರರಿಗೆ, ಗೀತಾ ಕಾರರಿಗೆ ಟ್ರಸ್ಟ್ ಹಾಗೂ ಇಂಚರ ಸರ್ಜಿಕಲ್ ಕ್ಲಿನಿಕ್ ನ ವತಿಯಿಂದ ಸ್ಮರಣೆಕೆಯಾಗಿ ಪುಸ್ತಕಗಳನ್ನು ನೀಡಲಾಯಿತು. ಸಭಾ ಕಾರಕ್ರಮದ ನಂತರ ಶ್ರೀ ಗಣೇಶ್ ರಾವ್ ಎಲ್ಲೂರು ಇವರು ನಿರ್ದೇಶಿಸಿದ ಹಾಗೂ ಶ್ರೀ ರಾಘವೇಂದ್ರ ರಾವ್ ಇವರು ರಚಿಸಿದ ನಾಟಕ ರೂಪಕ ಲೋಕ ಶಂಕರ ಇದರ ಧ್ವನಿ ಬೆಳಕಿನ ಸಂಯೋಜನೆಯ ಹಿನ್ನೆಲೆಯ ಪ್ರದರ್ಶನ ನಡೆಯಿತು.ಶ್ರೀ ಪ್ರಭಾಕರ್ ಭಂಡಿ ಇವರು ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿದ್ದರು.ಸುಮಾರು 300ಕ್ಕೂ ಹೆಚ್ಚು ನಾಗರಿಕರು ಸಮಾರಂಭದಲ್ಲಿ ಭಾಗವಹಿಸಿ ನಾಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.