ಕರಂಬಳ್ಳಿ ಅಯ್ಯಪ್ಪವೃತಧಾರಿಗಳಿಂದ ಶಬರಿಮಲೆ ಯಾತ್ರೆ

ಉಡುಪಿ: ಶ್ರೀ ವೆಂಕಟರಮಣ ದೇವಸ್ಥಾನ ವಠಾರದಲ್ಲಿ ಕರಂಬಳ್ಳಿ ಶ್ರೀ ಅಯ್ಯಪ್ಪ ಸ್ವಾಮೀ ಭಕ್ತ ವೃಂದದವರ ಶಬರಿಮಲೆ ಯಾತ್ರೆಯ ವಿಧಿವಿಧಾನಗಳು ಮಂಜುಗುರುಸ್ವಾಮಿ ನೇತೃತ್ವದಲ್ಲಿ ಜರುಗಿತು. ವಿಶೇಷ ಅಲಂಕಾರ, ಹೂವಿನ ಮಂಟಪದಲ್ಲಿ ಮಹಾಪೂಜೆ, ಇರುಮುಡಿ ಕಟ್ಟುವಿಕೆ, ಸಾರ್ವಜನಿಕ ಅನ್ನಸಂತರ್ಪಣೆ, ಧಾರ್ಮಿಕ ಪೂಜಾ ವಿಧಾನ ನಡೆಸಿದ ಬಳಿಕ ವೃತಧಾರಿಗಳು ಶಬರಿಮಲೆ ಯಾತ್ರೆಗೆ ತೆರಳಿದರು.