ಮನೆಯಲ್ಲೇ ಕುಳಿತು ನಿಮ್ಮ ಪ್ರಾಡಕ್ಟ್ ಸೇಲ್ ಮಾಡಿ, ಕೈತುಂಬಾ ಗಳಿಸಿ: ಐಡಿಯಾ ಇಲ್ಲಿದೆ

ಇ-ಕಾಮರ್ಸ್ ಮೂಲಕ ಉದ್ಯಮಿಯಾಗಲು ಹೊಸ ಅವಕಾಶ

ತುಂಬಾ ಜನರು ಹಳ್ಳಿಗಳಲ್ಲಿ, ನಿಮ್ಮ ಮನೆಗಳಲ್ಲಿ ಹಪ್ಪಳ, ಸಂಡಿಗೆಯಿಂದ ಹಿಡಿದು, ಸೋಪು, ಟಾಯ್ಲೆಟ್ ಕ್ಲೀನರ್, ಜ್ಯುವೆಲರಿ ವಸ್ತುಗಳು, ಉಪ್ಪಿನಕಾಯಿ, ಹ್ಯಾಂಡಿಕ್ರಾಫ್ಟ್ ಹೀಗೇ ಹತ್ತು ಹಲವು ಗೃಹೋತ್ಪನ್ನಗಳನ್ನು ತಯಾರಿಸುತ್ತಿರಬಹುದು. ಆದರೆ, ಅವುಗಳಿಗೆ ಸಮರ್ಪಕ ವೇದಿಕೆಯ ಕೊರತೆಯಿಂದ ಲಾಭ ಕಡಿಮೆ ಇರಬಹುದು.

ನೀವೇ ಅಂಗಡಿ ತೆರೆಯುವುದಾದರೆ ಅದರ ಖರ್ಚೂ ಬಹಳಾ ಇರುತ್ತದೆ ಹಾಗೂ ಅದರಿಂದ ಲೋಕಲ್ ಮಾರ್ಕೆಟ್ ತಲುಪಬಹುದೇ ಹೊರತು, ಜಾಗತಿಕ ಮಾರುಕಟ್ಟೆ ತಲುಪಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಪ್ರಾಡಕ್ಟ್ ಸೇಲ್ ಮಾಡಲು ನೀವು ಹೀಗೆ ಮಾಡಬಹುದು.

ಇನ್ನು ವ್ಯವಹಾರ ಆರಂಭಿಸಲು ದುಬಾರಿ ಶೋ ರೂಂ ಅಥವಾ ಪ್ರಮುಖ ಮಾರುಕಟ್ಟೆಯಲ್ಲಿ ಸ್ಥಳಾವಕಾಶ ಅಗತ್ಯವಿಲ್ಲ. ಉತ್ತಮ ಕೌಶಲ್ಯ ಮತ್ತು ವಿಭಿನ್ನ ಉತ್ಪನ್ನಗಳಿದ್ದರೆ, ಮನೆಯಲ್ಲೇ ಕುಳಿತು ದೇಶಾದ್ಯಂತ ಗ್ರಾಹಕರಿಗೆ ವಸ್ತುಗಳನ್ನು ಮಾರಾಟ ಮಾಡಬಹುದು.

ಆರಂಭಿಸುವುದು ಹೇಗೆ?

ಮೊದಲಿಗೆ, ಆನ್‌ಲೈನ್ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು. ಅಮೆಜಾನ್ ಸೆಲ್ಲರ್ ಸೆಂಟ್ರಲ್ ಅಥವಾ ಫ್ಲಿಪ್‌ಕಾರ್ಟ್ ಸೆಲ್ಲರ್ ಹಬ್‌ನಲ್ಲಿ ಖಾತೆ ತೆರೆಯುವುದು ಸುಲಭ. ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯುತ್ತದೆ.

ಅಗತ್ಯ ದಾಖಲೆಗಳು

ಮಾರಾಟಗಾರರಾಗಿ ನೋಂದಾಯಿಸಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಅಗತ್ಯ. ಕೆಲವು ಉತ್ಪನ್ನಗಳಿಗೆ ಜಿಎಸ್‌ಟಿ ಸಂಖ್ಯೆ ಕಡ್ಡಾಯವಾಗಿರಬಹುದು.

ಉತ್ಪನ್ನ ಪಟ್ಟಿ ಮತ್ತು ಮಾರಾಟ

ನೋಂದಣಿ ನಂತರ, ನಿಮ್ಮ ಉತ್ಪನ್ನಗಳನ್ನು ಫೋಟೋ, ಬೆಲೆ ಮತ್ತು ವಿವರಗಳೊಂದಿಗೆ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಬೇಕು. ಉತ್ತಮ ಗುಣಮಟ್ಟದ ಚಿತ್ರಗಳು ಮತ್ತು ಸ್ಪಷ್ಟ ವಿವರಣೆಗಳು ಇದ್ದರೆ, ಗ್ರಾಹಕರನ್ನು ಆಕರ್ಷಿಸಲು ಸಹಕಾರಿ.

ಡೆಲಿವರಿ ವ್ಯವಸ್ಥೆ

ಗ್ರಾಹಕರು ಆರ್ಡರ್ ಮಾಡಿದ ಬಳಿಕ, ಉತ್ಪನ್ನವನ್ನು ಪ್ಯಾಕ್ ಮಾಡಿ ಕಳುಹಿಸಬೇಕು. ಹೆಚ್ಚಿನ ಸಂದರ್ಭಗಳಲ್ಲಿ, ಈ ವೇದಿಕೆಗಳೇ ಲಾಜಿಸ್ಟಿಕ್ಸ್ ಸೇವೆಗಳನ್ನು ಒದಗಿಸುತ್ತವೆ.

ಕಡಿಮೆ ಹೂಡಿಕೆ, ಹೆಚ್ಚು ಆದಾಯ

ಈ ವ್ಯವಹಾರದ ಪ್ರಮುಖ ಲಾಭವೆಂದರೆ ಕಡಿಮೆ ವೆಚ್ಚದಲ್ಲಿ ಆರಂಭಿಸಬಹುದಾಗಿದೆ. ಅಂಗಡಿ ಬಾಡಿಗೆ ಅಥವಾ ಹೆಚ್ಚಿನ ಸಿಬ್ಬಂದಿ ಅಗತ್ಯವಿಲ್ಲದೆ ಮನೆಯಿಂದಲೇ ವ್ಯವಹಾರ ನಡೆಸಬಹುದು.

ಆದಾಯ ಹೆಚ್ಚಿಸುವ ಅವಕಾಶ

ಆನ್‌ಲೈನ್ ಮಾರಾಟದ ಮೂಲಕ ದೇಶಾದ್ಯಂತ ಗ್ರಾಹಕರನ್ನು ತಲುಪಬಹುದಾದ್ದರಿಂದ, ಉತ್ತಮ ಗುಣಮಟ್ಟದ ಉತ್ಪನ್ನ ಮತ್ತು ಸೇವೆಯಿಂದ ವೇಗವಾಗಿ ಆದಾಯವನ್ನು ಹೆಚ್ಚಿಸಬಹುದು.