ಕುಂದಾಪುರ: ಪ್ರತಿಷ್ಠಿತ ಇನ್ ಸ್ಪಾಯರ್ ಅವಾರ್ಡ್ ಗೆ ಉಡುಪಿ ಜಿಲ್ಲೆಯ ಐದು ತಾಲೂಕುಗಳಲ್ಲಿ 196 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ 53 ವಿದ್ಯಾರ್ಥಿಗಳು ಕುಂದಾಪುರ ವಲಯದಿಂದ ಆಯ್ಕೆಯಾಗಿರುತ್ತಾರೆ. ಈ ಪ್ರತಿಷ್ಠಿತ ಇನ್ ಸ್ಪಾಯರ್ ಅವಾರ್ಡ್ ಗೆ ಮದರ್ ತೆರೇಸಾ ಶಾಲೆಯ ಹೈಸ್ಕೂಲ್ ವಿಭಾಗದ 9ನೇ ತರಗತಿಯ ಮೋಕ್ಷಿತ್ .ವಿ.ಶೆಟ್ಟಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿಯ ಕಿಶನ್ ಶೆಟ್ಟಿ ಆಯ್ಕೆ ಆಗಿರುತ್ತಾರೆ. ವಿದ್ಯಾರ್ಥಿಗಳಿಗೆ ಮದರ್ ತೆರೇಸಾ ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಕುಮಾರಿ ಮೆಲಿಶಾ ಹಾಗೂ ಕುಮಾರಿ ಗ್ರೇಸಿಯವರು ಮಾರ್ಗದರ್ಶನ ನೀಡಿರುತ್ತಾರೆ. ಈ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತಮಂಡಳಿ, ಮುಖ್ಯೋಪಾಧ್ಯಾಯಿನಿ ಹಾಗೂ ಸಿಬ್ಬಂದಿಗಳು ಅಭಿನಂದಿಸಿ, ಮುಂದಿನ ಹಂತಕ್ಕೆ ಶುಭ ಹಾರೈಸಿರುತ್ತಾರೆ.
















