ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಉಪನ್ಯಾಸ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಮಹಿಳಾ ಸಬಲೀಕರಣ ಘಟಕವುಅಂತರಾಷ್ಟ್ರೀಯ ಮಹಿಳಾದಿನದ ಅಂಗವಾಗಿ “ಆರೋಗ್ಯ ಮತ್ತು ಯೋಗಕ್ಷೇಮದ” ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಿತ್ತು. ಈ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜುಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾದ ಡಾ.ಮಮತಾ ಕೆ.ವಿ. ಭಾಗವಹಿಸಿದ್ದರು. ಡಾ.ಮಮತಾ ಇವರು ಮಾತನಾಡಿ ಮಹಿಳೆಯರಲ್ಲಿ ಕಂಡುಬರುವ ಅಂಡಾಶಯದ ಸಮಸ್ಯೆಗಳು, ಮಹಿಳೆಯರಿಗೆ ಹೆಚ್ಚುತ್ತಿರುವ ಜವಾಬ್ದಾರಿಗಳು ಮತ್ತು ಬದಲಾಗುತ್ತಿರುವ ಜೀವನ ಶೈಲಿಯು ದೇಹದ ನೈಸರ್ಗಿಕ ಲಯವನ್ನು ಹೇಗೆ ತೊಂದರೆಗೊಳಿಸುತ್ತದೆ […]
ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ.

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಾರ್ಚ್ 17 ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜ್ಞಾನಸುಧಾ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್. ಎಂ. ಕೊಡವೂರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಜೀವನದಲ್ಲಿ ಕಷ್ಟ ಅಂಥ ಯಾವುದು ಇಲ್ಲ ಅದು ನಾವು ನೋಡುವ ದೃಷ್ಟಿಕೋನದಲ್ಲಿದೆ. ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟು ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಉಜ್ವಲ ಭವಿಷ್ಯವನ್ನು ಹೊಂದಲು ನಾಂದಿಯಾಗುತ್ತದೆ ಎಂದರು […]
ನಿಟ್ಟೆ ತಾಂತ್ರಿಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮೋಹನ್ ಪೂಜಾರಿ ಅವರಿಗೆ ಡಾಕ್ಟರೇಟ್ ಪದವಿ.

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಪೂಜಾರಿ ಅವರು ‘ಅಪ್ಗ್ರೇಡೇಶನ್ ಆಫ್ ಲೀನ್ ಅಯರ್ನ್ ಓರ್ ಯುಸಿಂಗ್ ಮೈಕ್ರೋವೇವ್ ಆಂಡ್ ಅಲ್ಟ್ರಾಸೋನಿಕ್ ಪ್ರೀಟ್ರೀಟ್ಮೆಂಟ್’ ಎಂಬ ವಿಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್.ಐ.ಟಿ.ಕೆ) ಸುರತ್ಕಲ್ ಡಾಕ್ಟರೇಟ್ ಪದವಿ ಘೋಷಿಸಿದೆ. ಎನ್.ಐ.ಟಿ.ಕೆ ಮೈನಿಂಗ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಹರ್ಷ ವರ್ಧನ ಅವರ ಮಾರ್ಗದರ್ಶನದಲ್ಲಿ ಇವರು ಈ ಸಂಶೋಧನೆಯನ್ನು […]
ಮದರ್ ತೆರೇಸಾ ಮೆಮೋರಿಯಲ್ ಶಾಲೆ ಶಂಕರನಾರಾಯಣ: ಪ್ರತಿಷ್ಠಿತ ಇನ್ ಸ್ಪಾಯರ್ ಅವಾರ್ಡ್ ಗೆ ಮೋಕ್ಷಿತ್.ವಿ.ಶೆೆಟ್ಟಿ ಮತ್ತು ಕಿಶನ್ ಶೆಟ್ಟಿ ಆಯ್ಕೆ.

ಕುಂದಾಪುರ: ಪ್ರತಿಷ್ಠಿತ ಇನ್ ಸ್ಪಾಯರ್ ಅವಾರ್ಡ್ ಗೆ ಉಡುಪಿ ಜಿಲ್ಲೆಯ ಐದು ತಾಲೂಕುಗಳಲ್ಲಿ 196 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ 53 ವಿದ್ಯಾರ್ಥಿಗಳು ಕುಂದಾಪುರ ವಲಯದಿಂದ ಆಯ್ಕೆಯಾಗಿರುತ್ತಾರೆ. ಈ ಪ್ರತಿಷ್ಠಿತ ಇನ್ ಸ್ಪಾಯರ್ ಅವಾರ್ಡ್ ಗೆ ಮದರ್ ತೆರೇಸಾ ಶಾಲೆಯ ಹೈಸ್ಕೂಲ್ ವಿಭಾಗದ 9ನೇ ತರಗತಿಯ ಮೋಕ್ಷಿತ್ .ವಿ.ಶೆಟ್ಟಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿಯ ಕಿಶನ್ ಶೆಟ್ಟಿ ಆಯ್ಕೆ ಆಗಿರುತ್ತಾರೆ. ವಿದ್ಯಾರ್ಥಿಗಳಿಗೆ ಮದರ್ ತೆರೇಸಾ ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಕುಮಾರಿ ಮೆಲಿಶಾ ಹಾಗೂ ಕುಮಾರಿ ಗ್ರೇಸಿಯವರು […]
ಉಡುಪಿ: ಅಪ್ರೆಂಟಿಶಿಪ್ ಮೇಳ, ಉದ್ಯೋಗ ಮೇಳಕ್ಕೆ ಚಾಲನೆ; ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡುವುದು ಅವಶ್ಯಕ- ಡಾ. ಮೋಹನ್ ಆಳ್ವ

ಉಡುಪಿ: ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವಿಭಾಗಿಯ ಕಚೇರಿ ಮೈಸೂರು ಇದರ ಸಹಯೋಗದಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಶಿಪ್ ಮೇಳ ಹಾಗೂ ಉದ್ಯೋಗ ಮೇಳವನ್ನು ನಗರದ ಅಮೃತ್ ಗಾರ್ಡನ್ ನಲ್ಲಿ ಇಂದು ಆಯೋಜಿಸಲಾಗಿತ್ತು.ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಮೂಡಬಿದಿರೆ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು, 140 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ […]