ಉಡುಪಿ: ವಿದ್ಯುತ್ ತಗುಲಿ ಶಾಲಾ ವಾಹನ ಚಾಲಕ ಮೃತ್ಯು

ಉಡುಪಿ: ಮಿಕ್ಸಿ ಸರಿಪಡಿಸುವ ವೇಳೆ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಡುಪಿ ನಗರದ 76 ಬಡಗಬೆಟ್ಟುವಿನ ಒಳಕಾಡು ಎಂಬಲ್ಲಿ ನಡೆದಿದೆ.

ಬ್ರಹ್ಮಾವರ ವಿದ್ಯಾ ನಿಕೇತನ ಶಾಲೆಯ ವಾಹನ ಚಾಲಕ, ಒಳಕಾಡು ನಿವಾಸಿ ಚಂದ್ರಜೋಗಿ(45) ಮೃತಪಟ್ಟ‌ ದುರ್ದೈವಿ. ಚಂದ್ರ ಜೋಗಿ ನಿನ್ನೆ ರಾತ್ರಿ ಊಟಕ್ಕೆ ಚಟ್ನಿ ತಯಾರಿಸಲು ಮಿಕ್ಸಿ ಆನ್‌ ಮಾಡುವ ವೇಳೆ ಮಿಕ್ಸಿಯ ವಿದ್ಯುತ್‌ ಪ್ರವಾಹ ತಂತಿಯಲ್ಲಿ ತೊಂದರೆ ಕಾಣಿಸಿಕೊಂಡಿದೆ.

ಅದನ್ನು ಸರಿಪಡಿಸಲು ಹೋದಾಗ ಚಂದ್ರ ಅವರಿಗೆ ವಿದ್ಯುತ್‌ ತಗುಲಿದೆ. ಇದರಿಂದ ಪ್ರಜ್ಞಾಹೀನ ಸ್ಥಿತಿ ತಲುಪಿದ ಅವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಚಂದ್ರಜೋಗಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆ ಪ್ರಕರಣ ದಾಖಲಾಗಿದೆ.