ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಉಡುಪಿ: ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಜಿಲ್ಲಾ ವ್ಯಾಪ್ತಿಯಲ್ಲಿ ವಾಸ್ತವ್ಯ ಹೊಂದಿರುವ ಪ್ರಸ್ತುತ ಪಿಯುಸಿ ಅಥವಾ ಮೇಲ್ಪಟ್ಟು ಶಿಕ್ಷಣ್ ಪಡೆಯುತ್ತಿರುವ ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಕಳೆದ ಸಾಲಿನ ಅಂತಿಮ ಪರೀಕ್ಷೆಯ ಅಂಕ ಪಟ್ಟಿ ಪ್ರತಿ ಮತ್ತು ಪ್ರಸ್ತುತ ಕಲಿಯುತ್ತಿರುವ ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣಪತ್ರದೊಂದಿಗೆ ಆ.25 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಮತ್ತು ಮಾಹಿತಿಗೆ ರಾಧಾಕೃಷ್ಣ ಸಾಮಂತ್ ಮುಂಡ್ಕಿನಜೆಡ್ಡು ಚೇರ್ಕಾಡಿ, ಎಸ್.ರಮಾನಂದ ಸಾಮಂತ್ ಸರಳೇಬೆಟ್ಟು, ಆಶಾ ಪಾಟೀಲ್ ಸರಳೇಬೆಟ್ಟು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.