ಹೊಸ ಮ್ಯೂಚುವಲ್ ಫಂಡ್​ ಕಂಪನಿ ಆರಂಭಿಸಿದ ಅಂಬಾನಿ : ಜಿಯೋ ಬ್ಲ್ಯಾಕ್‌ರಾಕ್

ಮುಂಬೈ: ಭಾರತದಲ್ಲಿ ಲಕ್ಷಾಂತರ ಹೂಡಿಕೆದಾರರಿಗೆ ತಂತ್ರಜ್ಞಾನ ಆಧರಿತ ಕೈಗೆಟುಕುವ, ನವೀನ ಹೂಡಿಕೆ ವಿಧಾನಗಳನ್ನು ಜಿಯೋ ಬ್ಲ್ಯಾಕ್‌ರಾಕ್ ನೀಡಲಿದೆ ಎಂದು ಬ್ಲ್ಯಾಕ್‌ರಾಕ್‌ ಮತ್ತು ಜಿಯೋ ಫೈನಾನ್ಷಿಯಲ್​ನ ಜಂಟಿ ಉದ್ಯಮವಾಗಿರುವ ಜಿಯೋ ಬ್ಲ್ಯಾಕ್‌ರಾಕ್​ನ ಹೇಳಿಕೆ ತಿಳಿಸಿದೆ.ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ ವಿಭಜನೆಗೊಂಡ, ಹಣಕಾಸು ಸಾಲ ನೀಡುವ ಕಂಪನಿ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಮತ್ತು ವಿಶ್ವದ ಅತಿದೊಡ್ಡ ಅಸೆಟ್ ಮ್ಯಾನೇಜಮೆಂಟ್​ ಕಂಪನಿ ಬ್ಲ್ಯಾಕ್‌ರಾಕ್ ಎರಡೂ ಒಟ್ಟಾಗಿ ಸೇರಿ 300 ಮಿಲಿಯನ್ ಡಾಲರ್ ಸಂಯೋಜಿತ ಹೂಡಿಕೆಯೊಂದಿಗೆ ಹೊಸ ಅಸೆಟ್ ಮ್ಯಾನೇಜಮೆಂಟ್​ ಕಂಪನಿ ಅಥವಾ […]

ಚಿಕ್ಕಮಗಳೂರಿನಲ್ಲಿ ಮುಂದುವರೆದ ಭಾರಿ ಮಳೆಯ ಅಬ್ಬರ .. ಅವಘಡಗಳಿಗೆ ಜನ ತತ್ತರ

ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಬೋವಿ ಕಾಲೋನಿಯಲ್ಲಿ ಗಾಳಿ ಮಳೆಗೆ ಮನೆಯ ಮಾಳಿಗೆ ಕುಸಿದಿರುವ ಘಟನೆ ನಡೆದಿದೆ. ಚಿಕ್ಕಮಗಳೂರು :ಮಳೆಯ ಅಬ್ಬರಕ್ಕೆ ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿಯಿಂದಲೂ ರಸ್ತೆಯ ಮೇಲೆ ಹಳ್ಳದ ನೀರು ಉಕ್ಕಿ ಹರಿಯುತ್ತಿದೆ. ಮುಳ್ಳಯ್ಯನಗಿರಿ ಭಾಗದಲ್ಲಿ ಭಾರಿ ಮಳೆ ಹಿನ್ನೆಲೆ, ಹಳ್ಳದ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿದೆ. ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ಮಲ್ಲೇನಹಳ್ಳಿ, ಕಾಮೇನಹಳ್ಳಿ ಗ್ರಾಮಸ್ಥರು ಪರದಾಟ […]

ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ‘ಮಟ್ಕಾ’: ಮೆಗಾ ಪ್ರಿನ್ಸ್​ ವರುಣ್​ ತೇಜ್​

‘ಮಟ್ಕಾ’ ಪೋಸ್ಟರ್​ ವರುಣ್ ತೇಜ್ ನಟನೆಯ 14ನೇ ಸಿನಿಮಾಗೆ ಮಟ್ಕಾ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಇದು ಜೂಟಾಟದ ಕಥೆಯಾಧಾರಿತ ಸಿನಿಮಾ. 1958ರಿಂದ 82ರ ಅವಧಿಯಲ್ಲಿ ವೈಜಾಗ್​ನಲ್ಲಿ ನಡೆದ ಸತ್ಯ ಘಟನೆಯಾಧಾರಿತ ಚಿತ್ರವಾಗಿದೆ. ಬರೋಬ್ಬರಿ 24 ವರ್ಷದ ಹಿಂದಿನ ಕಥೆಯಾಧಾರಿತ ಸಿನಿಮಾವಾಗಿರುವ ಮಟ್ಕಾದಲ್ಲಿ ವರುಣ್ ತೇಜ್ ನಾಲ್ಕು ವಿಭಿನ್ನ ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೆಗಾ ಪ್ರಿನ್ಸ್ ಸಿನಿ ಕೆರಿಯರ್​ನ ಅತಿ ಹೆಚ್ಚು ಬಜೆಟ್‌ನ ಚಿತ್ರ ಇದು ಎಂಬ ನಿರೀಕ್ಷೆ ಪ್ರೇಕ್ಷಕರಲ್ಲಿ ಹುಟ್ಟಿದೆ.ಟಾಲಿವುಡ್​ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸುಪುತ್ರ […]

 ಜರ್ಮನಿಯಲ್ಲಿ 4 ರಾಷ್ಟ್ರಗಳ ಪಂದ್ಯಾವಳಿ: ಭಾರತ ಜೂನಿಯರ್​ ಪುರುಷರ ಹಾಕಿ ತಂಡ ಪ್ರಕಟ

ನವದೆಹಲಿ : ಜರ್ಮನಿಯ ಡಸೆಲ್​ ಡಾರ್ಫ್​ನಲ್ಲಿ ಆಗಸ್ಟ್​ 18 ರಿಂದ 22 ರವರೆಗೆ ನಡೆಯಲಿರುವ 4 ರಾಷ್ಟ್ರಗಳ ಟೂರ್ನಮೆಂಟ್​ಗಾಗಿ 20 ಆಟಗಾರ ಭಾರತ ಜೂನಿಯರ್​ ಪುರುಷರ ಹಾಕಿ ತಂಡವನ್ನು ಹಾಕಿ ಇಂಡಿಯಾ ಇಂದು ಗುರುವಾರ ಪ್ರಕರಟಿಸಿದೆ.ಜರ್ಮನಿಯಲ್ಲಿ ನಡೆಯಲಿರುವ 4 ರಾಷ್ಟ್ರಗಳ ಪಂದ್ಯಾವಳಿಗೆ 20 ಆಟಗಾರರ ಜೂನಿಯರ್ ಪುರುಷರ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ ತಂಡವನ್ನು ಫಾರ್ವರ್ಡ್‌ಗಳಾದ ಉತ್ತಮ್ ಸಿಂಗ್ ನಾಯಕರಾಗಿ ಮತ್ತು ಬಾಬಿ ಸಿಂಗ್ ಧಾಮಿ ಅವರ ಉಪನಾಯಕರಾಗಿ ಮುನ್ನಡೆಸಲಿದ್ದಾರೆ. ಗೋಲ್‌ಕೀಪಿಂಗ್ ವಿಭಾಗವನ್ನು ಮೋಹಿತ್ ಎಚ್‌ಎಸ್ ಮತ್ತು […]

9 ವರ್ಷಗಳಲ್ಲಿ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲ ವಸೂಲಿ ಮಾಡಿದ ಬ್ಯಾಂಕ್

  ನವದೆಹಲಿ: ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳ ಪ್ರಕಾರ, ಕಳೆದ ಒಂಬತ್ತು ಹಣಕಾಸು ವರ್ಷಗಳಲ್ಲಿ ಒಟ್ಟು 10,16,617 ಕೋಟಿ ರೂ.ಗೂ ಹೆಚ್ಚು ಸಾಲವನ್ನು ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು ವಸೂಲಿ ಮಾಡಿವೆ.ಕೆಟ್ಟ ಸಾಲದ ಹೊರೆಯನ್ನು ತಗ್ಗಿಸಲು ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ.ಈ ಶ್ರಮಕ್ಕೆ ಈಗ ಫಲ ಸಿಕ್ಕಿದೆ. ಆರ್‌ಬಿಐ ಮತ್ತು ಸರಕಾರ ಕೈಗೊಂಡ ಕ್ರಮಗಳಿಂದಾಗಿ ಕಳೆದ ಒಂಬತ್ತು ವರ್ಷಗಳಲ್ಲಿ 10 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಬಾಕಿ ಉಳಿದ್ದ ಸಾಲವನ್ನು […]