ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನವು ಪ್ರಸ್ತುತ ಪಡಿಸುತ್ತಿರುವ ಸರೋದ್ ವಾದನ ಕಾರ್ಯಕ್ರಮವು ಜುಲೈ 3 ರಂದು ಸಂಜೆ 6 ಗಂಟೆಗೆ ಮಂಗಳೂರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ.
ರಾಷ್ಟ್ರಮಟ್ಟದ ಖ್ಯಾತಿಯ ಕಲಾವಿದರಾದ ಕೊಲ್ಕತ್ತಾದ ಪಂ.ತೇಜೇಂದ್ರ ನಾರಾಯಣ ಮಜುಮ್ದಾರ್ ಅವರ ಸರೋದ್ ವಾದನಕ್ಕೆ ದೇಶದ ಖ್ಯಾತ ತಬ್ಲಾಪಟು ಮುಂಬೈನ ಪಂ.ಯೋಗೀಶ್ ಸಂಶಿ ಅವರು ತಬ್ಲಾ ಸಾಥ್ನೀಡಲಿದ್ದಾರೆ.
ಸಂಗೀತಾಸಕ್ತರೆಲ್ಲರಿಗೂ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶಾವಕಾಶವಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.