ಕಾರ್ಕಳ: ಭಾರತ ಸರಕಾರ ಯುವ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ಉಡುಪಿ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಯುವಕ ಮಂಡಲ ಸಾಣೂರು ಇದರ ಆಶ್ರಯದಲ್ಲಿ ಫಿಟ್ ಇಂಡಿಯಾ ಬೈಸಿಕಲ್ ಜಾಥಾ ಸರಣಿ ಕಾರ್ಯಕ್ರಮಕ್ಕೆ ಸರ್ಕಾರದ ಮುಖ್ಯ ಸಚೇತಕರು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಇಂದು ಚಾಲನೆ ನೀಡಿದರು.
ಆ ನಂತರ ಮಾತನಾಡಿದ ಅವರು, ವ್ಯಾಯಾಮದ ಜೊತೆಗೆ ನಿರಂತರವಾಗಿ ಸೈಕ್ಲಿಂಗ್ ಕೂಡ ಅರೋಗ್ಯ ಮತ್ತು ಮನಸ್ಸಿನ ಏಕಾಗ್ರತೆಯ ಜೊತೆಗೆ ಮಾನಸಿಕ ಹಾಗೂ ಶಾರೀರಿಕವಾಗಿ ಸದೃಢವಾಗಲು ಸಹಕಾರಿ ಎಂದರು.
ಮುಖ್ಯ ಅತಿಥಿಯಾಗಿದ್ದ ಕೆ.ಎಮ್. ಎಫ್ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ಮಾತನಾಡಿ, ಸದಾ ಚಟುವಟಿಕೆಯಿಂದ ಇರುವ ಯುವಕ ಮಂಡಲದ ತಂಡ ಫಿಟ್ ಇಂಡಿಯಾ ಬೈಸಿಕಲ್ ಜಾಥಾ ಮತ್ತು ಇತರ ಸರಣಿ ಕಾರ್ಯಕ್ರಮ ಆಯೋಜಿಸುವ ಮೂಲಕ ಮಾದರಿಯಾಗಿದೆ ಎಂದರು.
ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ದಿವ್ಯಶ್ರೀ ಗಿರೀಶ್ ಅಮೀನ್, ತಾಂ.ಪಂ. ಸದಸ್ಯ ಪ್ರವೀಣ್ ಕೋಟ್ಯಾನ್, ಮಂಡಲದ ಮಾಜಿ ಅಧ್ಯಕ್ಷರುಗಳಾದ ಏಕನಾಥ್ ಪ್ರಭು, ಪ್ರವೀಣ್ ಶೆಟ್ಟಿ ದೇವಾನಂದ ಶೆಟ್ಟಿ ಮಹೇಶ್ ಕುಮಾರ್, ಜಗದೀಶ್ ಕುಮಾರ್ ಶಂಕರ್ ಶೆಟ್ಟಿ, ಪ್ರಕಾಶ್ ಮಡಿವಾಳ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ರಘುರಾಮ ಶೆಟ್ಟಿ, ಅನಿಲ್, ರಾಜೇಶ್, ಶುಭಕರ್, ಹರೀಶ್, ರೋಹಿತ್, ಚಂದ್ರಹಾಸ್, ದಿಲೀಪ್, ಪ್ರಶಾಂತ್ ಪ್ರಸನ್ನ ಮಂಡಲದ ಹಿತೈಷಿಗಳು ಉಪಸ್ಥಿತರಿದ್ದರು.
ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು.