ಭದ್ರಗಿರಿ: ಶ್ರೀ ಭದ್ರಗಿರಿ ವೀರವಿಠ್ಠಲ ದೇವಸ್ಥಾನದಲ್ಲಿ ರವಿವಾರ ಸಂತ ಭದ್ರಗಿರಿ ಅಚ್ಯುತದಾಸರ ಪುಣ್ಯತಿಥಿ ಸಂಸ್ಮರಣೆಯ ಅಂಗವಾಗಿ ಹರಿದಾಸ ಕೃಷ್ಣ ಪೈಯವರಿಂದ ಕನ್ನಡದಲ್ಲಿ ಪಾರ್ಥಸಾರಥ್ಯ ಹರಿಕಥಾ ಕಾಲಕ್ಷೇಪ ಸೇವೆ ನಡೆಯಿತು. ಭದ್ರಗಿರಿ ಅಚ್ಯುತದಾಸರ ಮತ್ತು ಸರ್ವೋತ್ತಮ ಪೈ ಬೆಂಗಳೂರು ಇವರ ಕುಟುಂಬಿಕರು ಇದರ ಸೇವಾದಾರರಾಗಿದ್ದರು. ಹಾರ್ಮೊನಿಯಂನಲ್ಲಿ ಪ್ರಸಾದ್ ಮತ್ತು ತಬಲಾದಲ್ಲಿ ಪುರಂದರ ಕಿಣಿಯ ಸಹಕರಿಸಿದರು. ದೇವಳದ ವತಿಯಿಂದ ಹರಿದಾಸ ಕೃಷ್ಣ ಪೈ ಯವರನ್ನು ಗೌರವಿಸಲಾಯಿತು.
ಅಚ್ಯುತದಾಸರ ಪುತ್ರ ರಾಧಾಕೃಷ್ಣ ಪೈ, ಸಂತ ಅಚ್ಯುತದಾಸರ ಹಲವು ಕಾಲದ ಹಾರ್ಮೋನಿಯಂ ಸಹವಾದಕರಾಗಿದ್ದ ಗೋಪಾಲಕೃಷ್ಣ ಮಲ್ಯ, ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಭದ್ರಗಿರಿ ಪಾಂಡುರಂಗ ಆಚಾರ್ಯ, ಸದಸ್ಯರಾದ ಪ್ರಭಾಕರ ಭಟ್ , ಉದಯ ಪಡಿಯಾರ್, ಸುರೇಶ ಶೆಣೈ ಮತ್ತು ಕಲ್ಯಾಣಪುರ ಸೀತಾರಾಮ ಭಟ್, ಮಾಧವರಾಯ ಪ್ರಭು, ಪರ್ಕಳ ಸಿ ಕೆ ಪ್ರಭು, ಹಾರಾಡಿ ಉಪೇಂದ್ರ ಶೆಣೈ, ಸುಧೀರ ಭಟ್, ಗೋಪಾಲಕೃಷ್ಣ ಕಾಮತ್, ನಿವೃತ್ತ ಪ್ರಾಂಶುಪಾಲ ಯೋಗಾನಂದ ಮತ್ತು ಹಲವು ಗಣ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.