ಉಡುಪಿ: ದೇಶ ಸೇವೆ ಹಾಗೂ ಸಮಾಜ ಸೇವೆ ಮಾಡುವ ಉದ್ದೇಶದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗವನ್ನು ಹುಟ್ಟುಹಾಕಿದ್ದು, ಸಂಸ್ಥೆಯ ಉಡುಪಿ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರ ಜನ್ಮದಿನದ ಪ್ರಯುಕ್ತ ಒಂದು ವಾರ ಕಾಲ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯ ಹಸ್ತವನ್ನು ಚಾಚುವ ಕೆಲಸವನ್ನು ಸಂಸ್ಥೆ ಮಾಡಿದೆ.
ಅಲ್ಲದೆ, ಸಂಸ್ಥೆಯ ವತಿಯಿಂದ ಉಡುಪಿ ಜಿಲ್ಲೆಯಾದ್ಯಂತ ಅನ್ನದಾನ, ತರಕಾರಿ ಕಿಟ್ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮಗಳು ಮತ್ತು ಕೋವಿಡ್ 19 ಲಸಿಕೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಕಳೆದ ಒಂದು ವಾರದಿಂದ ನಡೆಯುತ್ತಿದೆ.
ಮಲ್ಪೆ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ, ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ಸದಸ್ಯರಿಗೆ, ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣಗುಡ್ಡೆ ಸದಸ್ಯರಿಗೆ, ಉಡುಪಿ ನಗರಸಭೆಯ ಕಾರ್ಯಕರ್ತರಿಗೆ, ಪರ್ಕಳ ವಾರ್ಡಿನ ಹಲವಾರು ಕಡೆಗಳಲ್ಲಿ, ಅನಾಥ ಆಶ್ರಮಗಳಿಗೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಗೌರವ ಸಲಹೆಗಾರ ಜನಾರ್ದನ್ ಕೊಡವೂರು, ಉಮಾ ಎಸ್ ಚಿಕ್ಕಮಠ, ಸವಿತಾ ನೋಟಗಾರ, ಈರಪ್ಪ ಗೌಂಡಿ, ಬಸವರಾಜ್ ಐಹೊಳೆ, ಮಹೇಶ್ ಗುಂಡಿಬೈಲ್, ರಮೇಶ್ ಎಂಜಿಎಂ, ಶರಣಪ್ಪ ಬಾರ್ಕೇರ್, ಅಯಾಜ್, ಹನುಮಂತರಾಯ ಪೂಜಾರಿ, ಶಿವರಾಜ್ ಗುಂಜಿ, ಗೋಪಾಲ , ಕಾಶಿನಾಥ್, ಮಂಜುನಾಥ್ ಬೋವಿ, ಹನುಮಂತ ಮುದ್ದಳ್ಳಿ ಮೊದಲಾದವರು ಉಪಸ್ಥಿತರಿದ್ದರು.