ಉಡುಪಿಯಲ್ಲಿ ಸೈಲೆಂಟ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ..!!

ಉಡುಪಿ: ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ ಅವರು ತಮ್ಮ ಹುಟ್ಟೂರಾದ ಶಿರ್ವದ ನಿವಾಸದಲ್ಲಿ ಬುಧವಾರ ಸುಮಂತ್ ಎಂಬವರೊಂದಿಗೆ ಸೈಲೆಂಟ್ ಆಗಿ ಹಸೆಮಣೆ ಏರಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಶಿರ್ವದ ಮಜಲಬೆಟ್ಟು ಬೀಡುವಿನಲ್ಲಿರುವ ತಮ್ಮ ನಿವಾಸದಲ್ಲಿ ಶುಭ ಪೂಂಜಾ ಸರಳವಾಗಿ ವಿವಾಹವಾಗಿದ್ದಾರೆ. ಈ ಸಂದರ್ಭದಲ್ಲಿ ಮನೆಯರು, ಆತ್ಮೀಯರು, ಸ್ನೇಹಿತರು ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ.

ಶುಭಾ ಪೂಂಜಾ ಕಳೆದ ವರ್ಷವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಕೇಳಿಬಂದಿತ್ತು. ಆದರೆ ಲಾಕ್ ಡೌನ್ ನಿಂದಾಗಿ ವಿವಾಹ ಮುಂದೂಡಲಾಗಿತ್ತು. ಇಂದು ಸುಮಂತ್ ಮತ್ತು ಶುಭಾ ಪೂಂಜಾ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಶುಭಾ, ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.