ಉಡುಪಿ: ಇ-ಸ್ಯಾಂಡ್ ಆ್ಯಪ್, ಮರಳು ಮಿತ್ರ ಆ್ಯಪ್ ಮೂಲಕ ಮರಳು ಲಭ್ಯ

ಉಡುಪಿ: ಜಿಲ್ಲಾ ವ್ಯಾಪ್ತಿಯ ಕುಂದಾಪುರ ತಾಲೂಕು ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ
ಮರಳು ಬ್ಲಾಕ್ ಸಂಖ್ಯೆ 4, ಹಳ್ನಾಡು, ಜಪ್ತಿ ಗ್ರಾಮದ ಮರಳು ಬ್ಲಾಕ್ ಸಂಖ್ಯೆ 6 ರಲ್ಲಿನ ಮರಳು ಸ್ಟಾಕ್‌ ಯಾರ್ಡ್ನಲ್ಲಿ ಲಭ್ಯವಿರುವ ಮರಳನ್ನು ಸಾರ್ವಜನಿಕರು, ಖಾಸಗಿಯವರು ಮತ್ತು ಸರ್ಕಾರಿ ಕಾಮಗಾರಿಗಳಿಗೆ ಉಡುಪಿ ಇ-ಸ್ಯಾಂಡ್ ಆ್ಯಪ್ ಮೂಲಕ ಹಾಗೂ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಮಂಗಳೂರುರವರಿಗೆ ಸರ್ಕಾರಿ ಕಾಮಗಾರಿಗೆ ಮೀಸಲಿರಿಸಿರುವ ಅಂಪಾರು ಗ್ರಾಮದ ಮರಳು ಬ್ಲಾಕ್ ಸಂಖ್ಯೆ 11 ರಲ್ಲಿ ಸರ್ಕಾರಿ ಕಾಮಗಾರಿಗಾಗಿ ಹಾಗೂ ಕೆ.ಎಸ್.ಎಂ.ಸಿ.ಎಲ್,
ಬೆಂಗಳೂರುರವರಿಗೆ ಬೈಂದೂರು ಮತ್ತು ಕುಂದಾಪುರ ತಾಲೂಕಿನ ಸೇನಾಪುರ, ಹೊಸಾಡು ಮತ್ತು ಹಕ್ಲಾಡಿ, ಹೆಮ್ಮಾಡಿ, ಕಟ್‌ಬೆಲ್ತೂರು ಗ್ರಾಮದಲ್ಲಿ ಅಣೆಕಟ್ಟಿನ ಹಿನ್ನೀರಿನ ನದಿ ಪಾತ್ರದ ವ್ಯಾಪ್ತಿಯಲ್ಲಿ ಹೂಳಿನಲ್ಲಿ ದೊರಕುವ ಮರಳನ್ನು ತೆಗೆಯಲು ಕಾರ್ಯಾದೇಶ ನೀಡಿರುವ ಮರಳು ಬ್ಲಾಕ್‌ನಲ್ಲಿ ಕೆ.ಎಸ್.ಎಂ.ಸಿ.ಎಲ್, ಬೆಂಗಳೂರುರವರಿಗೆ ಒದಗಿಸಿರುವ ಕರ್ನಾಟಕ ಸರ್ಕಾರದ ಮರಳು ಮಿತ್ರ ಆ್ಯಪ್ ಮೂಲಕ ಅಕ್ಟೋಬರ್ 27 ರಿಂದ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಲಭ್ಯವಿರುತ್ತದೆ.

ಮರಳನ್ನು ಪಡೆದುಕೊಳ್ಳಲು ಇಚ್ಚಿಸುವವವರು ಸದರಿ ಮರಳು ಬ್ಲಾಕ್‌ಗಳಿಗೆ ಸಂಬಂಧಿಸಿದ ಸ್ಟಾಕ್ ಯಾರ್ಡ್ನಿಂದ ಉಡುಪಿ ಇ- ಸ್ಯಾಂಡ್ ಆ್ಯಪ್ ಮತ್ತು ಕರ್ನಾಟಕ ಸರ್ಕಾರದ ಮರಳು ಮಿತ್ರ ಆ್ಯಪ್ ಮುಖಾಂತರ ಪಡೆದುಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿಯವರ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ, ಮರಳು ಮಿತ್ರ ದೂರವಾಣಿ ಸಂಖ್ಯೆ: 8028055000, ಉಡುಪಿ ಇ-ಸ್ಯಾಂಡ್ ಆ್ಯಪ್ ದೂರವಾಣಿ ಸಂಖ್ಯೆ – 6366248666, 6366743888 ಹಾಗೂ 6366871888 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಭೂ ವಿಜ್ಞಾನಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.