ದೈವ ನರ್ತಕರ ಜೊತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾಂತಾರ ವೀಕ್ಷಣೆ

ಉಡುಪಿ: ಜಾತಿ ಮತ ದೇಶ ಭಾಷೆಗಳ ಗಡಿ ದಾಟಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕನ್ನಡದ ಕಾಂತಾರ ಸಿನಿಮಾವನ್ನು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ವಿಭಿನ್ನವಾಗಿ ವೀಕ್ಷಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನೆಯ ತುಳುನಾಡಿನ ದೈವಾರಾಧನೆ, ಕಂಬಳ ಸಹಿತ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಕಾಂತಾರ ಸಿನಿಮಾವನ್ನು ಕುಂದಾಪುರ ಭಾಗದ ದೈವ ನರ್ತಕರು, ದರ್ಶನ ಪಾತ್ರಿಗಳ ಸಹಿತ, ದೈವದ ಸೇವೆ […]

ಕೆಮ್ಮಣ್ಣು: ಗುಜ್ಜರಬೆಟ್ಟು ಎಸ್.ಸಿ. ಕಾಲನಿಯಲ್ಲಿ ದೀಪಾವಳಿ ತುಡರ್ ಕಾರ್ಯಕ್ರಮದ ಪೂರ್ವಭಾವಿ ಸಭೆ

ಕೆಮ್ಮಣ್ಣು: ಕೇದಾರೋತ್ಥಾನ ಟ್ರಸ್ಟ್ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ವತಿಯಿಂದ ನಾಳೆ, ಅ. 26 ರಂದು ಸಂಜೆ 6.00 ಗಂಟೆಗೆ ಕೆಮ್ಮಣ್ಣು ಗುಜ್ಜರಬೆಟ್ಟು ಪರಿಶಿಷ್ಟ ಜಾತಿಯವರ ಕಾಲನಿಯಲ್ಲಿ ದೀಪಾವಳಿ ತುಡರ್ ಕಾರ್ಯಕ್ರಮ ನಡೆಯಲಿದೆ. ಕೇದಾರೋತ್ಥಾನ ಟ್ರಸ್ಟ್ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದ ಪೂರ್ವ ತಯಾರಿ ಬಗ್ಗೆ ಮಂಗಳವಾರದಂದು ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ಹಾಗೂ ಸ್ಥಳೀಯರೊಂದಿಗೆ ಶಾಸಕ ರಘುಪತಿ ಭಟ್ ಸಭೆ ನಡೆಸಿ ಚರ್ಚಿಸಿದರು. ಈ ಸಂದರ್ಭದಲ್ಲಿ ಕೇದಾರೋತ್ಥಾನ […]

ಅಕ್ಟೋಬರ್ 28 ರಂದು ಸೈಂಟ್ ಮೆರೀಸ್ ದ್ವೀಪದಲ್ಲಿ ಕೋಟಿ ಕಂಠ ಗಾಯನ

ಮಲ್ಪೆ: ಉಡುಪಿ ನಗರಸಭೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಕ್ಟೋಬರ್ 28 ರಂದು ಮಲ್ಪೆಯ ಸೈಂಟ್ ಮೆರೀಸ್ ದ್ವೀಪದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಅಂದು ಬೆಳಗ್ಗೆ 9 ಗಂಟೆಗೆ ಮಲ್ಪೆ ಸೀ-ವಾಕ್‌ನಲ್ಲಿ ಹಾಜರಿರಬೇಕು. ಸೀ-ವಾಕ್‌ನಿಂದ ಸೈಂಟ್ ಮೆರೀಸ್ ದ್ವೀಪಕ್ಕೆ ಉಚಿತ ಬೋಟಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಕ ಮಿರ್ಜಾ ಇಸ್ಮಾಯಿಲ್ ಜನ್ಮ ದಿನಾಚರಣೆ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾದ ಮಿರ್ಜಾ ಇಸ್ಮಾಯಿಲ್ ಇವರ ಹುಟ್ಟು ಹಬ್ಬವನ್ನು ಮಂಗಳವಾರ ಉಡುಪಿಯ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಆಚರಿಸಲಾಯಿತು. ಮಿರ್ಜಾ ಇಸ್ಮಾಯಿಲ್ ಅವರ ಮಾನವೀಯ ಗುಣಗಳನ್ನು ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಾರ್ಯದರ್ಶಿ ಆನಂದ್ ಪಿ, ಹಾಗೂ ನರಸಿಂಹಮೂರ್ತಿಯವರು ಕೊಂಡಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಾಥ್  ಭಾಗವಹಿಸಿದ್ದರು. ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆಯ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ […]

ಶಾಸಕ ರಘುಪತಿ ಭಟ್ ರಿಂದ ಗೋಪೂಜೆ

ಉಡುಪಿ: ಗೋ ಪೂಜೆ ಮತ್ತು ಬಲಿಪಾಡ್ಯಮಿಯಯಂದು ಶಾಸಕ ಕೆ. ರಘುಪತಿ ಭಟ್ ಅವರ ಸ್ವಗೃಹದಲ್ಲಿ ಅಸಂಖ್ಯ ಕೋಟಿ ದೇವಾನುದೇವತೆಗಳ ನೆಲೆಯಾದ ಗೋ ಮಾತೆಯ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.