ಪುರಾತನ ಸಂಸ್ಕಾರ ಮತ್ತು ಧರ್ಮದಿಂದ ದೇಶದ ಉಳಿವು: ಗುರ್ಮೆ ಸುರೇಶ್ ಶೆಟ್ಟಿ

ಬ್ರಹ್ಮಾವರ: ಪುರಾತನ ಸಂಸ್ಕಾರ ಮತ್ತು ಧರ್ಮದಿಂದ ದೇಶ ಉಳಿದಿದೆ ಎಂದು ಗುರ್ಮೆ ಫೌಂಡೇಷನ್ ನ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಅಭಿಪ್ರಾಯಪಟ್ಟರು.

ಚಾಂತಾರಿನ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಭಾನುವಾರ ನಡೆದ ಚಾಂತಾರಿನ ಚಾನ್ಸ್ ಸ್ಟಾರ್ ಯೂತ್ ಕ್ಲಬ್ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಮತ್ತು ಯಾಂತ್ರಿಕ ಜೀವನ ಶೈಲಿಯ ನಡುವೆಯೂ ಸಾಮರಸ್ಯದ ಬಾಳು ನಡೆಯುತ್ತಿದ್ದು ಸಮಾನ ಮನಸ್ಕರ ತಂಡದಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದರು.

 

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸಮಾಜಮುಖಿ ಭಾವನೆ ಯುವ ಮನಸ್ಸುಗಳಲ್ಲಿ ಇರಬೇಕು. ಪ್ರತಿಫಲದ ಅಪೇಕ್ಷೆ ಇಲ್ಲದೆ ಊರಿನ ಅಭಿವೃದ್ಧಿಗೆ ಶ್ರಮಿಸುವ ಸದೃಢ ಯುವ ಸಮೂಹವನ್ನು ನಾವು ಕಟ್ಟಿಕೊಳ್ಳಬೇಕು ಎಂದರು.

ಕ್ಲಬ್ಬಿನ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಿರುತೆರೆ ನಿರ್ದೇಶಕ ಆರೂರು ಜಗದೀಶ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷ ಡಾ. ಜಗದೀಶ ಶೆಟ್ಟಿ, ಬೆಂಗಳೂರಿನ ವಿ.ಐ.ಪಿ ಹೈಸ್ಕೂಲ್ ನ ಕುಶಲ ಶೆಟ್ಟಿ, ಚಾಂತಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬೇಬಿ ಪೂಜಾರಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಬಿರ್ತಿ, ಸಾಂಸ್ಕೃತಿಕ ಚಿಂತಕ ದೀಪಕ್ ಶೆಟ್ಟಿ ಬಾರ್ಕೂರು, ಉಡುಪಿ ವ್ಯವಸಾಯ ಉತ್ಪನ್ನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಬ್ರಹ್ಮಾವರ ರೋಟರಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಟಪಾಡಿ, ಪತ್ರಕರ್ತ ವಸಂತ ಗಿಳಿಯಾರು, ಚಾಂತಾಂರು ಗರಡಿಯ ಮೊಕ್ತೇಸರ ನರೇಂದ್ರ ಪೈ ಕೊಚ್ಚಿಗಾರ್, ಉದಯ ಶೆಟ್ಟಿ, ಸಂತೋಷ್ ಶೆಟ್ಟಿ ಬೈಲುಮನೆ, ರೋಹಿತ್ ಶೆಟ್ಟಿ ಬಸ್ರೂರು, ಕೃಷ್ಣಾನಂದ ಶೆಟ್ಟಿ, ಅಮರನಾಥ ಶೆಟ್ಟಿ, ದಾಮೋದರ್ ಮೆಂಡನ್, ಗುರುರಾಜ್ ರಾವ್ ಉಪಸ್ಥಿತರಿದ್ದರು.

ಈ ಸಂದರ್ಭ 25 ಸಂವತ್ಸರಗಳ ನೆನಪಿಗಾಗಿ ವಿವಿಧ ಕ್ಷೇತ್ರಗಳ 25 ಸಾಧಕರನ್ನು ಸನ್ಮಾನಿಸಲಾಯಿತು. ಬಡ ವಿದ್ಯಾರ್ಥಿನಿಗೆ ಶೈಕ್ಷಣಿಕ ಆರ್ಥಿಕ ಧನ ಸಹಾಯ ನೀಡಲಾಯಿತು.

ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮನೋಜ್ ಶೆಟ್ಟಿ ವರದಿ ವಾಚಿಸಿದರು. ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಶೆಟ್ಟಿ ವಂದಿಸಿದರು. ದಾಮೋದರ್ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಲೋಕಕಲ್ಯಾಣಾರ್ಥವಾಗಿ ಚಂಡಿಕಾಯಾಗ ನಡೆಯಿತು.
ಅಪ್ಪಣ್ಣ ಹೆಗ್ಡೆ ಧಾರ್ಮಿಕ ಉಪನ್ಯಾಸ ನೀಡಿದರು.

ಚಾಂತಾರು ಮದಗ ಅಭಿವೃದ್ದಿಗೆ ಒತ್ತು ನೀಡಲು ಆಗ್ರಹಿಸಲಾಯಿತು.