ಕನ್ನಡ ನಾಡು-ನುಡಿ-ಸಂಸ್ಕೃತಿಗಾಗಿ ನವೆಂಬರ್ 1 ರಿಂದ 30 ರವರೆಗೆ ಸಂಪದ ತಿಂಗಳ ಸಡಗರ ಕಾರ್ಯಕ್ರಮ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್ ಮಣೂರು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಿಂದ 30 ರ ವರೆಗೆ ಪೂರ್ತಿ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಜನಪದ, ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದ ಸಂಪದ ತಿಂಗಳ ಸಡಗರ ಕಾರ್ಯಕ್ರಮಗಳು ನಡೆಯಲಿದೆ.

ನವೆಂಬರ್ 4 ರಂದು ಬೈಂದೂರು, ನ. 5 ರಂದು ಉಡುಪಿ ಹಾಗೂ ನ. 6 ರಂದು ಬ್ರಹ್ಮಾವರದಲ್ಲಿ ಸಂಜೆ 5 ಗಂಟೆಗೆ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ, ನ. 7 ರಂದು ಸಂಜೆ 5 ಗಂಟೆಗೆ ಹೆಬ್ರಿ ತಾಲೂಕಿನ ಸೋಮೇಶ್ವರ ಪೇಟೆ ಕಾಸನಮಕ್ಕಿಯಲ್ಲಿ ಯೋಧರೆಡೆಗೆ ನಮ್ಮ ನಡಿಗೆ, ನ. 8 ರಂದು ಕಾರ್ಕಳದಲ್ಲಿ ಸಂಜೆ 5 ಗಂಟೆಗೆ ಹಿರಿಯರೆಡೆಗೆ ನಮ್ಮ ನಡಿಗೆ, ನ. 9 ರಂದು ಮಧ್ಯಾಹ್ನ 3 ಗಂಟೆಗೆ ಕುಂದಾಪುರ ತಾಲೂಕು ಬಸ್ರೂರು ವಿಶಾಲಾಕ್ಷಿ ಪೂಂಜಾ ಸಭಾಭವನದಲ್ಲಿ ನೃತ್ಯ ಪ್ರಾತ್ಯಕ್ಷಿಕೆ, ನ. 10 ರಂದು ಬೆಳಗ್ಗೆ 10 ಗಂಟೆಗೆ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾರ್ವಜನಿಕ ಕವಿಗೋಷ್ಠಿ, ನ. 11 ರಂದು ಬೆಳಗ್ಗೆ 10.30 ಕ್ಕೆ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕವಿಗೋಷ್ಠಿ, ನ. 12 ರಂದು ಕಾರ್ಕಳದಲ್ಲಿ ಸಂಜೆ 5 ಗಂಟೆಗೆ ಹಿರಿಯರೆಡೆಗೆ ನಮ್ಮ ನಡಿಗೆ, ನ. 13 ರಂದು ಬ್ರಹ್ಮಾವರ ತಾಲೂಕಿನ ಮಣೂರು ಬಾಳೆಬೆಟ್ಟುವಿನಲ್ಲಿ ಸಂಜೆ 6 ಗಂಟೆಗೆ ಹಿರಿಯರೆಡೆಗೆ ನಮ್ಮ ನಡಿಗೆ, ನ. 14 ರಂದು ಸಂಜೆ 6 ಗಂಟೆಗೆ ಕೋಟ ಕಾರಂತ ಥೀಂ ಪಾರ್ಕ್ನಲ್ಲಿ ಬಾಲು ಮಕ್ಕಳ ಕಿರುಚಿತ್ರ
ಬಿಡುಗಡೆ, ನ. 15 ರಂದು ಬೆಳಗ್ಗೆ 9.30 ಕ್ಕೆ ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರ ವಿಕಸನ ತರಬೇತಿ ಕಾರ್ಯಾಗಾರ, ನ. 16 ರಂದು ಬೆಳಗ್ಗೆ 10.30 ಕ್ಕೆ ಬೈಂದೂರು ತಾಲೂಕು ಮುಲ್ಲಿಬಾರು ಸ.ಹಿ.ಪ್ರಾ.ಶಾಲೆಯಲ್ಲಿ ಕಥೆ- ಕವನ ರಚನೆ ಕಾರ್ಯಾಗಾರ, ನ. 17 ರಂದು ಸಂಜೆ 4.45 ಕ್ಕೆ ಹೆಬ್ರಿ ತಾಲೂಕು ಮುದ್ರಾಡಿಯಲ್ಲಿ ಶತಾಯುಷಿಯೊಂದಿಗೆ ಸಂವಾದ ಮತ್ತು ಗೌರವ, ನ. 18 ರಂದು ಮಧ್ಯಾಹ್ನ 2 ಗಂಟೆಗೆ ಕಾಪು ತಾಲೂಕು ಇನ್ನಂಜೆ ಎಸ್.ವಿ.ಎಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಕನ್ನಡದ ಕಲರವ, ನ. 19 ರಂದು ಬೆಳಗ್ಗೆ 9.30 ಕ್ಕೆ ಕಾರ್ಕಳ ತಾಲೂಕು ಪೆರ್ವಾಜೆ ಸುಂದರ ಪುರಾಣಿಕ ಪ್ರೌಢಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ, ನ. 20 ರಂದು ಸಂಜೆ 5 ಕ್ಕೆ ಬ್ರಹ್ಮಾವರ ತಾಲೂಕು ಮಂದಾರ್ತಿಯಲ್ಲಿ, ನ. 21 ರಂದು ಸಂಜೆ 4 ಗಂಟೆಗೆ ಕುಂದಾಪುರ ತಾಲೂಕು ಡಾ.ಬಿ.ವಿ ಉಡುಪರ ಮನೆ ಇಲ್ಲಿ ಹಾಗೂ ನ. 22 ರಂದು ಸಂಜೆ 5.30 ಕ್ಕೆ ಬೈಂದೂರು ತಾಲೂಕು ಉಪ್ಪುಂದದಲ್ಲಿ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ನಡೆಯಲಿದೆ.

ನ. 23 ರಂದು ಮಧ್ಯಾಹ್ನ 2 ಗಂಟೆಗೆ ಕಾರ್ಕಳ ತಾಲೂಕು ಬೈಲೂರ ಬಸ್ರಿ ಸ.ಹಿ.ಪ್ರಾ. ಶಾಲೆಯಲ್ಲಿ ಸಾಹಿತ್ಯ ಕಮ್ಮಟ, ನ. 24 ರಂದು ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆ 10.30 ಕ್ಕೆ ಕವಿಗೋಷ್ಠಿ ಹಾಗೂ ಮಧ್ಯಾಹ್ನ 3 ಕ್ಕೆ ಉಡುಪಿಯ ಅಂಬಲಪಾಡಿಯಲ್ಲಿ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ (ಮೊದಲ ದಿನ), ನ. 25 ರಂದು ಅಂಬಲಪಾಡಿಯಲ್ಲಿ ಬೆಳಗ್ಗೆ 9.30 ಕ್ಕೆ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ (ಎರಡನೇ ದಿನ) ಹಾಗೂ ಮಧ್ಯಾಹ್ನ 2 ಕ್ಕೆ ಕಾಪು ದಂಡತೀರ್ಥ ಕಾಲೇಜಿನಲ್ಲಿ ಶಾಲೆಯತ್ತ ಸಾಹಿತ್ಯ, ನ. 26 ರಂದು ಮಧ್ಯಾಹ್ನ 2 ಗಂಟೆಗೆ ಕುಂದಾಪುರ ತಾಲೂಕು ಬಸ್ರೂರು ಪ್ರತಿಭಾ ಟ್ಯುಟೋರಿಯಲ್ಸ್ ಇಲ್ಲಿ ಕವಿಗೋಷ್ಠಿ, ನ. 27 ರಂದು ಬೆಳಗ್ಗೆ 10 ಗಂಟೆಗೆ ಹೆಬ್ರಿ ತಾಲೂಕು ಬೆಳ್ವೆ ಸ.ಹಿ.ಪ್ರಾ. ಶಾಲೆಯಲ್ಲಿ ಸಾಹಿತ್ಯ ಸಂಭ್ರಮ, ನ. 28 ರಂದು ಮಧ್ಯಾಹ್ನ 3 ಗಂಟೆಗೆ ಕುಂದಾಪುರದ ಬಸ್ರೂರು ಹಿಂದೂ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಶಾಲಾ ಮಕ್ಕಳಲ್ಲಿ ಸೃಜನಶೀಲತೆ
ಕಾರ್ಯಕ್ರಮ, ನ. 29 ರಂದು ಸಂಜೆ 5 ಗಂಟೆಗೆ ಕಾರ್ಕಳ ಎಸ್.ವಿ.ಟಿ ಪದವಿಪೂರ್ವ ಕಾಲೇಜಿನಲ್ಲಿ ಕವಿಗೋಷ್ಠಿ ಮತು ನ. 30 ರಂದು ಮಧ್ಯಾಹ್ನ 3 ಗಂಟೆಗೆ ಬ್ರಹ್ಮಾವರ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ಜಿಲ್ಲಾ ಘಟಕದ ಆಶ್ರಯದಲ್ಲಿ ಸಮಕ್ಷಮ, ಸಮಾರೋಪ ಹಾಗೂ ಕೋಟ, ಬ್ರಹ್ಮಾವರ ಹೋಬಳಿ ಘಟಕಗಳ ಉದ್ಘಾಟನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.