ಮೂಡುಅಲೆವೂರು: ತುಳುನಾಡಿನ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಶೂಟ್ಸ್ ಆಫ್ ತುಳುನಾಡ್ ಹಾಗೂ ರುದ್ರ ಎಂಟರ್ಟೈನ್ಮೆಂಟ್ ಮುಂಬೈ ಇದರ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಮೊಸ್ಟ್ ಪಾಪ್ಯುಲರ್ ದೈವಾರಾಧನೆ ಲೆನ್ಸ್ ಮನ್- 2020’ ಇನ್ಟಾಗ್ರಾಮ್ ಫೋಟೋಗ್ರಾಫಿ ಸ್ಪರ್ಧೆಯಲ್ಲಿ ಸಹನಾ ‘ದೈವರಾಧನೆ ಲೆನ್ಸ್ ಮನ್ ಪ್ರಶಸ್ತಿ’ ಹಾಗೂ ಸುಮಂತ್ ಎಸ್. ಆಚಾರ್ಯ ‘ದೈವರಾಧನೆ ಲೆನ್ಸ್ ಮೆನ್ ಇಂಟರ್ನೆಟ್ ಪಾಪ್ಯುಲರ್ ಪ್ರಶಸ್ತಿ’ ಮುಡಿಗೇರಿಸಿಕೊಂಡಿದ್ದಾರೆ.
ಮೂಡುಅಲೆವೂರು ಜುಮಾದಿ ದೈವಾಸ್ಥಾನದ ಬಳಿ ಶನಿವಾರ ನಡೆದ ಸರಳ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ತೀರ್ಪುಗಾರರಾಗಿ ಸಹಕರಿಸಿದ ಶೇಖರ್ ಕಲಾಪ್ರತಿಭಾ, ಸಾನಿಧ್ ಪೂಜಾರಿ, ಸುನಿಲ್ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶ್ ಶೆಟ್ಟಿ ಮುಂಬೈ ತೀರ್ಪುಗಾರರಾಗಿ ಸಹಕರಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಹರೀಶ್ ಕಿಣಿ ಅಲೆವೂರು, ಮೂಡುಅಲೆವೂರು ಜುಮಾದಿ ದೈವಾಸ್ಥಾನದ ಮುಕ್ತೇಸರ ಅನಿಲ್ ಕುಮಾರ್ ಶೆಟ್ಟಿ, ರಾಘು ಪೂಜಾರಿ ಕಲ್ಮಂಜೆ, ಹರೀಶ್ ಶೆಟ್ಟಿ ಮೂಡುಅಲೆವೂರು, ಮುರಳೀಧರ ಭಟ್ ಅಲೆವೂರು, ಸತೀಶ್ ಪೂಜಾರಿ, ಉದಯ ಶೇರಿಗಾರ್ ಅಲೆವೂರು, ಅಣ್ಣಪ್ಪ ಪೂಜಾರಿ ದೆಂದೂರು, ಪ್ರತಾಪ್ ಕುಂದರ್ ಅಲೆವೂರು, ಅಭಿಲಾಷ್ ಪೂಜಾರಿ ದೆಂದೂರು ಹಾಗೂ ಶೂಟ್ಸ್ ಆಫ್ ತುಳುನಾಡ್ ತಂಡದ ಸದಸ್ಯರು ಉಪಸ್ಥಿತರಿದ್ದರು.