ಕಾರ್ಕಳ: ಮೂರು ದಶಕಗಳ ಸಣ್ಣ ಬಾಡಿಗೆ ಕಟ್ಟಡದಲ್ಲಿ ಮೊಳಕೆಯೊಡೆದ ಕಾರ್ಕಳದ ರಾಜಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. 30ನೇ ವರ್ಷದ ಸಂಭ್ರಮದ ಅಂಗವಾಗಿ ನಿರ್ಮಿಸಲಾದ ಸಹಕಾರ ಸಿಂಧೂರ ವಾಣಿಜ್ಯ ಸಂಕೀರ್ಣವು ಏ 26ರಂದು ಬೆಳಿಗ್ಗೆ 10.30 ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ರವೀಂದ್ರ ಪ್ರಭು ಕಡಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಹಕಾರಿಯು 1996ರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹಸ್ತದಿಂದ ಚಾಲನೆ ಪಡೆದಿತ್ತು.ಜೋಡುರಸ್ತೆಯ ಪ್ರಧಾನ ಕಛೇರಿ ಪಕ್ಕದ 62 ಸೆಂಟ್ಸ್ ನಿವೇಶನದಲ್ಲಿ 55000 ಚದರ ಅಡಿ ವಿಸ್ತೀರ್ಣದ ಈ ಬೃಹತ್ ಸಂಕೀರ್ಣ ತಲೆ ಎತ್ತಿದೆ. ಲೋಕಾರ್ಪಣೆ ಸಂದರ್ಭ ಬೆಳಿಗ್ಗೆ 9.30 ರಿಂದ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಹಾಗೂ ಮಧ್ಯಾಹ್ನ 3.00ರಿಂದ ‘ಕರ್ಣಾರ್ಜುನ-ಸುಧನ್ವಾರ್ಜುನ’ ಯಕ್ಷಗಾನ ಏರ್ಪಡಿಸಲಾಗಿದೆ 7,000ಕ್ಕೂ ಅಧಿಕ ಜನರಿಗೆ ಊಟೋಪಚಾರ ಹಾಗೂ ವಾಹನ ನಿಲುಗಡೆಯ ವ್ಯವಸ್ತೆ ಮಾಡಲಾಗಿದೆ ಎಂದು ವಿವರಿಸಿದರು.
ಬೆಳಿಗ್ಗೆ 10.30 ಕ್ಕೆ ಸೊಸೈಟಿಯ ಅವರಣದಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಕೈವಲ್ಯ ಮಠದ ಶ್ರೀಮತ್ ಶಿವಾನಂದ ಸರಸ್ವತಿ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆ ಹಾಗೂ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನೆರವೇರಿಸಲಿದ್ದಾರೆ.
ಉಪಾಧ್ಯಕ್ಷ ನೀರೆ ರವೀಂದ್ರ ನಾಯಕ್, ಸಿಇಒ ಸುರೇಂದ್ರ ನಾಯಕ್, ಹರೀಶ್ಚಂದ್ರ ತೆಂಡುಲ್ಕರ್ ನಿರ್ದೇಶಕರಾದ ಹರೀಶ್ ನಾಯಕ್ ಅಜೆಕಾರು, ಸುನಿಲ್ ನಾಯಕ್ ಸಚ್ಚಿದಾನಂದ ಪ್ರಭು ಕಣಂಜಾರು, ರಾಮಕೃಷ್ಣ ತೆಂಡುಲ್ಕರ್ ಹಿರ್ಗಾನ ದಿನೇಶ್ ನಾಯಕ್ ಹೆರ್ಮುಂಡೆ ಪತ್ರಿಕಾಗೋಷ್ಠಿಯಲ್ಲಿದ್ದರು.

















