ಐಪಿಎಲ್ ಪಂದ್ಯದ ವೇಳೆ ಇ-ಸಿಗರೇಟ್ ಸೇದುವಾಗ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ರಿಯಾನ್ ಪರಾಗ್: ಪಂದ್ಯ ನಿಷೇಧಕ್ಕೆ ಒಳಗಾಗುತ್ತಾರಾ ಆರ್‌ಆರ್ ನಾಯಕ?

ಐಪಿಎಲ್ 2026ರ 40ನೇ ಪಂದ್ಯದಲ್ಲಿ Punjab Kings ಮತ್ತು Rajasthan Royals ತಂಡಗಳು ಮಂಗಳವಾರ ಮುಲ್ಲನ್ಪುರದಲ್ಲಿ ಮುಖಾಮುಖಿಯಾದವು. ಈ ರೋಚಕ ಹಣಾಹಣಿಯಲ್ಲಿ Rajasthan Royals 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆದರೆ ಇದೀಗ ಆರ್‌ಆರ್ ನಾಯಕ ರಿಯಾನ್ ಪರಾಗ್ ಸುದ್ದಿಯಲ್ಲಿದ್ದಾರೆ, ಅವರ ವರ್ತನೆ ಈಗ ಎಲ್ಲೆಡೆ ಸೆರೆಯಾಗಿದೆ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರು ಇ-ಸಿಗರೇಟ್ ಸೇದುತ್ತಿರುವ ದೃಶ್ಯ ಪ್ರಸಾರ ಕ್ಯಾಮೆರಾದಲ್ಲಿ ಸೆರೆ ಯಾಗಿದ್ದು, ಆ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಚಂಡೀಗಢದಲ್ಲಿ ನಡೆದ ಈ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನ 16ನೇ ಓವರ್ ವೇಳೆ ರಿಯಾನ್ ಪರಾಗ್ 16 ಎಸೆತಗಳಲ್ಲಿ 29 ರನ್ ಗಳಿಸಿ ಔಟಾಗಿ ಪೆವಿಲಿಯನ್‌ಗೆ ಮರಳಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ಕ್ಯಾಮೆರಾ ಅವರತ್ತ ತಿರುಗಿದಾಗ ಅವರು ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ.

ಕ್ರೀಡಾಂಗಣಗಳಲ್ಲಿ ಆಟಗಾರರ ನಡವಳಿಕೆಗೆ ಸಂಬಂಧಿಸಿ Board of Control for Cricket in India ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ಡ್ರೆಸ್ಸಿಂಗ್ ರೂಮ್ ಅಥವಾ ಡಗೌಟ್ ಪ್ರದೇಶಗಳಲ್ಲಿ ತಂಬಾಕು ಸಂಬಂಧಿತ ಉತ್ಪನ್ನಗಳ ಬಳಕೆಗೆ ನಿಷೇಧವಿದೆ. ಹೀಗಾಗಿ ಈ ವಸ್ತು ಒಳಗೆ ಹೇಗೆ ತಲುಪಿತು? ಎಂಬ ಪ್ರಶ್ನೆ ಈಗ ಅಭಿಮಾನಿಗಳಲ್ಲೂ ಚರ್ಚೆಗೆ ಕಾರಣವಾಗಿದೆ. ಈ ವಿಚಾರದಲ್ಲಿ Board of Control for Cricket in India ಅಥವಾ Rajasthan Royals ತಂಡದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ. ಈ ವರ್ತನೆಯ ಕಾರಣಕ್ಕಾಗಿ ರಿಯಾನ್ ಪರಾಗ್ ಕೆಲವು ಪಂದ್ಯಗಳ ನಿಷೇಧಕ್ಕೆ ಒಳಗಾಗುತ್ತಾರಾ ಎನ್ನುವ ಪ್ರರ್ಶನೆಗಳು ಕೂಡ ಮೂಡಿದೆ.