ಋಣ ಮುಕ್ತ ಕಾಯ್ದೆ- ಸಹಕಾರಿಗಳಿಗೆ ಅನ್ವಯಿಸುವುದಿಲ್ಲ: ಮಂಜುನಾಥ್‌

ಉಡುಪಿ: ರಾಜ್ಯ ಸರ್ಕಾರ ಘೋಷಿಸಿರುವ ‘ಕರ್ನಾಟಕ ಋಣ ಮುಕ್ತ ಕಾಯ್ದೆ-2018’ ಸೌಹಾರ್ದ ಸಹಕಾರಿಗಳಿಗೆ ಅನ್ವಯಿಸುವುದಿಲ್ಲ. ಈ ಕಾಯ್ದೆ ಕೇವಲ ಲೇವಾದೇವಿಗಾರರು ಮತ್ತು ಪಾನ್‌ ಬ್ರೋಕರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ನಿರ್ದೇಶಕ ಎಸ್‌.ಕೆ. ಮಂಜುನಾಥ್‌ ಹೇಳಿದ್ದಾರೆ.
ಎಲ್ಲಾ ಸೌಹಾರ್ದ ಸಹಕಾರಿಗಳ ಸದಸ್ಯರುಗಳು ಪಡೆದಿರುವ ಎಲ್ಲಾ ರೀತಿಯ ಸಾಲಗಳನ್ನು ಕ್ಲಪ್ತ ಸಮಯಕ್ಕೆ ಪಾವತಿಸಿ ಸಹಕಾರಿ ರಂಗದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.