ಕಾರ್ಕಳ: ಸ್ವರ್ಣಾರಾಧನಾ ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾದ ಸ್ವರ್ಣಾರತಿ ಕಾರ್ಯಕ್ರಮವನ್ನು ಎಣ್ಣೆಹೊಳೆ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಾಲಯದ ಬಳಿ ಸ್ವರ್ಣಾನದಿ ತಟದಲ್ಲಿ ಶ್ರೀ ಗೌಡಪಾದಾಚಾರ್ಯ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಇಂದು ಚಾಲನೆ ನೀಡಿದರು.
ಅಕ್ಟೋಬರ್ ಎರಡರಿಂದ ಪ್ರಾರಂಭವಾದ ಸ್ವರ್ಣಾರತಿ ಕಾರ್ಯಕ್ರಮವು ಎಪ್ರಿಲ್ ತಿಂಗಳ 13, 2021 ರ ಸೌರಮಾನ ಯುಗಾದಿಯ ತನಕ ನಡೆಯಲಿದೆ.
ಸಮಾರಂಭದಲ್ಲಿ ಮಹಾಲಕ್ಷ್ಮಿ ದೇವಸ್ಥಾನ ದ ಮೊಕ್ತೆಸರ ರಘುರಾಮ ನಾಯಕ್ ಅಂಡಾರು, ,ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷ ಅಶೋಕ್ ನಾಯಕ್ ಸಂಘದ ಸದಸ್ಯರು ಭಕ್ತಾದಿಗಳು ಭಾಗವಹಿಸಿದ್ದರು.