ತಮ್ಮದೇ ತಂಡದ ಆಟಗಾರನ ದಾಖಲೆ ಮುರಿದ ರೋಟ್​ : ತಂಡಕ್ಕಾಗಿ ಏಕಾಂಗಿ ಪ್ರದರ್ಶನ

ನವದೆಹಲಿ: ಇಂಗ್ಲೆಂಡ್ ತಂಡದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್ ಮನ್ ಜೋ ರೂಟ್ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಒಂದರ ಹಿಂದೆ ಒಂದರಂತೆ ಕ್ರಿಕೆಟ್ ದಾಖಲೆಗಳನ್ನೂ ನಿರ್ಮಿಸುತ್ತಿದ್ದಾರೆ.ನಿನ್ನೆ ಆರಂಭವಾದ ಆಶಸ್​ ಸರಣಿಯ ಮೊದಲ ದಿನ 393 ರನ್​ 8 ವಿಕೆಟ್​ ಕಳೆದುಕೊಂಡು ಇಂಗ್ಲೆಂಡ್​ ಡಿಕ್ಲೇರ್​​ ಘೋಷಿಸಿದೆ.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಆಶಸ್​ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಮತ್ತೊಂದು ಮೈಲಿಗಲ್ಲನ್ನು ತಲುಪಿದ್ದಾರೆ.

ಇದು ಮತ್ತೊಮ್ಮೆ ಅವರ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಇನ್ನಿಂಗ್ಸ್ ಎಂದು ಸಾಬೀತಾಯಿತು. ಹಾಗೆ ಮಾಡುವ ಮೂಲಕ, ಅವರು ತಮ್ಮ ದೇಶದ ಆಟಗಾರ ಅಲಿಸ್ಟರ್​ ಕುಕ್ ಅವರನ್ನು ಹಿಂದಿಕ್ಕಿದರು. ಈ ಮೂಲಕ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು.

ಈ ಇನ್ನಿಂಗ್ಸ್ ಸಮಯದಲ್ಲಿ, ಜೋ ರೂಟ್ ಅವರು ತಮ್ಮ 30 ನೇ ಟೆಸ್ಟ್ ಪಂದ್ಯದ ಶತಕವನ್ನು ಗಳಿಸುವ ಮೂಲಕ ಡಾನ್ ಬ್ರಾಡ್ಮನ್ ಅವರ 29 ಟೆಸ್ಟ್ ಶತಕಗಳ ದಾಖಲೆಯನ್ನು ಮೀರಿಸಿದರು, ಇದರ ಜೊತೆಗೆ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಅವರ ತಂಡಕ್ಕೆ ಹೆಚ್ಚಿನ ಬಾರಿ ಅತಿ ಹೆಚ್ಚು ಸ್ಕೋರರ್ ಆದರು. ಇದುವರೆಗೂ ಈ ದಾಖಲೆ ಅಲಿಸ್ಟರ್ ಕುಕ್ ಹೆಸರಿನಲ್ಲಿತ್ತು. ಈ ರೀತಿಯ ಸಾಧನೆ ಮಾಡಿದ ವಿಶ್ವದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ನಿನ್ನೆ ರೂಟ್​ ಈ ಸಾಧನೆ ಮಾಡುವ ಮೊದಲು ತಮ್ಮದೇ ದೇಶದ ಆಟಗಾರ ಅಲಿಸ್ಟರ್ ಕುಕ್ ಮತ್ತು ಶ್ರೀಲಂಕಾದ ಅನುಭವಿ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ ಜೊತೆಗ 58 ಬಾರಿ ಅತಿ ಹೆಚ್ಚು ರನ್​ಗಳಿಸಿದ ಆಟಗಾರರಾಗಿ ಸ್ಥಾನ ಪಡೆದುಕೊಂಡಿದ್ದರು. ನಿನ್ನೆ 118 ರನ್​ ಗಳಿಸುವ ಮೂಲಕ 59ನೇ ಬಾರಿಗೆ ತಂಡದಲ್ಲಿ ಏಕಾಂಗಿ ಹೋರಾಟ ನಡೆಸಿದ ಆಟಗಾರ ಆದರು.
ಕ್ರಿಕೆಟ್​ ದೇವರು ಸಚಿನ್​ ಈ ದಾಖಲೆಯಲ್ಲೂ ಅಗ್ರಗಣ್ಯ: ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನು ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ಸಚಿನ್​ ತೆಂಡೂಲ್ಕರ್​ ಏಕಾಂಗಿಯಾಗಿ ಭಾರತಕ್ಕೆ 65 ಬಾರಿ ಇನ್ನಿಂಗ್ಸ್​ ಕಟ್ಟಿದ್ದಾರೆ. ಮೂರನೇ ಸ್ಥಾನದಲ್ಲಿ ಭಾರತದ ಮಾಜಿ ಟೆಸ್ಟ್ ಆಟಗಾರ ಮತ್ತು ಲೆಜೆಂಡರಿ ಓಪನರ್ ಸುನಿಲ್ ಗವಾಸ್ಕರ್ ಅವರ ಹೆಸರಿದೆ. ಅವರು ತಂಡಕ್ಕಾಗಿ 60 ಇನ್ನಿಂಗ್ಸ್‌ಗಳಲ್ಲಿ ಗರಿಷ್ಠ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದೇ ರೀತಿ, ವೆಸ್ಟ್ ಇಂಡೀಸ್ ಎಡಗೈ ಬ್ಯಾಟ್ಸ್‌ಮನ್ ಶಿವನಾರಾಯಣ್ ಚಂದ್ರಪಾಲ್ ಕೂಡ ವೆಸ್ಟ್ ಇಂಡೀಸ್ ತಂಡಕ್ಕೆ 60 ಬಾರಿ ಗರಿಷ್ಠ ಸ್ಕೋರರ್ ಆಗಿದ್ದಾರೆ. ಜೋ ರೂಟ್ 59 ಬಾರಿ ಈ ಸಾಧನೆ ಮಾಡಿದ್ದಾರೆ.

ಜೋ ರೂಟ್​ 152 ಬಾಲ್​ನಲ್ಲಿ 118 ರನ್​, ಜಾನಿ ಬ್ರೆಸ್ಟೋವ್​ 78 ಬಾಲ್​ನಲ್ಲಿ 78 ರನ್ ಮತ್ತು ಝಾಕ್ ಕ್ರಾಲಿ ​73 ಬಾಲ್​ನಲ್ಲಿ 61 ರನ್​ ಗಳಿಸಿದ್ದಾರೆ. ಇದರಿಂದ 393 ರನ್​ಗೆ ಇಂಗ್ಲೆಂಡ್​ ಡಿಕ್ಲೇರ್​ ಪ್ರಕಟಿಸಿತು. ನಂತರ ಆಸ್ಟ್ರೇಲಿಯಾ ಎರಡನೇ ದಿನವಾದ ಇಂದು ಬ್ಯಾಟಿಂಗ್​ ಮಾಡುತ್ತಿದ್ದು, 62ಕ್ಕೆ 2 ವಿಕೆಟ್​ ಕಳೆದುಕೊಂಡು ಆಡುತ್ತಿದೆ.

ಪಂದ್ಯದಲ್ಲಿ: ನಿನ್ನೆ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್​ 8 ವಿಕೆಟ್​ ನಷ್ಟಕ್ಕೆ 393 ರನ್​ ಗಳಿಸಿ ಡಿಕ್ಲೇರ್​ ಹೇಳಿದೆ. ಮೆಕಲಮ್ ಕೋಚ್​ ಆದ ನಂತರ ಇಂಗ್ಲೆಂಡ್ ತಂಡ ಏಕದಿನ ಪಂದ್ಯದ ರೀತಿಯಲ್ಲಿ ರನ್​ ಕಲೆಹಾಕುತ್ತಿದ್ದು, ಎಲ್ಲರೂ ಬಿರುಸಿನ ಆಟವನ್ನು ಆಡುತ್ತಿದ್ದಾರೆ.