ಕೈಕೊಟ್ಟ ಕೊಟ್ಟಿದೆ ಮುಂಗಾರು,ಎಪಿಎಂಸಿ ಮಾರುಕಟ್ಟೆಗೆ ತರಕಾರಿಯ ಆವಕ ಪ್ರಮಾಣವೂ ಕಡಿಮೆ…ಹೆಚ್ಚಿದೆ ತರಕಾರಿ ಬೆಲೆ..

ವಿಜಯಪುರ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಜಿಲ್ಲೆಯಲ್ಲಿ ಅನ್ನದಾತರು ಇನ್ನೂ ಬಿತ್ತನೆಯನ್ನೇ ಆರಂಭಿಸಿಲ್ಲ. ಜೊತೆಗೆ ಬಿಸಿಲಿನ ತಾಪಮಾನವೂ ಏರಿರುವ ಕಾರಣ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಆವಕ ಪ್ರಮಾಣವೂ ಕಡಿಮೆಯಾಗಿ ಸಗಟು ಮಾರುಕಟ್ಟೆಯಲ್ಲೇ ಬೆಲೆ ಗಗನಕ್ಕೇರಿದೆ.ವಿಜಯಪುರ ಜಿಲ್ಲೆಯ ಸುತ್ತಮುತ್ತಲಿನ ಭಾಗದಲ್ಲಿ ರೈತರು ತರಕಾರಿಯನ್ನು ಸಮೃದ್ಧವಾಗಿ ಬೆಳೆಯುತ್ತಾರೆ. ಆದರೆ ಮಳೆಯ ಅಭಾವದಿಂದ ತರಕಾರಿ ಬೆಳೆ ಒಣಗಿದ್ದು, ಮಾರುಕಟ್ಟೆಗೆ ಆವಕ ಪ್ರಮಾಣ ಗಣನೀಯ ಕ್ಷೀಣಿಸಿದೆ. ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದರ ಪರಿಣಾಮ ವಾರದ ಸಂತೆಯಲ್ಲೂ ತರಕಾರಿ […]

ನಟ ಜಗ್ಗೇ​ಶ್​ಗೆ 6 ವಾರ ದಿಗ್ಬಂಧನ ಅಚಾತುರ್ಯ ನಡಿಗೆಯಿಂದ ಪಾದದ ಮೂಳೆ ಮುರಿತ.. !

ನಟ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ನವರಸ ನಾಯಕ ಜಗ್ಗೇಶ್​ ಅವಸರದ ನಡಿಗೆಯಿಂದ ಕಾಲು ಮುರಿದುಕೊಂಡಿದ್ದಾರೆ‌. ಈ ವಿಷಯವನ್ನು ಸ್ವತಃ ಜಗ್ಗೇಶ್ ಅವರೇ ಸೋಷಿಯಲ್ ಮೀಡಿಯಾದ ಮೂಲಕ ತಿಳಿಸಿದ್ದಾರೆ.ನವರಸ ನಾಯಕ ಜಗ್ಗೇಶ್​ ಅವಸರದ ನಡಿಗೆಯಿಂದ ಕಾಲು ಮುರಿದುಕೊಂಡಿದ್ದಾರೆ‌. ಈ ವಿಷಯವನ್ನು ನಟ ಸೋಷಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ. ಕಾಲು ಮುರಿದುಕೊಂಡು ಚಿಕಿತ್ಸೆ ಪಡೆದುಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ಅವರು, “ಸಣ್ಣ ಅಚಾತುರ್ಯ ನಡಿಗೆಯಿಂದ ಪಾದದ ಮೂಳೆ ಮುರಿತ! 6 ವಾರದ ದಿಘ್ಭಂಧನ ನಡಿಗೆಗೆ” ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟ ಜಗ್ಗೇಶ್​ […]

ತಮ್ಮದೇ ತಂಡದ ಆಟಗಾರನ ದಾಖಲೆ ಮುರಿದ ರೋಟ್​ : ತಂಡಕ್ಕಾಗಿ ಏಕಾಂಗಿ ಪ್ರದರ್ಶನ

ನವದೆಹಲಿ: ಇಂಗ್ಲೆಂಡ್ ತಂಡದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್ ಮನ್ ಜೋ ರೂಟ್ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಒಂದರ ಹಿಂದೆ ಒಂದರಂತೆ ಕ್ರಿಕೆಟ್ ದಾಖಲೆಗಳನ್ನೂ ನಿರ್ಮಿಸುತ್ತಿದ್ದಾರೆ.ನಿನ್ನೆ ಆರಂಭವಾದ ಆಶಸ್​ ಸರಣಿಯ ಮೊದಲ ದಿನ 393 ರನ್​ 8 ವಿಕೆಟ್​ ಕಳೆದುಕೊಂಡು ಇಂಗ್ಲೆಂಡ್​ ಡಿಕ್ಲೇರ್​​ ಘೋಷಿಸಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಆಶಸ್​ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಮತ್ತೊಂದು ಮೈಲಿಗಲ್ಲನ್ನು ತಲುಪಿದ್ದಾರೆ. ಇದು ಮತ್ತೊಮ್ಮೆ ಅವರ […]

ನೀರಿನ ಸಮಸ್ಯೆಯಿಂದ ಹೈರಾಣಾದ ಜನತೆ: ಖಾಲಿ ಕೊಡಗಳೊಂದಿಗೆ ಅಂಬಲಪಾಡಿ ಗ್ರಾಪಂ ಕಚೇರಿಗೆ ಮುತ್ತಿಗೆ

ಉಡುಪಿ: ಕಳೆದೆರಡು ತಿಂಗಳುಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಅಂಬಲಪಾಡಿ ಗ್ರಾಮ ಪಂಚಾಯತ್ ಕಚೇರಿಗೆ ಶನಿವಾರ ಖಾಲಿ ಕೊಡದೊಂದಿಗೆ ನುಗ್ಗಿದ ಗ್ರಾಮಸ್ಥರು, ಕಚೇರಿಯೊಳಗೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ಕಿದಿಯೂರು ಗ್ರಾಮದ ದಿಡ್ಡಿ ಮನೆಗಳಿಗೆ ಕಳೆದ ಎರಡು ತಿಂಗಳುಗಳಿಂದ ಸಮರ್ಪಕವಾಗಿ ಗ್ರಾಪಂ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಕಚೇರಿ ಆವರಣಕ್ಕೆ ಆಗಮಿಸಿದರು. ಗ್ರಾಪಂ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದ ಮಹಿಳೆಯರು ನೇರವಾಗಿ ಕೊಡಗಳೊಂದಿಗೆ […]

ಇಂಡಿಯನ್ ಆರ್ಮಿ ಸೇವೆಗೆ ಅಂಕೋಲಾದಿಂದ ತೆರಳಿದ 17 ಶ್ವಾನಗಳು..!

ಶ್ವಾನದ ಮಾಲೀಕರಾದ ರಾಘವೇಂದ್ರ ಭಟ್ ಹಾಗೂ ರಾಜೇಶ್ವರಿ ಭಟ್ ಮಾತನಾಡಿದರು. ಕಾರವಾರ: ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ.ಅಂಕೋಲಾದಿಂದ ಇಂಡಿಯನ್ ಆರ್ಮಿ ಸೇವೆಗೆ ಬೆಲ್ಜಿಯಂ ಮೆಲಿನೋಯ್ಸ್ ತಳಿಯ 17 ಶ್ವಾನಗಳು ತೆರಳಿದವು. ಶ್ವಾನಗಳ ಮಾಲೀಕರ ಕುಟುಂಬಸ್ಥರಲ್ಲಿ ಸಂತಸದ ವಾತಾವರಣಕ್ಕೆ ಕಾರಣವಾಯಿತು. ಇಂತಹ ನಿಯತ್ತಿನ ಕಾರಣಕ್ಕೆ ಇದೀಗ ಅಂಕೋಲಾದಿಂದ 17 ಶ್ವಾನಗಳು ಅಸ್ಸೋಂ ಇಂಡಿಯನ್ ಆರ್ಮಿಗೆ ಸೇರ್ಪಡೆಯಾಗಿದ್ದು, ಮನುಷ್ಯರಂತೆ ಪ್ರಾಣಿಗಳಿಗೂ ದೇಶ ಭಕ್ತಿ ಇದೆ ಎಂಬುದನ್ನು ತೋರಿಸಲು ಮುಂದಾಗಿವೆ. ಹೌದು, ಅಂಕೋಲಾ ಬಾವಿಕೇರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ […]