ನಟ ರಾಕಿಂಗ್ ಸ್ಟಾರ್ ಯಶ್ ಅವರು ನಾಲ್ಕು ವರ್ಷದಿಂದ ಯಾವುದೇ ಹೊಸ ಸಿನಿಮಾವನ್ನು ಒಪ್ಪಿಕೊಲ್ಲದೆ, ಯಶ್ ತಮ್ಮನ್ನು ‘ಕೆಜಿಎಫ್’ ಸಿನಿಮಾಕ್ಕೆ ಸಂಪೂರ್ಣ ತೊಡಗಿಸಿಕೊಂಡಿದ್ದರು.
‘ಕೆಜಿಎಫ್’ ನಂತರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಯಶ್ ಅಭಿಮಾನಿಗಳಿಗೆ ಕುತೂಹಲ ಮೂಡಿಸಿತ್ತು. ಯಶ್ ಸಹ ತಮ್ಮ ಮುಂದಿನ ಸಿನಿಮಾ ಯಾವುದು? ಯಾರು ನಿರ್ದೇಶಕ? ಎಂಬ ವಿಷಯವನ್ನು ಗೌಪ್ಯವಾಗಿಟ್ಟಿದ್ದರು. ಆದರೆ ಇದೀಗ ಎಲ್ಲವೂ ಬಹಿರಂಗವಾಗಿದೆ.
ಯಶ್ ಅವರ ಹುಟ್ಟುಹಬ್ಬ ದಿನದಂದು ಯಶ್ ತಮ್ಮ ಹೊಸ ಸಿನಿಮಾದ ಬಗ್ಗೆ ತಿಳಿಸಿದ್ದಾರೆ. ನಿರ್ದೇಶಕ ನರ್ತನ್, ಯಶ್ ಅವರ 19ನೇ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಮಾತುಕತೆ, ಒಪ್ಪಂದ ಎಲ್ಲವೂ ಮುಗಿದಿದ್ದು, ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ನರ್ತನ್, ”ಹುಟ್ಟುಹಬ್ಬದ ಶುಭಾಶಯ ಯಶ್ ಸರ್, ನಿಮ್ಮನ್ನು ಸೆಟ್ನಲ್ಲಿ ನೋಡಲು ಕಾತರನಾಗಿದ್ದೇನೆ. ಯಶ್ ನಟನೆಯ 19 ನೇ ಸಿನಿಮಾ ‘ಯಶ್19’ ಟೀಸರ್ ಮುಂದಿನ ವರ್ಷ ಜ.8 ಯಶ್ ಅವರ ಹುಟ್ಟುಹಬ್ಬದಂದು ಬಿಡುಗಡೆ ಆಗಲಿದೆ” ಎಂದಿದ್ದಾರೆ.
ಯಶ್ ಅವರ ‘ಕೆಜಿಎಫ್ ‘ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಸಿನಿಮಾವು ಏಪ್ರಿಲ್ 14 ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇದ್ದು, ಕೇವಲ ಯಶ್ಗೆ ಮಾತ್ರವಲ್ಲ, ದೇಶದ ಸಿನಿಪ್ರೇಮಿಗಳಿಗೆ ಕುತೂಹಲ ಮೂಡಿಸಿದೆ.












